ಸಿಲಿಕಾನ್ ಸಿಟಿಯಲ್ಲಿ ಕಾಮದಾಟ ಆಡಿದ ಕಮ್ಮನಹಳ್ಳಿ ಕಾಮುಕರು ಬಳಸಿದ ಬೈಕ್ ಪಾಂಡಿಚೆರಿ ರಿಜಿಸ್ರ್ಟೇಷನ್‍ದಾಗಿದೆ.

0
2083

ಸಿಲಿಕಾನ್ ಸಿಟಿಯಲ್ಲಿ ಕಾಮದಾಟ ಆಡಿದ ಕಮ್ಮನಹಳ್ಳಿ ಕಾಮುಕರು ಬಂಧನವಾಗಿದ್ದಾರೆ. ಕಾನೂನಿನ ಭಯವಿಲದೇ ನಡುರಾತ್ರಿ ಕೀಚಕ ಕೃತ್ಯ ಎಸಗಿದ್ದ ನಾಲ್ವರರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಮೂಲತಃ ತಮಿಳುನಾಡು ಮತ್ತು ಕೇರಳದವರು. ಕನ್ನಡಿಗರ ಮೇಲೆ ಗೂಬೆ ಕುರಿಸುತಿದ್ದ ಮಾಧ್ಯಮದವರಿಗೆ ಹಾಲು ಕುಡಿದ್ದಷ್ಟು ಸಂತೋಷ ವಾರಿಗಬೇಕು!!

ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳ ಬೆನ್ನತ್ತಿದ್ದ ಬೆಂಗಳೂರು ಪೊಲೀಸರು ಅಯ್ಯಪ್ಪ, ಲೆನೋ, ಸೋಮ ಅಲಿಯಾಸ್ ಚಿನ್ನು ಹಾಗೂ ರಾಜು ಎಂಬ ನಾಲ್ವರನ್ನು ಬಂಧಿಸಿದ್ದಾರೆ. ಅಯ್ಯಪ್ಪ ಹಾಗೂ ಲೆನೋ ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ.

ಅಯ್ಯಪ್ಪ ಬೈಕ್‍ನಲ್ಲೇ ಕುಳಿತಿದ್ದರೆ, ಲೇನೋ ಯುವತಿಯನ್ನ ಎಳೆದಾಡಿ ಲೈಂಗಿಕ ದೌರ್ಜನ್ಯ ನೀಡಿದ್ದ. ಲೆನೋ ಹಾಗೂ ಅಯ್ಯಪ್ಪ ಇಬ್ಬರೂ ಪ್ರೇಜರ್ ಟೌನ್ ನಿವಾಸಿಗಳಾಗಿದ್ದು, ಕೃತ್ಯಕ್ಕೆ ಬಳಸಿದ ಬೈಕ್ ಪಾಂಡಿಚೆರಿ ರಿಜಿಸ್ರ್ಟೇಷನ್‍ದಾಗಿದೆ.

ಪ್ರಮುಖ ಆರೋಪಿ ಲೆನೋ ಬಿ.ಕಾಂ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದು, ವಿದ್ಯಾವಂತನಾಗಿದ್ದುಕೊಂಡೇ ಈ ಕೃತ್ಯದಲ್ಲಿ ಪಾಲ್ಗೊಂಡಿದ್ದಾನೆ. ಇನ್ನೊಬ್ಬ ಆರೋಪಿ ಸೋಮ ಸುಲ್ತಾನ್ ಭಾಯ್ ಅನ್ನೋರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ರಾಜುಗೆ ಮಾತ್ರ ಕೆಲಸ ಇಲ್ಲ.

ಹೊಸ ವರ್ಷದ ದಿನ 2.40ರ ಸುಮಾರಿಗೆ ಕಮ್ಮನಹಳ್ಳಿಯಲ್ಲಿ ಆಕ್ಟೀವ್ ಹೋಂಡಾದಲ್ಲಿ ಬಂದಿದ್ದ ಕಾಮುಕರು ಯುವತಿಯನ್ನು ಹಿಡಿದು ಲೈಂಗಿಕ ದೌರ್ಜನ್ಯವೆಸಗಿದ್ದರು. ಘಟನೆಯ ದೃಶ್ಯಾವಳಿ ಸ್ಥಳೀಯ ನಿವಾಸಿ ಪ್ರಶಾಂತ್ ಎಂಬವರ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕಮ್ಮನಹಳ್ಳಿಯಲ್ಲಿ ನಡೆದ ಈ ದುರ್ಘಟನೆಯ ಸುದ್ದಿ ರಾಷ್ಟ್ರವ್ಯಾಪಿ ಹರಡಿದ್ದು, ಕ್ರಮ ಕೈಗೆತ್ತಿಕೊಂಡ ಎಸಿಪಿ ರವಿಕುಮಾರ್ ನೇತೃತ್ವದ ತಂಡದಿಂದ ಸದ್ಯ ಆರೋಪಿಗಳ ಬಂಧನವಾಗಿದೆ.

ಸಿಸಿಟಿವಿ ಫೂಟೇಜ್ ನೋಡಿ ಕೇಸ್ ದಾಖಲಿಸಿಕೊಂಡರೂ ಕೂಡ ಯುವತಿ ಕಂಪ್ಲೆಂಟ್ ಕೊಡದೇ ಇದ್ದದ್ದು ಪೊಲೀಸರಿಗೆ ಕಷ್ಟವಾಗಿತ್ತು. ಹೀಗಾಗಿ ಹಳೇಕೇಸ್ ಲಿಸ್ಟ್‍ನಲ್ಲಿದವರನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳ ಮಾಹಿತಿ ಸಿಕ್ಕಿದೆ. ಕಿಡ್ನಾಪ್ ಮಾಡಿ ರೇಪ್ ಮಾಡೋದೇ ಅವರ ಸ್ಕೆಚ್ ಆಗಿತ್ತು ಅಂತ ತನಿಖೆಯ ವೇಳೆ ಗೊತ್ತಾಗಿದೆ. ಹೀಗಾಗಿ, ಕಾಮಾಂಧರಿಗೆ ತಕ್ಕಪಾಠ ಕಲಿಸಲು ಮುಂದಾಗಿರೋ ಪೊಲೀಸ್ರು ಅತ್ಯಾಚಾರ ಯತ್ನದ ಕೇಸ್ ದಾಖಲಿಸೋ ಸಾಧ್ಯತೆಗಳಿವೆ.