ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ, ಹಿಂದೆಂದೂ ನೋಡದ ಜನ ಸಾಗರ ಮೋದಿ ಜೊತೆಗಿತ್ತು!! “ಮೋದಿ ಮತ್ತೊಮ್ಮೆ”??

0
471

ದೇಶದ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣೆಗೆ ಇಂದಿನಿಂದ ರಣಕಹಳೆ ಊದಿದ್ದು ಉತ್ತರಪ್ರದೇಶದ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ಮೊದಲು ಮಾತನಾಡಿದ ನರೇಂದ್ರ ಮೋದಿಯವರು ‘ಹರಹರ ಮಹಾದೇವ’ ಘೋಷದೊಂದಿಗೆ ಭಾಷಣ ಆರಂಭಿಸಿದ ಮೋದಿ ನನ್ನದೊಂದು ಇಚ್ಛೆ ಇದೆ ಅದನ್ನು ಈಡೇರಿಸುತ್ತೀರಾ ಎಂದು ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯ ಜನರಿಗೆ ಪ್ರಶ್ನೆ ಮಾಡಿದ್ದಾರೆ.

Also read: ಮೊದಲ ಬಾರಿ ರಾಜಕೀಯ ಬಿಟ್ಟು ವಯಕ್ತಿಕ ಜೀವನದ ಬಗ್ಗೆ ನಟ ಅಕ್ಷಯ್ ಕುಮಾರ್ ಅವರ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ..

ಹೌದು ಇಡಿ ದೇಶದಲ್ಲೇ ಕುತೂಹಲ ಮೂಡಿಸಿರುವ ಉತ್ತರಪ್ರದೇಶದ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಎರಡನೇ ಬಾರಿಗೆ ಈ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಬನಾರಸ್ ಹಿಂದೂ ವಿವಿಗೆ ತೆರಳಿ ಪಂಡಿತ್ ಮದನ್ ಮೋಹನ್ ಮಾಳವೀಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಕಾಶಿಯ ಬೀದಿಗಳಲ್ಲಿ ಕೇಸರಿ ಕಹಳೆಯೊಂದಿಗೆ ಮೋದಿ 6 ಕಿ.ಮೀ ಮಹಾ ರೋಡ್ ಶೋ ನಡೆಸಿ ಗಂಗೆಯ ತಟಕ್ಕೆ ಆಗಮಿಸಿದರು.

ರೋಡ್ ಶೋ ವೇಳೆ ಲಂಕಾ ಘಾಟ್, ಅಸ್ಸಿ ಘಾಟ್, ಸೋನಾರ್‍ಪುರ, ಮದನಪುರ್ ಮಾರ್ಗವಾಗಿ ಸಾಗಿದ ಮೆರವಣಿಗೆಯ ರಸ್ತೆಯ ಇಕ್ಕೆಲ್ಲಗಳಲ್ಲೂ ಪುಷ್ಪವೃಷ್ಟಿ ಆಯಿತು. ಕಣ್ಣು ಹಾಯಿಸಿದ ದೂರವೂ ಜಮಾಯಿಸಿ ತಮ್ಮ ಪ್ರೀತಿ, ಅಭಿಮಾನವನ್ನು ಲಕ್ಷಾಂತರ ಅಭಿಮಾನಿಗಳು ತೋರಿಸಿದರು. ಎಲ್ಲ ಕಡೆ “ಹರ್ ಹರ್ ಮೋದಿ, ಘರ್ ಘರ್ ಮೋದಿ” ಜೈಕಾರ ಕೇಳಿಸುತಿತ್ತು. ನಾಮಪತ್ರ ಸಲ್ಲಿಕೆಗೆ ಮುನ್ನ ಬೂತ್‌ ಮಟ್ಟದ ಕಾರ್ಯಕರ್ತರನ್ನುದ್ದೇಶಿಸಿ ಪ್ರಧಾನಿ ಮಾತನಾಡಿದ ಅವರು ಬೂತ್ ಮಟ್ಟದ ಕಾರ್ಯಕರ್ತರಾಗಿ ಕೆಲಸ ಮಾಡಿದ ಅನುಭವವೂ ನನಗಿದೆ. ನಾನು ಆರಂಭಿಕ ದಿನಗಳಲ್ಲಿ ಪಕ್ಷದ ಪೋಸ್ಟರ್‌ಗಳನ್ನು ಗೋಡೆಗಳಿಗೆ ಅಂಟಿಸುವ ಕೆಲಸ ಮಾಡುತ್ತಿದ್ದೆ’ ಎಂದು ನೆನಪಿಸಿಕೊಂಡರು. ದೇಶದಲ್ಲೀಗ ಆಡಳಿತ ಪರ ಅಲೆ ಬೀಸುತ್ತಿದೆ ಎಂದು ಪ್ರಧಾನಿ ಹೇಳಿದರು.

ಗಂಗಾರತಿ ವಿಶೇಷತೆ ಏನು?

Also read: ಪ್ರಧಾನಿ ಕುರ್ಚಿ ಉಳಿಯುತ್ತೋ ಬಿಡುತ್ತೋ ಗೊತ್ತಿಲ್ಲ; ಒಂದೋ ನಾನು ಜೀವಂತವಾಗಿರಬೇಕು ಇಲ್ಲವೇ ಉಗ್ರರು ಜೀವಂತವಾಗಿರಬೇಕು ನರೇಂದ್ರ ಮೋದಿ..

ಭೂಲೋಕದಲ್ಲಿ ಎಲ್ಲಿ ನೆಲೆಸಲು ಬಯಸ್ತೀಯಾ ಎಂದು ಶಿವ ಕೇಳಿದಾಗ, ಪವಿತ್ರ ಪರಿಶುದ್ಧ ಪಾವನೆ ಗಂಗೆಯ ತಟವಾದ ವಾರಾಣಸಿಯನ್ನು ಪಾರ್ವತಿ ಆಯ್ಕೆ ಮಾಡಿಕೊಂಡು ಎಂದು ಪುರಾಣ ಹೇಳುತ್ತದೆ. ಮೂರು ಜನ್ಮಗಳ ಪಾಪ ಕಳೆದುಕೊಳ್ಳಲು ಗಂಗಾರತಿ ಪೂಜೆ ಮಾಡಲಾಗುತ್ತದೆ. ಪಂಚಭೂತಗಳ ಸಂಕೇತವಾಗಿ ಈ ಆರತಿ ನಡೆಯುತ್ತದೆ. ಒಂದು ಕಡೆ 5 ಅರ್ಚಕರು, ಇನ್ನೊಂದು ಕಡೆ 7 ಅರ್ಚಕರು ಆರತಿ ಮಾಡುತ್ತಾರೆ. ಸಪ್ತ ಋಷಿಗಳು ಗಂಗಾರತಿ ಮಾಡಿದ್ದರು ಎನ್ನುವುದರ ಪ್ರತೀಕವಾಗಿ 7 ಆರತಿ ಮಾಡಲಾಗುತ್ತದೆ. ಸಾವಿರಾರು ವರ್ಷಗಳಿಂದ ವಂಶಪಾರಂಪರ್ಯವಾಗಿ ನಡೆದುಕೊಂಡು ಬಂದ ಪದ್ಧತಿ ಇದಾಗಿದೆ.

ನನ್ನದೊಂದು ಆಸೆ ಈಡೇರಿಸುತ್ತೀರಾ?

Also read: ಮೋದಿ ಮುಖ ಸರಿ ಇಲ್ಲದ್ದಕ್ಕೆ ಪತ್ನಿಯೇ ಮೋದಿಯನ್ನು ಬಿಟ್ಟಿದ್ದಾರೆ; ಅವ್ರ ಮುಖ ನೋಡಿ ವೋಟ್ ಹಾಕಬೇಕೇ : ಕಾಂಗ್ರೆಸ್-ನ ಜಮೀರ್ ಅಹ್ಮದ್; ಇದು ದುರಹಂಕಾರದ ಮಾತು ಅಲ್ಲವೇ??

ವಾರಣಾಸಿಯಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಪುರುಷರಿಗಿಂತ ಶೇ.5 ರಷ್ಟು ಹೆಚ್ಚಿನ ಮಹಿಳೆಯರು ಮತದಾನ ಮಾಡಬೇಕು ಇದು ನನ್ನ ಆಸೆ ಈ ಆಸೆಯನ್ನು ಈಡೇರಿಸುತ್ತೀರಾ ಎಂದು ಮೋದಿ ಕೇಳಿದ್ದಾರೆ. ಲೋಕಸಭೆ ಚುನಾವಣೆಯನ್ನು ಗೆಲ್ಲಲು ಬೇಕಾಗಿರುವುದು ಜನರೇ ಹೊರತು ಹಣವಲ್ಲ ಜನರ ಜೊತೆ ಬೆರೆಯುವುದು, ಅವರ ಕಷ್ಟಗಳಿಗೆ ಸ್ಪಂದಿಸುವುದೇ ಮುಖ್ಯ ಇಡೀ ದೇಶವೇ ಮೋದಿ ಸರ್ಕಾರ ಮತ್ತೊಮ್ಮೆ ಬರಬೇಕು ಎಂದು ಬೇಡಿಕೊಳ್ಳುತ್ತಿದೆ. ನಮ್ಮ ಕಾರ್ಯಕರ್ತರು ಒಂದೊಮ್ಮೆ ಸೋಲನ್ನು ಕಂಡರೆ ಧೃತಿಗೆಡುವುದು ಬೇಡ, ಕೋಪದಲ್ಲಿ ಕಿತ್ತಾಡಿಕೊಳ್ಳುವುದು, ಬಡಿದಾಡುವುದು ಬೇಡ. ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.