ಪ್ರಧಾನಿಯ ಐತಿಹಾಸಿಕ ಭೇಟಿಗೆ ಸಜ್ಜಾದ ಧರ್ಮಸ್ಥಳ, ಏನೇನೆಲ್ಲಾ ಬದಲಾವಣೆ ಆಗುತ್ತಿದೆ ಗೊತ್ತ?

0
498

ವಿದ್ಯಾರ್ಥಿ: ಸರ್​ ನಾನು ಅಕ್ಟೋಬರ್​ 29 ರಂದು ಧರ್ಮಸ್ಥಳಕ್ಕೆ ಹೊರಟಿದ್ದೇನೆ.. ಹೀಗಾಗಿ ಒಂದು ದಿನ ಶಾಲೆಗೆ ಬರಲು ಆಗೋದಿಲ್ಲ.
ಶಿಕ್ಷಕ: 29 ರಂದು ಹೋಗ ಬೇಡ ಬೇರೆ ದಿನ ಹೋಗು ಬಿಡುವು ನೀಡುವೆ
ವಿದ್ಯಾರ್ಥಿ: ಯಾಕೆ ಸರ್​ ಏನು ಸಮಸ್ಯೆನಾ
ಶಿಕ್ಷಕ: ಸಮಸ್ಯೆ ಏನು ಇಲ್ಲ ದೇಶದ ಪ್ರಧಾನಿ ಧರ್ಮಸ್ಥಳಕ್ಕೆ ಭೇಟಿ ನೀಡ್ತಿದ್ದಾರೆ. ಹೀಗಾಗಿ ಅ. 28ರ ಶನಿವಾರ ರಾತ್ರಿ 9ರ ವರೆಗೆ ಹಾಗೂ ರವಿವಾರ ಅಪರಾಹ್ನ ಎರಡು ಗಂಟೆ ಬಳಿಕ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲು ದೇವಸ್ಥಾನ ಮಂಡಳಿ ತಿಳಿಸಿದೆ.
ವಿದ್ಯಾರ್ಥಿ: ಮೊದಲೇ ಹೇಳಿದ್ದು ಒಳ್ಳೆಯದೇ ಆಯ್ತು ಹಾಗಿದ್ರೆ. ನಿಮ್ಮ ಮೊಬೈಲ್​ ಕೊಡಿ ನಮ್ಮ ಮನೆಯವರೆಗೂ ಒಂದು ಫೋನ್​ ಮಾಡಿ ಹೇಳ್ತೀನಿ.
ಭಾರತದ ಪ್ರಧಾನಿ ನರೇಂದ್ರ ಮೋದಿ ಇದೇ 29 ರಂದು ಧರ್ಮಸ್ಥಳ ಹಾಗೂ ಉಜಿರೆಗೆ ಭೇಟಿ ನೀಡಲಿದ್ದಾರೆ. ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಸಮಾರಂಭ ನಡೆಯಲಿದ್ದು, ಇಲ್ಲಿ ಪ್ರಧಾನಿ ಕಾರ್ಯಾಲಯ ತಾತ್ಕಾಲಿಕ ಕಚೇರಿಯನ್ನು ತೆರೆದಿದೆ. ಅಲ್ಲದೆ ಪ್ರಧಾನಿ ಕಚೇರಿಯಲ್ಲಿ ಏನೆಲ್ಲಾ ಸೌಲಭ್ಯಗಳು ಸಿಗುತ್ತವೋ ಅವೆಲ್ಲಾ ಇಲ್ಲಿ ಲಭ್ಯವಾಗಲಿವೆ. ಹೀಗಾಗಿ BSNL ಹಾಗೂ ಮೆಸ್ಕಾಂನವರಿಗೆ ಪ್ರತ್ಯೇಕ ಸೂಚನೆಗಳನ್ನು ನೀಡಿ ದೂರವಾಣಿ, ವೈಫೈ, ನಿರಂತರ ವಿದ್ಯುತ್‌ ಸರಬರಾಜಿಗೆ ಸೂಚಿಸಲಾಗಿದೆ.
ಸಭೆಗೆ ಈ ಎನೆಲ್ಲಾ ಒಯ್ಯಬೇಕು, ಏನು ತೆಗೆದುಕೊಂಡು ಹೋಗಬಾರದು.
– ನೀರಿನ ಬಾಟಲ್​ ಕೊಂಡೊಯ್ಯಲು ಅವಕಾಶ ಇಲ್ಲ
– ಮೊಬೈಲ್​​ಗೆ ಅವಕಾಶ (ಜಾಮರ್​ ಇರುತ್ತದೆ)
– ಆಧಾರ ಕಾರ್ಡ್​ ಖಡ್ಡಾಯ
– VIP ಟಿಕೇಟ್​ ಹೊಂದಿದವರಿಗೂ ಆಧಾರ ಕಾರ್ಡ್​ ಖಡ್ಡಾಯ
ಮೊದಿ ಉಜರೇ ಕಾರ್ಯಕ್ರಮದ ವೇಳೆ ಧರ್ಮಸ್ಥಳಕ್ಕೆ ಭೇಟಿಯಾಗುವ ಕಾರ್ಯಕ್ರಮವಿದೆ. ಹೀಗಾಗಿ ಎಸ್​ಐಜಿ ತಂಡ ಹೆಗ್ಗಡೆ ಮನೆಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ್ರು. ಇನ್ನು ದೇವಸ್ಥಾನದ ನೌಕರರಿಗೆ ಮೋದಿರನ್ನು ನೋಡಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಮೊದಿ ದೇವರ ದರ್ಶನ ಪಡೆದು ರಸ್ತೆಯ ಮೂಲಕ ಉಜಿರೆಗೆ ತೆರಳಲಿದ್ದಾರೆ. ಹೀಗಾಗಿ ಧರ್ಮಸ್ಥಳದಿಂದ ಉಜಿರೆ ವರೆಗಿನ ಅಂಗಡಿಗಳನ್ನು ಮುಚ್ಚಲು ಧರ್ಮಸ್ಥಳ ಪೊಲೀಸರು ಅಂಗಡಿಯವರಿಗೆ ನೋಟಿಸ್​ ನೀಡಿದ್ದಾರೆ.