ಲಾಲ್ ಬಹದ್ದೂರ್ ಶಾಸ್ತ್ರಿ, ವಾಜಪೇಯಿ ನಂತರ ಪ್ರಧಾನಿ ಆದ ಮೇಲೂ ಬೃಹತ್ ಆಸ್ತಿ ಮಾಡದ ಏಕೈಕ ಪ್ರಧಾನಿ ಅಂದ್ರೆ ಮೋದಿ ಅನ್ಸುತ್ತೆ; ಮೋದಿ ಆಸ್ತಿ ವಿವರ ನೋಡಿ ನಿಮ್ಗೆ ಗೊತ್ತಾಗುತ್ತೆ!!

0
1293

ದೇಶದ ಅತ್ಯುನ್ನತ ಪದವಿಯಲ್ಲಿದ್ದರೂ ಕೂಡ ತನ್ನ ಕುಟುಂಬವನ್ನು ಶ್ರೀಮಂತಿಕೆಯ ಮಡಿಲಿನಲ್ಲಿ ಮಲಗಿಸಲು ಯೋಚನೆಯನ್ನು ಕೂಡ ಮಾಡದ ಮೋದಿಯವರು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳದೆ ನಿಸ್ವಾರ್ಥ ಸೇವೆಯಲ್ಲಿ ಸ್ವಚ್ಛ ಭಾರತದ ಕನಸನ್ನು ಕಂಡು ನನಸು ಮಾಡಿದ ನಮ್ಮ ಪ್ರಧಾನಿ ನರೇಂದ್ರ ಮೋದಿ. ಬಾಲ್ಯದಿಂದಲೇ ಜೀವನ ಮೌಲ್ಯ, ಸೇವಾ ಮನೋಭಾವ, ಸಮಾಜ ಸೇವೆಯನ್ನೇ ಧ್ಯೇಯವಾಗಿಸಿಕೊಂಡು ಆರ್.ಎಸ್.ಎಸ್ ಗರಡಿಯಲ್ಲಿ ಕಲಿತ ಶಿಸ್ತು ಇಂದು ಸಾಮಾಜಿಕ- ರಾಜಕೀಯದಲ್ಲಿ ದೇಶ-ವಿದೇಶದಲ್ಲಿ ಪ್ರಖ್ಯಾತಿಯನ್ನು ಪಡೆದಿರುವ ಮೋದಿಯವರು ಗಳಿಸಿದ ಆಸ್ತಿ, ಹಗರಣ, ರಜೆ, ಸ್ವಂತ ಮನೆ, ಅಧಿಕಾರ ನೋಡಿದ ಜನರು ಮೋದಿ ಮೋದಿ ಅನ್ನೋದು.

Also read: ಮೋದಿ ಸರ್ಕಾರದಿಂದ ಜನಸಾಮಾನ್ಯರಿಗೆ ಭರ್ಜರಿ ಬಂಪರ್ ಕೊಡುಗೆ, 6.5 ಲಕ್ಷ ವರಮಾನ ಬರುವವರೂ ಆದಾಯ ತೆರಿಗೆ ತೆರುವಂತಿಲ್ಲ!!

ಹೌದು ನರೇಂದ್ರ ದಾಮೋದರ ದಾಸ್ ಮೋದಿ ಅತಿ ಹೆಚ್ಚು ಕಾಲ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಇವರು ಇವರು 2014 ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ(ಎನ್.ಡಿ.ಎ. ಮೈತ್ರಿಕೂಟ) ಪಕ್ಷದ ವತಿಯಿಂದ ಸ್ಪರ್ಧಿಸಿ ಗೆದ್ದು ಭಾರತದ 14ನೇ ಪ್ರಧಾನಮಂತ್ರಿಯಾಗಿದ್ದಾರೆ. ಇವರು 18 ವರ್ಷದ ರಾಜಕೀಯ ಜೀವನದಲ್ಲಿ ಮಾಡಿರುವ ಸಾಧನೆ ಎಲ್ಲರನ್ನು ಬೆರಗುಗೊಳಿಸುತ್ತೆ. ಇವರು ಬರೋಬರಿ 13 ವರ್ಷ ಗುಜರಾತಿನಲ್ಲಿ ಮುಖ್ಯಮಂತ್ರಿಯಾಗಿದರು.

ಅಷ್ಟೇ ಅಲ್ಲದೆ. 5 ವರ್ಷ ಭಾರತದ ಪ್ರಧಾನಮಂತ್ರಿಯಾಗಿ ಪ್ರಪಂಚ ಮೆಚ್ಚುವ ರೀತಿಯಲ್ಲಿ ದೇಶವನ್ನು ಬೆಳೆಸಿದ್ದಾರೆ, ಇವರು ಒಂದು ದಿನವು ರಜೆ ಮಾಡದೆ ದೇಶಕ್ಕಾಗಿ ಸೇವೆಸಲ್ಲಿಸಿದ್ದಾರೆ, ಇವರ ಮೇಲೆ ಇಲ್ಲಿಯ ವರೆಗೂ ಒಂದು ಹಗರಣಗಳು ಕೂಡ ಇಲ್ಲ, ಇವರ ಸ್ವಂತ ಆಸ್ತಿ ಮನೆ 900sq ಪಿಟ್. ಇದರ ಬೆಲೆ ಒಂದು ಲಕ್ಷವಂತೆ. ಇವರ ದೊಡ್ಡ ಆಸ್ತಿ ಕೂಡ ಸೊನ್ನೆ. ಇವರ ಕುಟುಂಬಕ್ಕೆ ಇವರು ನೀಡಿದ ಹಣವು ಸೊನ್ನೆ, ಇಷ್ಟೊಂದು ಸರಳ ದೈರ್ಯದ ಪ್ರಧಾನಿಯವರ ಭಾರತಕ್ಕೆ ಸಿಕ್ಕಿದ್ದು ಅದೃಷ್ಟವೇ ಎನ್ನುತ್ತಿದೆ.

Also read: ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್; ತೀವ್ರ ಬರಗಾಲದಿಂದ ಬಳಲುತ್ತಿರುವ ಕರ್ನಾಟಕಕ್ಕೆ ಮೋದಿ ಸರ್ಕಾರದಿಂದ ಬಂದ ಹಣವೆಷ್ಟು ಗೊತ್ತೇ??

ಮೋದಿ ತನ್ನ ಕುಟುಂಬಕ್ಕೆ ನೀಡಿದ ಆಸ್ತಿ?

ಮೋದಿಯವರು ತಮ್ಮ ಕುಟುಂಬಕ್ಕೆ ಏನೆಲ್ಲಾ ಮಾಡಬಹುದಿತ್ತು. ಆದರೆ ದೇಶದ ಉದ್ದಾರಕ್ಕಾಗಿ ಶ್ರಮಿಸುತ್ತಿರುವ ಅವರ ನಡೆ ಕುಟುಂಬವನ್ನು ಮೇಲೆತ್ತಲು ಇಚ್ಚಿಸುವುದಿಲ್ಲವಂತೆ. ಅದರಂತೆ ಮೋದಿ ಕುಟುಂಬದವರು ಯಾವ ಸಹಾಯವಿಲ್ಲದೆ ಹೇಗೆ ಬದುಕುತ್ತಿದ್ದಾರೆ ಅಂತ ತಿಳಿದರೆ ಮೋದಿಯ ಸರಳ ರಾಜಕೀಯದ ಬಗ್ಗೆ ಹೆಮ್ಮೆಯಾಗುತ್ತೆ.

Also read: ಮೋದಿಗೆ ಮತ ಹಾಕಬೇಡಿ ಎಂದು ನರೇಂದ್ರ ಮೋದಿ ಪತ್ನಿ ಹೇಳಿರುವ ವೀಡಿಯೊ ವೈರಲ್, ಕಿಡಿಗೇಡಿಗಳು ಮಾಡಿರುವ ಈ ಸುಳ್ಳ ವೀಡಿಯೊವನ್ನು ನಂಬಬೇಡಿ!!

1. ಅಮೃತ್‍ಬಾಯಿ ಮೋದಿ:

ನರೇಂದ್ರ ಮೋದಿಯವರ ದೊಡ್ಡ ಅಣ್ಣ ಅಮೃತ್‍ಬಾಯಿ ಮೋದಿ. ಖಾಸಗಿ ಕಂಪೆನಿಯಲ್ಲಿ ಫಿಟ್ಟರ್ ಆಗಿ ಕೆಲಸಮಾಡುತ್ತಿದ್ದು, ಇದೀಗ ಕೆಲಸದಿಂದ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ. ಜೀವನಕ್ಕಾಗಿ ತಾನು ಕೆಲಸ ಮಾಡುತ್ತಿದ್ದ ಕಂಪೆನಿಯಿಂದ ತಿಂಗಳಿಗೆ 10,000 ರೂಪಾಯಿಯ ಪಿಂಚಣಿಯನ್ನು ಅಮೃತ್ ಬಾಯಿ ಪಡೆದುಕೊಳ್ಳುತ್ತಿದ್ದಾರೆ. ಇವರ ಮನೆಯಲ್ಲಿ ಒಂದು ಸಣ್ಣ ಕಾರು ಮತ್ತು ಇವರು ಸದಾ ಓಡಾಡುವ ಸ್ಕೂಟರ್ ಇದೆ ಅಂತೆ.

2 ಪ್ರಹ್ಲಾದ್‍ಬಾಯಿ ಮೋದಿ:

Also read: ಮೋದಿ ತರುತ್ತಿರುವ ದೇಶದ ಅತಿ ವೇಗದ ಟ್ರೈನ್ ಬಗ್ಗೆ ತಿಳಿದುಕೊಳ್ಳಿ, ನಮ್ಮ ದೇಶಾನೂ ಪಾಶ್ಚಾತ್ಯ ದೇಶಗಳಿಗಿಂತ ಕಮ್ಮಿಯಿಲ್ಲ ಅನ್ಸೋಕ್ಕೆ ಶುರು ಆಗುತ್ತೆ!!

ಪ್ರಧಾನಿ ಮೋದಿಯವರ ತಮ್ಮನಾಗಿರುವ ಪ್ರಹ್ಲಾದ್‍ಬಾಯಿ ದಿನಸಿ ಅಂಗಡಿಯನ್ನು ನಡೆಸುತ್ತಿದ್ದಾರೆ. ಅಂಗಡಿ ಮಾಲೀಕರ ಯೂನಿಯನ್‍ನಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಇವರು ತನ್ನ ಮಗಳು ಕೆಲ ತಿಂಗಳ ಹಿಂದೆ ಖಾಯಲೆಯಿಂದ ಸಾವನ್ನಪ್ಪಿದ್ದರು. ಮಗಳು ಖಾಯಿಲೆಯಿಂದ ಬಳಲುತ್ತಿರಬೇಕಾದ್ರೂ ಕೂಡ ದುಬಾರಿ ಚಿಕಿತ್ಸೆಯ ಮೊರೆ ಹೋಗಿಲ್ಲ.

3 ಪಂಕಜ್‍ಬಾಯಿ ಮೋದಿ:

ನರೇಂದ್ರಮೋದಿಯವರ ಅಣ್ಣ ತಮ್ಮಂದಿರಲ್ಲಿ ಉನ್ನತ ಸ್ಥಾನದಲ್ಲಿ ಮತ್ತು ಶಾಶ್ವತ ಹುದ್ದೆಯಲ್ಲಿ ಇರುವವರೇ ಪಂಕಜ್‍ಬಾಯಿ ಮೋದಿ. ಗುಜರಾತ್ ಸರಕಾರದಲ್ಲಿನ ವಾರ್ತಾ ಇಲಾಖೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿರುವ ಇವರು 3 ಬೆಡ್ ರೂಮ್ ನ ಒಂದು ಮನೆಯನ್ನು ಹೊಂದಿದ್ದಾರೆ. ಅಲ್ಲದೇ ನರೇಂದ್ರ ಮೋದಿಯವರ ತಾಯಿ ಹೀರಾಬೆನ್, ಇವರ ಜೊತೆ ವಾಸವಾಗಿದ್ದಾರೆ.

Also read: ಮೋದಿಯವರ ವಿದೇಶಿ ಪ್ರವಾಸದ ಖರ್ಚು ಕೇಳಿದ್ರೆ ನಿಮಗೆ ಶಾಕ್ ಅಗೋದಂತೂ ಖಂಡಿತ….!!

ಇನ್ನೂ ಮೋದಿಯವರ ಚಿಕ್ಕಪ್ಪನ ಮಕ್ಕಳಲ್ಲಿ ಮೊದಲನೇ ಮಗ. ಅಶೋಕ್ ಬಾಯಿ ತನ್ನ ಸಣ್ಣ ಥೇಲಾದಲ್ಲಿ ಗಾಳಿಪಟ, ತಿಂಡಿ-ತಿನಿಸುಗಳನ್ನು ಮಾರಾಟ ಮಾಡುತ್ತಾ ಬದುಕನ್ನು ನಡೆಸುತ್ತಿದ್ದಾರೆ. ಎರಡನೇ ಮಗ ಅರವಿಂದ್‍ಬಾಯಿ ಮೋದಿ, ಮನೆ ಮನೆಗೆ ತೆರಳಿ ಚಿಂದಿ ಸಂಗ್ರಹಣೆ, ಹಳೆಲೋಹದ ವಸ್ತು, ಗುಜರಿ ವಸ್ತುಗಳನ್ನು ಸಂಗ್ರಹಿಸುತ್ತಾ ಜೀವನ ಸವೆಸುತ್ತಿದ್ದಾರೆ. ಮೋದಿಯವರ ಇನ್ನೊಬ್ಬ ಚಿಕ್ಕಪ್ಪನ ಮಗ ಭರತ್‍ಬಾಯಿ. ಪೆಟ್ರೋಲ್ ಪಂಪ್‍ನಲ್ಲಿ ಕೆಲಸ ಮಾಡಿ ತಿಂಗಳಿಗೆ 6000 ರೂಪಾಯಿಗಳನ್ನು ಸಂಪಾದಿಸುತ್ತಾರೆ. ಅಲ್ಲದೇ ಇವರ ಹೆಂಡತಿ ತಿಂಡಿ ತಿನಿಸುಗಳನ್ನು ಮಾರಿ ತಿಂಗಳಿಗೆ ಬರುವ 4000 ರೂಪಾಯಿಗಳಿಂದ ತನ್ನ ಪುಟ್ಟ ಕುಟುಂಬವನ್ನು ನಡೆಸುತ್ತಿದ್ದಾರೆ.