ಕೈದಿ ಮಗುವಿಗೆ ಕಾರಾಗೃಹದಲ್ಲೇ ಶಾಸ್ತ್ರೋಕ್ತವಾಗಿ ನಾಮಕರಣ; ವಿಂಗ್ ಕಮಾಂಡರ್ ಹೆಸರು ‘ಅಭಿನಂದನ್’ ಎಂದು ನಾಮಕರಣ..

0
440

ಜೈಲುಗಳು ಎಂದರೆ ಬರಿ ಶಿಕ್ಷೆ ನೀಡುವ ಗೃಹಗಳು, ಕೈದಿಗಳು ಬಂಧಿಸಿಟ್ಟುರುವ ಸ್ಥಳಗಳು ಎಂದು ತಿಳಿಯುತ್ತೆ, ಆದರೆ ಜೈಲಿನಲ್ಲಿ ಕೂಡ ಮನೆಯಂತೆ ಸಂಪ್ರದಾಯವಾಗಿ ಕಾರ್ಯಕ್ರಮಗಳು ನಡೆಯುತ್ತೇವೆ ಎನ್ನುವುದು ಈಗೀಗ ಬೆಳಕಿಗೆ ಬರುತ್ತಿದೆ. ಅಂತಹ ಕಾರ್ಯಕ್ರಮಗಳು ಎಂದರೆ ಪೂಜೆ, ಹಬ್ಬ ಆಚರಣೆಗಳಲ್ಲ, ಮಗುವಿನ ನಾಮಕರಣ ಮಾಡುವುದು. ಇದನ್ನು ಕೇಳಲು ಸೂಜಿಗ ಎನಿಸಿದರು ಸತ್ಯವಾಗಿದೆ. ಕೈದಿಯ ಮಗುವಿಗೆ ಶಾಸ್ತ್ರೋಕ್ತವಾಗಿ ನಾಮಕರಣ ಮಾಡಿ ದೇಶವೇ ಹೆಮ್ಮೆಪಡುವ ವೀರ. ಅಭಿನಂದನ್ ಎಂದು ಹೆಸರಿಡಲಾಗಿದೆ.

ಕೈದಿಯ ಮಗುವಿಗೆ ಅಭಿನಂದನ್?

ಹೌದು ದೇಶ ಪ್ರೇಮ ಎನ್ನುವುದು ಎಲ್ಲರ ಮನದಲ್ಲಿ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಕೊಪ್ಪಳದ ಜಿಲ್ಲಾ ಕಾರಾಗೃಹದಲ್ಲಿ ಅದ್ದೂರಿಯಾಗಿ ಶಾಸ್ತ್ರೋಕ್ತವಾಗಿ ಮಂತ್ರ, ಜೋಗುಳ ಹಾಡುಗಳ ಜೊತೆಗೆ ಮಗುವಿಗೆ ನಾಮಕರಣ ಮಾಡಲಾಗಿದೆ. ಆಂಧ್ರ ಮೂಲದ ಜ್ಯೋತಿ ಎಂಬುವರ ಮಗುವಿಗೆ ಅಭಿನಂದನ್ ಎಂದು ನಾಮಕರಣ ಮಾಡಲಾಗಿದೆ. ಜ್ಯೋತಿ ಪ್ರಕರಣವೊಂದರ ವಿಚಾರಣಾಧೀನ ಕೈದಿಯಾಗಿ ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿದ್ದಾರೆ. ಇವರಿಗೆ ಮಾರ್ಚ್ 16 ರಂದು ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಈ ಹಿನ್ನೆಲೆಯಲ್ಲಿ ನಾಮಕರಣ ಹಾಗೂ ಹುಟ್ಟುಹಬ್ಬದ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ಪೂಜಾ ವಿಧಿ- ವಿಧಾನಗಳನ್ನು ಪೂರೈಸಿದ ನಂತರ, ಮಂತ್ರ ಘೋಷಗಳೊಂದಿಗೆ ಮಗುವಿಗೆ ನಾಮಕರಣ ಮಾಡಲಾಯಿತು. ತಾಯಿ ಇಚ್ಛೆಯಂತೆ ಅಭಿನಂದನ್ ಎಂದು ನಾಮಕರಣ ಮಾಡಲಾಯಿತು.

ಅಭಿನಂದನ್ ಹೆಸರಿಡಲು ಕಾರಣ?

ದೇಶದ ಹೆಮ್ಮೆಯ ಪುತ್ರ ವಿಂಗ್ ಕಮಾಂಡರ್ ಪಾಕಿಸ್ತಾನದ ವಿರುದ್ದ ಹೋರಾಡಿ ದೇಶಕ್ಕೆ ಗೆಲವು ತಂದ ವೀರ ಅವರ ಹೆಸರನ್ನು ನನ್ನ ಮಗನಿಗೆ ಇದುವ ಆಸೆ ಇತ್ತು ಎಂದು ಮಗುವಿನ ತಾಯಿ ಹೇಳಿದ್ದರು. ಹೀಗಾಗಿ ತಾಯಿಯ ಇಚ್ಛೆಯಂತೆ ಮಗುವಿಗೆ ‘ಅಭಿನಂದನ್’ ಎಂದು ಹೆಸರಿಡಲಾಗಿದೆ. ಜಿಲ್ಲಾ ನ್ಯಾಯಾಧೀಶ ಸಂಜೀವ ಕುಲಕರ್ಣಿ ನೇತೃತ್ವದಲ್ಲಿ ನಾಮಕರಣ ಕಾರ್ಯಕ್ರಮ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಜೈಲಿನ ಇತರೆ ಕೈದಿಗಳು, ಅಧಿಕಾರಿಗಳು, ಸೇರಿ ಹೆಸರಿಡಲಾಗಿದೆ. ಮಹಿಳಾ ಬಂಧಿಗಳು ಗ್ರಾಮೀಣ ಸೊಗಡಿನ ಜೋಗುಳ ಹಾಡಿದ್ದಾರೆ. ಈ ಕಾರ್ಯಕ್ರಮ ಜಿಲ್ಲಾ ನ್ಯಾಯಾಧೀಶ ಸಂಜೀವ ಕುಲಕರ್ಣಿ ನೇತೃತ್ವದಲ್ಲಿ ನಾಮಕರಣ ಕಾರ್ಯಕ್ರಮ ನಡೆದಿದೆ.

ಕೆಲವು ದಿನಗಳ ಹಿಂದೆವು ಇಂತಹದೆ ಒಂದು ನಾಮಕರಣ ರಾಯಚೂರು ಜಿಲ್ಲಾ ಕಾರಾಗೃಹ ನಡೆದಿತ್ತು. ವಿಚಾರಣಾಧೀನ ಕೈದಿಯೊಬ್ಬರ ಮಗುವಿಗೆ ನಾಮಕರಣ ಹಾಗೂ ತೊಟ್ಟಿಲು ಕಾರ್ಯಕ್ರಮ ಮಾಡುವ ಮೂಲಕ ರಾಯಚೂರು ಜಿಲ್ಲಾ ಕಾರಾಗೃಹ ಅಪರೂಪದ ಘಟನೆಗೆ ಸಾಕ್ಷಿಯಾಗಿತ್ತು. ಮಾನ್ವಿ ಬಳಿಯಲ್ಲಿ ಕಳ್ಳತನ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ವಿಚಾರಣಾಧೀನ ಕೈದಿ ಶಿಷಾಬಾಯಿ ಅಲಿಯಾಸ್​ ಭಾಗ್ಯಮ್ಮನ ಹೆಣ್ಣು ಮಗುವಿಗೆ ಜೈಲಿನಲ್ಲಿ ನಾಮಕರಣ ಮಾಡಲಾಗಿತ್ತು. ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಕೈದಿ ಜಿಲ್ಲಾ ಕಾರಾಗೃಹಕ್ಕೆ ದಾಖಲಾಗುವಾಗ ಗರ್ಭಿಣಿಯಾಗಿದ್ದರು. ಹಾಗಾಗಿ ಆಕೆ ಜೈಲಿನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆದಕಾರಣ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬೈಲೂರು ಶಂಕರ ಅವರಿಂದ ಮಗುವಿಗೆ `ಕೃಷ್ಣವೇಣಿ’ ಎಂದು ನಾಮಕರಣ ಮಾಡಲಾಗಿತ್ತು. ಈಗ ಅದೇ ರೀತಿಯಲ್ಲಿ ಮತ್ತೊಂದು ನಾಮಕರಣ ನಡೆದಿದ್ದು ಮೆಚ್ಚುಗೆ ಪಡೆದಿದೆ.

Also read: ಅಭಿನಂದನ್ ಪಾಕ್ ಕೈಯಲ್ಲಿ ಬಂಧಿಯಾಗುವ ಮೊದಲು ಮುಖ್ಯ ರಹಸ್ಯ ದಾಖಲೆಗಳನ್ನು ನುಂಗಿ ಅದನ್ನು ನಾಶ ಪಡಿಸಿದ್ದರು, ಅವರಿಗೆ ಹ್ಯಾಟ್ಸ್ ಆಫ್!!