ಇನ್ಮುಂದೆ ಮೊಬೈಲ್‌ ಫೋನ್‌ಗಳ ಮಾದರಿಯಲ್ಲಿಯೇ ವಿದ್ಯುತ್‌ ಬಳಕೆಗೂ ಬಂತು ಪ್ರೀ ಪೇಯ್ಡ್‌ ರೀಚಾರ್ಜ್‌..

0
1033

ದೇಶದಲ್ಲಿ ತಂತ್ರಜ್ಞಾನದ ಛಾಪು ಪ್ರತಿಯೊಂದು ಕ್ಷೆತ್ರದಲ್ಲಿ ಮಿಂಚುತ್ತಿದ್ದು ಈಗ ಇದರ ಪ್ರಭಾವ ವಿದ್ಯುತ್‌ ಬಳಕೆಯಲ್ಲಿವೂ ಮೂಡಿಸಿದ್ದು ಒಂದು ಆಶ್ಚರಿಯ ಹೊಸ ಬೆಳವಣಿಗೆ ಅಂತಾನೆ ಹೇಳಬಹುದು. ಇದು ವಿದ್ಯುತ್‌ ಕಳ್ಳತನಕ್ಕೆ ಬ್ರೇಕ್ ಹಾಕುವ ಹೊಸ ಮಾದರಿಯಾಗಿದ್ದು, ಇನ್ಮುಂದೆ ಯಾವುದೇ ಕಾರಣಕ್ಕೂ ವಿದ್ಯುತ್ ಕಳ್ಳತನದ ಪ್ರಕರಣಗಳು ಮತ್ತು ಬಿಲ್ಲಿಂಗ್‌ ಸಮಸ್ಯೆಗಳು ಕೇಳಿಬರುವುದಿಲ್ಲ ವಂತೆ.


Also read: ಆಸತ್ರೆಗಳಲ್ಲಿ ಈ ವಸ್ತುಗಳನ್ನು ಮುಟ್ಟುವ ಮೊದಲು ಎಚ್ಚರ; ಹೆಚ್ಚು ಬ್ಯಾಕ್ಟೀರಿಯಾಗಳು ಈ ವಸ್ತುಗಳಿಗೆ ಅಂಟಿಕೊಂಡಿರುತ್ತೇವೆ..

ಏನಿದು ಪ್ರೀ ಪೇಯ್ಡ್‌ ರೀಚಾರ್ಜ್‌..?

ಹೌದು ಇನ್ಮುಂದೆ ಬರುವ ಏಪ್ರಿಲ್‌ 1ರಿಂದ ದೇಶಾದ್ಯಂತ ಮೊಬೈಲ್‌ ಫೋನ್‌ಗಳ ಮಾದರಿಯಲ್ಲಿಯೇ ವಿದ್ಯುತ್‌ ಬಳಕೆಗೂ ಪ್ರೀ ಪೇಯ್ಡ್‌ ರೀಚಾರ್ಜ್‌ ಕಾರ್ಡ್‌ ಪರಿಚಯಿಸಲಾಗುವುದು. ಇದರಿಂದ ದೇಶಾದ್ಯಂತ ಮುಂಗಡ ಪಾವತಿ ವಿದ್ಯುತ್‌ ಮೀಟರ್‌ (ಪ್ರೀಪೇಯ್ಡ್‌ ಮೀಟರ್‌) ಪದ್ಧತಿ ಅನುಷ್ಠಾನಗೊಳಿಸಲು ನಿರ್ಧರಿಸಿದೆ. ಇದರಿಂದ ವಿದ್ಯುತ್ ಸಮಸ್ಯೆಗಳಿಗೆ ಸೂಕ್ತ ಮೂಗುದಾರ ಹಾಕಿದಂತೆ, ಏಕೆಂದರೆ ವರ್ಷದಿಂದ ವರ್ಷಕ್ಕೆ ವಿದ್ಯುತ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು ಗ್ರಾಹಕರು ಸೇರ್ಪಡೆಯಾದಷ್ಟೂ ಸಮಸ್ಯೆ ಹಾಗೂ ಸವಾಲುಗಳು ಹೆಚ್ಚುತ್ತದೆ. ಆದರಿಂದ ನೂತನ ಪ್ರೀ-ಪೇಯ್ಡ್ ಮೀಟರ್ ಪದ್ಧತಿ ಜಾರಿಗೊಂಡ ಬಳಿಕ, ಹಾಲಿ ಇರುವ ಪೋಸ್ಟ್ ಪೇಯ್ಡ್ ಮೀಟರ್ (ಪೋಸ್ಟ್ ಪೇಯ್ಡ್) ವ್ಯವಸ್ಥೆ ರದ್ದುಗೊಳ್ಳಲಿದೆ. ನೂತನ ಪದ್ಧತಿಗೆ ಎಲ್ಲ ರಾಜ್ಯಗಳು ಸಮ್ಮತಿ ನೀಡುವುದು ಕಡ್ಡಾಯವಾಗಿದೆ. ಮತ್ತು ಏಕಕಾಲಕ್ಕೆ ಎರಡು ಪದ್ಧತಿಗಳನ್ನು ಅನುಸರಿಸುವಂತಿಲ್ಲ.


Also read: ಕಡೆಗೂ ನಿರುದ್ಯೋಗ ಸಮಸ್ಯೆಯ ಬಗ್ಗೆ ಎಚ್ಚೆತ್ತುಕೊಂಡ ಮೋದಿ ಸರ್ಕಾರ, 21 ದಿನಗಳಲ್ಲೇ ಉದ್ಯೋಗ ನೀಡುವ ವರುಣ್ ಮಿತ್ರ ಯೋಜನೆ!

ಈ ಹೊಸ ಮಾದರಿ ಜಾರಿಗೆ ಬಂದರೆ ಬಿಲ್‌ ಕಲೆಕ್ಷನ್‌ ದುಸ್ತರವಾಗುತ್ತದೆ. ಬಹುತೇಕ ವಿದ್ಯುತ್‌ ವಿತರಣಾ ಕಂಪನಿ (ಎಸ್ಕಾಂ)ಗಳು ಬಿಲ್‌ ಸಂಗ್ರಹ ಜವಾಬ್ದಾರಿಯನ್ನು ಹೊರಗುತ್ತಿಗೆ ನೀಡಿವೆ. ಆದರೂ ಬಿಲ್‌ ಮೊತ್ತದಲ್ಲಿ ಏರುಪೇರು ಆಗುತ್ತಿರುವ ಬಗ್ಗೆ ಗ್ರಾಹಕರಿಂದ ದೂರುಗಳು ಬರುತ್ತಲೇ ಇವೆ. ಈ ಎಲ್ಲ ತಾಪತ್ರಗಳನ್ನು ಗಮನದಲ್ಲಿಟ್ಟುಕೊಂಡು ನಾವೀಗ ಸ್ಮಾರ್ಟ್‌ ಪ್ರೀ ಪೇಯ್ಡ್‌ ಮೀಟರ್‌ ಪದ್ಧತಿ ಜಾರಿಗೊಳಿಸಲು ನಿರ್ಧರಿಸಿದ್ದೇವೆ ಎಂದು ಇಂಧನ ಖಾತೆ ಸಹಾಯಕ ಸಚಿವ ಆರ್‌.ಕೆ.ಸಿಂಗ್‌ ಹೇಳಿದ್ದಾರೆ.

ಪ್ರೀ– ಪೇಯ್ಡ್ ಮೀಟರ್ ರೀಚಾರ್ಜ್ ಹೇಗೆ:

  • ಪ್ರೀ -ಪೇಯ್ಡ್ ಮೊಬೈಲ್ ಬಿಲ್ ಪಾವತಿಸುವ ವಿಧಾನವೇ ಯಥಾವತ್ತಾಗಿ ಈ ನೂತನ ವಿದ್ಯುತ್ ಮೀಟರ್‌ಗೂ ಅನ್ವಯವಾಗುತ್ತದೆ.
  • ಆನ್‌ಲೈನ್ ಮೂಲಕ ಹಣ ಟ್ರಾನ್ಸ್ ಫರ್ ಮಾಡಿ ಅಗತ್ಯಕ್ಕೆ ತಕ್ಕಷ್ಟು ವಿದ್ಯುತ್ ಖರೀದಿಸಬಹುದು ಅಥವಾ ಸಮೀಪದ ವಿದ್ಯುತ್ ವಿತರಣ ಕಚೇರಿಗಳಿಗೆ ತೆರಳಿ ಹಣ ಪಾವತಿಸಿ ವಿದ್ಯುತ್ ಕಾರ್ಡ್ ರೀಚಾರ್ಜ್ ಮಾಡಿಸಬಹುದು.
  • ತಿಂಗಳಿಗೆ ಬೇಕಾದಷ್ಟು ವಿದ್ಯುತ್ ಬಳಕೆಯ ಮೊತ್ತವನ್ನು ತುಂಬಲೇ ಬೇಕು ಎನ್ನುವ ನಿಯಮ ಇಲ್ಲ, ಒಂದು ಅಥವಾ ಎರಡು ದಿನಗಳಿಗೆ ಬೇಕಾದಷ್ಟು ವಿದ್ಯುತ್ ಅನ್ನು ಕೂಡ ಪ್ರೀ-ಪೇಯ್ಡ್ ಮೂಲಕ ಖರೀದಿಸಲು ಅವಕಾಶ ಇದೆ.
  • 2019, ಏಪ್ರಿಲ್ 1 ಪ್ರೀ ಪೇಯ್‌ ಮೀಟರ್ ಪದ್ಧತಿ ಜಾರಿಯಾಗುವ ದಿನ ಎಲ್ಲ ರಾಜ್ಯಗಳು ಈ ಪದ್ಧತಿ ಅನುಸರಿಸುವುದು ಕಡ್ಡಾಯ. ಆದರೆ ಬಹುತೇಕ ರಾಜ್ಯಗಳಲ್ಲಿ ಈಗಿರುವ ನಿಯಮಗಳ ಪ್ರಕಾರ ಪ್ರೀ-ಪೇಯ್ಡ್ ಮೀಟರ್ ಬಳಕೆಗೆ ಅನುಮತಿ ಇಲ್ಲ. ಅವು ಅಗತ್ಯ ತಿದ್ದುಪಡಿ ಮಾಡಿಕೊಳ್ಳುವುದು ಅನಿವಾರ್ಯ.


Also read: ಟೋಲ್‌ ಗೇಟ್‌ಗಳಲ್ಲಿ ಒಮ್ಮೆ ಶುಲ್ಕ ಪಾವತಿ ಮಾಡಿ 12 ತಾಸಿನೊಳಗೆ ರಿಟರ್ನ್ ಬಂದರೆ ಮತ್ತೆ ಪಾವತಿ ಪಡೆಯುವ ಅವ್ಯಶಕತೆ ಇಲ್ಲವೇ?

ಅನುಕೂಲವೇನು:

  • ಈ ಪದ್ಧತಿ ಜಾರಿಯಾದರೆ ಎಲ್ಲವೂ ಸ್ವಯಂ ಚಾಲಿತ ವ್ಯವಸ್ಥೆಗೆ ಒಳಪಡುತ್ತದೆ.
  • ಬಿಲ್ಲಿಂಗ್ ಮತ್ತು ಬಳಕೆ ಮೊತ್ತ ಸಂಗ್ರಹ ಆನ್ ಲೈನ್ ವ್ಯವಸ್ಥೆಗೆ ಒಳಪಡುತ್ತದೆ.
  • ಗ್ರಾಹಕರು, ಎಸ್ಕಾಂಗಳು ಇಬ್ಬರಿಗೂ ಅನುಕೂಲ.
  • ಮುಂಗಡವಾಗಿ ಹಣ ಸಂದಾಯವಾಗುವುದರಿಂದ ಎಸ್ಕಾಂಗಳ ತಲೆನೋವು ಕಡಿಮೆಯಾಗಲಿದೆ.
  • ಬಳಸುವಷ್ಟೇ ವಿದ್ಯುತ್‌ಗೆ ಪಾವತಿ ಮಾಡುವುದರಿಂದ ಬಡವರಿಗೆ ಇದರಿಂದ ಹೆಚ್ಚು ಪ್ರಯೋಜನ ಆಗಲಿದೆ.

ವಿದ್ಯುತ್‌ ಬಿಲ್‌ ಮನ್ನಾ ಹೇಗೆ?

ರಾಜ್ಯ ಸರಕಾರಗಳು ವಿದ್ಯುತ್‌ ಬಿಲ್‌ ಮನ್ನಾ ಮಾಡುವುದಾದರೆ ಪ್ರೀ ಪೇಯ್ಡ್‌ ಪದ್ಧತಿಯಿಂದ ಅಡ್ಡಿ ಎದುರಾಗುವುದಿಲ್ಲವೇ ಎನ್ನುವ ಪ್ರಶ್ನೆಗೆ ಸರಕಾರದ ಬಳಿ ಸಮರ್ಪಕ ಉತ್ತರ ಇದೆ. ಗ್ರಾಹಕ ಕಾಳಜಿಯಿಂದ ವಿದ್ಯುತ್‌ ಬಿಲ್‌ ಮನ್ನಾ ಮಾಡಬಯಸುವ ರಾಜ್ಯ ಸರಕಾರಗಳು, ಮನ್ನಾ ಮೊತ್ತವನ್ನು ಎಸ್ಕಾಂಗಳಿಗೆ ನೇರವಾಗಿ ಪಾವತಿಸಬೇಕಾಗುತ್ತದೆ. ಸಬ್ಸಿಡಿ ವಿಷಯದಲ್ಲಿಯೂ ಇದೇ ನಿಯಮ ಪಾಲಿಸಬೇಕಾಗುತ್ತದೆ. ಆ ಮೂಲಕ ಎಸ್ಕಾಂಗಳು ಸಂಬಂಧಪಟ್ಟ ಗ್ರಾಹಕರಿಗೆ ಅದರ ಲಾಭ ವರ್ಗಾಯಿಸುತ್ತವೆ ಎಂದು ಸಚಿವರು ತಿಳಿಸಿದ್ದಾರೆ.