ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ; ಪರಿಣಾಮಕಾರಿ ಕಲಿಕೆಗೆ ಮಾತೃಭಾಷೆಯಲ್ಲಿ ಬೋಧಿಸುವುದು ಮುಖ್ಯವೆಂದ ಕೇಂದ್ರದ ಮಂತ್ರಿಗಳು.!

0
273

ಕನ್ನಡ ಸೇರಿದಂತೆ ದೇಶದ ಎಲ್ಲ ಸ್ಥಳೀಯ ಮಾತೃ ಭಾಷೆಯಲ್ಲಿಯೇ ಶಿಕ್ಷಣ ನೀಡುವುದಕ್ಕೆ ಸಂಬಂಧ ಪಟ್ಟಂತೆ ಹಲವು ದಿನಗಳಿಂದ ಗೊಂದಲಗಳು ಮೂಡಿ ವಿವಾದ ಕೂಡ ಸೃಷ್ಟಿಯಾಗಿತ್ತು, ಕೇಂದ್ರ ಸರ್ಕಾರ ಉದ್ದೇಶಿತ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಯೇ ಪ್ರಾಥಮಿಕ ಶಿಕ್ಷಣ ಮಾಧ್ಯಮವಾಗಬೇಕೆಂದು ಹೇಳಿರುವುದಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ರಾಜ್ಯಸಭೆಯಲ್ಲಿ ಪ್ರಸ್ತಾವ ಮಾಡಿದ್ದಾರೆ. ಈಗಿರುವ ನೀತಿ ಕೂಡ ಅದೇ ಆಗಿದ್ದು, ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷಾ ಮಾಧ್ಯಮದಲ್ಲೇ ನೀಡುವುದು ಹೆಚ್ಚು ಪರಿಣಾಮಕಾರಿ ಎಂದು ತಿಳಿಸಿದ್ದಾರೆ.


Also read: ಇದೇ ಡಿಸೆಂಬರ್.1ರಿಂದಲೇ ಎಲ್ಲಾ ವಾಹನಗಳಿಗೆ ಫಾಸ್ಟ್‌ ಟ್ಯಾಗ್ ಕಡ್ಡಾಯ; ಇದನ್ನು ಎಲ್ಲಿ ಹೇಗೆ, ಪಡೆಯಬೇಕು ದಾಖಲಾತಿಗಳೇನು ಬೇಕು??

ಹೌದು ಮಾತೃಭಾಷೆಯೇ ಪ್ರಾಥಮಿಕ ಶಿಕ್ಷಣದ ಮಾಧ್ಯಮವಾಗಿರಬೇಕು ಎಂಬುದು ಕೇಂದ್ರ ಸರಕಾರದ ಉದ್ದೇಶಿತ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಅಂಶವಾಗಿದೆ. ಈ ಕುರಿತು ಗುರುವಾರ ರಾಜ್ಯಸಭೆಗೆ ಮಾಹಿತಿ ನೀಡಿರುವ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಅವರು, ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷಾ ಮಾಧ್ಯಮದಲ್ಲೇ ನೀಡುವುದು ಹೆಚ್ಚು ಪರಿಣಾಮಕಾರಿಯೂ ಆಗಿದ್ದು ಈಗಿರುವ ವ್ಯವಸ್ಥೆಯನ್ನೇ ಮುಂದುವರಿಸುವುದು ಒಳ್ಳೆಯದು ಎಂದು ಹೇಳಿದ್ದು. ಬಹುತೇಕವಾಗಿ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಮುಂದುವರೆಯುವುದು ಖಚಿತವಾಗಿದೆ.
ಕೇಂದ್ರ ಸರಕಾರವು ಕೂಡ 1968 ಹಾಗೂ 1986ರಲ್ಲಿರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಗಳು ಸಹ ಮಾತೃಭಾಷೆಯೇ ಪ್ರಾಥಮಿಕ ಶಿಕ್ಷಣದ ಮಾಧ್ಯಮವಾಗಿರಬೇಕು ಎಂದು ಹೇಳಿವೆ. ಈಗಿನ ಉದ್ದೇಶಿತ ನೀತಿ ಸಹ ಇದೇ ನೀತಿಯನ್ನು ಮುಂದುವರಿಸಲಿದೆ ಎಂದು ಸ್ಪಷ್ಟಪಡಿಸಿದರು. ಇಸ್ರೊ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್‌ ನೇತೃತ್ವದ ಸಮಿತಿಯು ಉದ್ದೇಶಿತ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಿದ್ಧಪಡಿಸಿದೆ. ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಶಿಕ್ಷಣ ಸಚಿವರು, ಅಧಿಕಾರಿಗಳು ಶೈಕ್ಷಣಿಕ ವಲಯಕ್ಕೆ ಸಂಬಂಧಿಸಿದ ಪ್ರತಿಯೊಬ್ಬರ ಸಲಹೆ ಪಡೆದು ಕರಡು ರೂಪಿಸಲಾಗಿದೆ.


Also read: ಇಬ್ಬರು ಹೆಣ್ಣು ಮಕ್ಕಳನ್ನು ಅಕ್ರಮ ಬಂಧನದಲ್ಲಿಟ್ಟುಕೊಂಡ ಆರೋಪ, ನಿತ್ಯಾನಂದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ದಂಪತಿಗಳು.!

ಕರಡು ವೆಬ್‌ಸೈಟ್‌ನಲ್ಲಿಲಭ್ಯವಿದ್ದು, ಈವರೆಗೆ ಎರಡು ಲಕ್ಷ ಜನ ಸಲಹೆ ನೀಡಿದ್ದಾರೆ. ಪ್ರತಿ ಸಲಹೆಯನ್ನೂ ವಿವರವಾಗಿ ವಿಶ್ಲೇಷಿಸಲಾಗುತ್ತದೆ. ಅಂತಿಮ ಕರಡಿನಲ್ಲಿಸಾರ್ವಜನಿಕರು ನೀಡಿರುವ ಸಲಹೆಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಮಾತೃಭಾಷೆಗೆ ಯುನೆಸ್ಕೊ ಕೂಡ ಒತ್ತು ನೀಡಿದ್ದು ಯುನೆಸ್ಕೊ 1953ರಿಂದಲೇ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷಾ ಮಾಧ್ಯಮದಲ್ಲಿನೀಡಬೇಕು ಎಂದು ಪ್ರತಿಪಾದಿಸುತ್ತ ಬಂದಿದೆ. ಆರಂಭದಿಂದಲೂ ಮಾತೃಭಾಷಾ ಮಾಧ್ಯಮದಲ್ಲೇ ಭೋಧಿಸಿದರೆ ಮಗು ಹೆಚ್ಚು ಪರಿಣಾಮಕಾರಿಯಾಗಿ ಕಲಿಯುತ್ತದೆ. ಮಗುವಿನ ಸಂವಹನ ಸಾಮರ್ಥ್ಯ ಸಹ ವೃದ್ಧಿಯಾಗುತ್ತದೆ ಎಂಬುದನ್ನು ಅನೇಕ ಸಂಶೋಧನೆಗಳು ದೃಢಪಡಿಸಿವೆ. ಅಲ್ಲದೇ, ಮಾತೃಭಾಷಾ ಮಾಧ್ಯಮದಲ್ಲಿಬೋಧನೆ ಇರುವ ಕಡೆಗಳಲ್ಲಿಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಬಹಳ ಕಡಿಮೆ ಎಂಬುದೂ ದೃಢಪಟ್ಟಿದೆ.


Also read: ಧೂಮಪಾನಿ ವ್ಯಕ್ತಿಯ ಶ್ವಾಸಕೋಶ ನೋಡಿ ವೈದ್ಯೆರೆ ಶಾಕ್; ಈ ಭಯಾನಕ ಕಪ್ಪು ಶ್ವಾಸಕೋಶ ನೋಡಿದರೆ ಜೀವನದಲ್ಲಿ ಸಿಗರೇಟ್ ನೆನಪಿಗೆ ಬರೋದಿಲ್ಲ.!

ಅದೇ ರೀತಿ ಉದ್ದೇಶಿತ ನೀತಿಯಲ್ಲಿಯೂ ಕೂಡ ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಮಾಧ್ಯಮವಾಗಿ ಇರಬೇಕು ಎಂದು ಹೇಳಲಾಗಿದೆ. ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ನೇತೃತ್ವದ ಸಮಿತಿ ಶೈಕ್ಷಣಿಕ ವಲಯಕ್ಕೆ ಸಂಬಂಧಿಸಿದವರೊಂದಿಗೆ ಸಲಹೆ ಪಡೆದು ಉದ್ದೇಶಿತ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಿದ್ಧಪಡಿಸಿದೆ. ಮಾತೃಭಾಷೆಯಲ್ಲಿ ಬೋಧಿಸಿದರೆ ಮಗು ಹೆಚ್ಚು ಪರಿಣಾಮಕಾರಿಯಾಗಿ ಕಲಿಯುತ್ತದೆ ಎಂದು ಸಂಶೋಧನೆಗಳು ಹೇಳಿವೆ.