ಒನ್ ನೇಷನ್ ಒನ್ ಎಲೆಕ್ಷನ್, `ಒನ್ ನೇಷನ್ ಒನ್ ರೇಷನ್’ ಯೋಚನೆಯಲ್ಲಿರುವ ನರೇಂದ್ರ ಮೋದಿ 2025ಕ್ಕೆ ಸಕ್ರಿಯ ರಾಜಕೀಯದಿಂದ ನಿವೃತ್ತಿ?

0
407

ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದು, ಜಪಾನ್ ನ ಒಸಾಕದಲ್ಲಿ ನಡೆಯುತ್ತಿರುವ ಜಿ-20 ದೇಶಗಳ ಶೃಂಗಸಭೆ ಭಾಗವಹಿಸಿದ ಮೋದಿಯವರು ಅಮೇರಿಕಾ ಜಪಾನ್ ದೇಶಗಳ ಜೊತೆ ಮಹತ್ವದ ವ್ಯವಹಾರಗಳಿಗೆ ಮಾತುಕತೆ ನಡೆಸಿದ್ದಾರೆ. ಈ ಸಭೆಯಲ್ಲಿವೂ ಕೂಡ ಮೋದಿಯವರ ಅಲೆ ಜೋರಾಗಿದ್ದು, ನೆರೆದೇಶದ ಪ್ರಧಾನಿಗಳು ಮೋದಿಯವರನ್ನು ಹೊಗಳುತ್ತಿದ್ದಾರೆ. ಈ ಹಿನ್ನೆಲೆಯಲ್ಲೇ ಮೋದಿಯವರ ರಾಜಕೀಯ ಸುದ್ದಿ ಹರಡಿದ್ದು 2025ಕ್ಕೆ ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗಲಿದ್ದಾರೆ. ಎನ್ನುವ ಸುದ್ದಿ ಹರಡಿದೆ.

Also read: ಇತಿಹಾಸ ಸೃಷ್ಟಿಸಿ ಗೆಲುವು ಸಾಧಿಸಿರುವ ಮೋದಿ ಸರ್ಕಾರ ತಕ್ಷಣ ಜಾರಿಗೊಳಿಸುವ ಯೋಜನೆಗಳೇನು? ಎನ್​ಡಿಎ ಸರ್ಕಾರದ ಮುಂದಿರುವ ದೊಡ್ಡ ಸವಾಲುಗಳು ಯಾವವು??

ಹೌದು ಇಡಿ ಪ್ರಪಂಚವೇ ಪ್ರಧಾನಿ ಮೋದಿಯವರನ್ನು ಬಾಯಿ ತೆರೆದು ನೋಡುತ್ತಿದ್ದು, ಇಂತಹ ನಾಯಕನನ್ನು ಪಡೆದಿರುವುದು ನಮ್ಮ ಪುಣ್ಯವೆನ್ನುತ್ತಿದ್ದಾರೆ. ಇನ್ನೂ ವಿರೋಧಿ ದೇಶಗಳಂತೂ ಪ್ರತಿ ನಿಮಿಷಕ್ಕೂ ಭಾರತದ ನೆನಪಿನಲ್ಲಿ ಜೀವನ ಮಾಡುತ್ತಿವೆ. ಮೋದಿ ಇರುವ ವರೆಗೆ ಭಾರತದ ಕಡೆಗೆ ತಲೆಹಾಕುವುದು ಸಾಧ್ಯವಾಗದ ಮಾತು ಎಂದು ಹೇಳುತ್ತಿವೆ. ಆದರೆ ಪ್ರಧಾನಿಯವರು ತಮ್ಮ ರಾಜಕೀಯ ನಿವೃತ್ತಿಯ ಬಗ್ಗೆ ಎಲ್ಲಿವೂ ತಿಳಿಸಿಲ್ಲ ಆದರೆ ಸಧ್ಯಹರಡಿದ ವರದಿಯ ಪ್ರಕಾರ ಮೋದಿಯವರು 2025ಕ್ಕೆ ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗಲಿದ್ದಾರೆ ಎನ್ನುವುದು ಚರ್ಚೆಯಾಗುತ್ತಿದ್ದೆ.

2025ಕ್ಕೆ ಮೋದಿ ರಾಜಕೀಯ ನಿವೃತ್ತಿ?

Also read: ಗ್ರಾಮ ವಾಸ್ತವ್ಯದಲ್ಲಿ ಸಿಎಂ ದರ್ಪ; ಮೋದಿಗೆ ವೋಟ್‌ ಹಾಕಿ ನಮ್‌ ಹತ್ರ ಸಮಸ್ಯೆ ಹರಿಸಲು ಬರ್ತೀರಾ, ನಿಮಗೆಲ್ಲಾ ಲಾಠಿ ಚಾರ್ಜ್‌ ಮಾಡಿಸ್ಬೇಕಾ ಎಂದ ಕುಮಾರಸ್ವಾಮಿ..

ಹೌದು ಮೋದಿ ಅವರು ರಾಜಕೀಯದಿಂದ ನಿವೃತ್ತಿಯಾಗಲಿದ್ದಾರೆ ಎಂಬ ಚರ್ಚೆ ಇದೀಗ ಎದ್ದಿದ್ದು, 2022ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ತುಂಬುತ್ತೆ. 2022ರ ವರ್ಷಾಂತ್ಯದಲ್ಲಿ ‘ಒಂದು ದೇಶ, ಒಂದು ಚುನಾವಣೆ’ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆ ಹೆಚ್ಚಿದೆ. ಎಲ್ಲಾ ಅಂದುಕೊಂಡಂತೆ ಆದರೆ, 2022ರ ಅಂತ್ಯದಲ್ಲಿ, ಇಲ್ಲವೇ 2023ರ ಆರಂಭದಲ್ಲಿ ದೇಶದ ಸಂಸತ್ತು ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯಲಿದೆ. ಮಾತ್ರವಲ್ಲದೆ, ವಿವಿಧ ಯೋಜನೆಗಳನ್ನು ಪೂರ್ಣಗೊಳಿಸುವ ಮೂಲಕ ಆರ್‍ಎಸ್‍ಎಸ್ ಹಾಗೂ ಬಿಜೆಪಿಗೆ ಕೊಡುಗೆ ನೀಡಿ ನಿವೃತ್ತಿ ಹೊಂದಲಿದ್ದಾರೆ ಎಂದು ಹೇಳಲಾಗುತ್ತಿದೆ.

ಜನಪ್ರಿಯ ಯೋಜನೆಗಳ ಮೂಲಕ ನಿವೃತ್ತಿ?

Also read: ಪ್ರಧಾನಿ ಮೋದಿ ಅವರ ಮೊದಲ ಕ್ಯಾಬಿನೆಟ್‍ನಲ್ಲೇ ದೇಶದ ರೈತರಿಗೆ, ಶ್ರಮಿಕ ವರ್ಗದವರಿಗೆ ಭರ್ಜರಿ ಗಿಫ್ಟ್..

ಲೋಕಸಭಾ ಚುನಾವಣೆಯಂತೆ 2021ಕ್ಕೆ ರಾಜ್ಯಸಭೆಯಲ್ಲಿ ಬಹುಮತ ಸಾಧಿಸಲಿರುವ ಮೋದಿ ಸರ್ಕಾರ, ವಿಪಕ್ಷಗಳ ವಿರೋಧ ಲೆಕ್ಕಿಸದೇ `ಒಂದು ದೇಶ, ಒಂದು ಚುನಾವಣೆ’ ವ್ಯವಸ್ಥೆ ಜಾರಿಗಾಗಿ ಸಂವಿಧಾನ ತಿದ್ದುಪಡಿ ಪ್ರಕ್ರಿಯೆ ಪೂರ್ಣಗೊಳಿಸಲು ಯೋಜನೆ ರೂಪಿಸಿದೆ. ಈ ಮಧ್ಯೆ, ಜನರಿಗೂ ಸಹ ಹಲವು ಜನಪ್ರಿಯ ಯೋಜನೆಗಳನ್ನು ರೂಪಿಸುವ ಮೂಲಕ ಕೊಡುಗೆ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅದರಂತೆ ಒನ್ ನೇಷನ್.. ಒನ್ ಎಲೆಕ್ಷನ್ ಮಾದರಿಯಲ್ಲೇ `ಒನ್ ನೇಷನ್ ಒನ್ ರೇಷನ್’ ಎಂದು ಭ್ರಷ್ಟಾಚಾರ ತಡೆಗೆ ಒಂದೇ ರೇಷನ್ ಕಾರ್ಡ್ ಮಾಡಲು ಚಿಂತನೆ ನಡೆದಿದೆ. ಅಲ್ಲದೆ, 2025ಕ್ಕೆ ಪ್ರಧಾನಿ ಮೋದಿಗೆ 75 ವರ್ಷ ತುಂಬುತ್ತದೆ. ಜೊತೆಗೆ ಆರ್‍ಎಸ್‍ಎಸ್ ಕೂಡ ಶತಮಾನೋತ್ಸವ ಆಚರಿಸಿಕೊಳ್ಳಲಿದೆ. ಇದಕ್ಕಾಗಿ ದೇಶಾದ್ಯಂತ ಬಿಜೆಪಿ ಅಧಿಕಾರವನ್ನು ವಿಸ್ತರಿಸುವ ಮೂಲಕ ಆರ್‍ಎಸ್‍ಎಸ್‍ಗೆ ಕೊಡುಗೆ ನೀಡಿ ನಿವೃತ್ತಿ ಹೊಂದಲಿದ್ದಾರೆ ಎನ್ನಲಾಗಿದೆ.