ಫೇಸ್‌ಬುಕ್‌ನಲ್ಲಿ ಕನ್ನಡಿಗರ ಅವಹೇಳನ: ಸಾಮಾನ್ಯ ಕನ್ನಡಿಗನಿಂದ ಟೆಕ್ಕಿ ವಿರುದ್ಧ ಪ್ರಕರಣ

0
1351

ಫೇಸ್‌ಬುಕ್‌ನಲ್ಲಿ ಕನ್ನಡಿಗರ ಕುರಿತು ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಆರೋಪದ ಮೇಲೆ, ಮರಾಠಿ ಮಾತೃ ಭಾಷೆಯ ಸಾಫ್ಟ್‌ವೇರ್ ಎಂಜಿನಿಯರ್ ಪ್ರೀತೀಶ್ ಕುಮಾರ್ ಪಾಟೀಲ್ ಎಂಬುವವರ ವಿರುದ್ಧ ಗಂಗಮ್ಮನಗುಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಫೇಸ್‌ಬುಕ್‌ನಲ್ಲಿ ಕನ್ನಡಿಗರ ಕುರಿತು ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಆರೋಪದ ಮೇಲೆ, ಮರಾಠಿ ಮಾತೃ ಭಾಷೆಯ ಸಾಫ್ಟ್‌ವೇರ್ ಎಂಜಿನಿಯರ್ ಪ್ರೀತೀಶ್ ಕುಮಾರ್ ಪಾಟೀಲ್ ಎಂಬುವವರ ವಿರುದ್ಧ ಗಂಗಮ್ಮನಗುಡಿ ಠಾಣೆಯಲ್ಲಿ ದೂರು ದಾಖಲಾಗಿದೆ.
a1dc5fbc-f636-497f-99d8-851f10a6015c

‘ಲಾಜಿಕಲ್ ಇಂಡಿಯಾ’ ಎಂಬ ಫೇಸ್‌ಬುಕ್ ಪುಟದಲ್ಲಿ ಬಸ್ ನಿರ್ವಾಹಕರ ಕುರಿತು ಪ್ರಕಟವಾಗಿದ್ದ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಪಾಟೀಲ್ ಅವಾಚ್ಯ ಶಬ್ದಗಳನ್ನು ಬಳಸಿ ಪ್ರತಿಕ್ರಿಯಿಸಿದ್ದರು. ಈ ಕುರಿತು ಫೇಸ್‌ಬುಕ್‌ನ ‘ಸಾಮಾನ್ಯ ಕನ್ನಡಿಗ’ ಗುಂಪು ಜ. 6ರಂದು ಠಾಣೆಗೆ ದೂರು ಕೊಟ್ಟಿತ್ತು. ‘ದೂರಿನ ಆಧಾರದ ಮೇಲೆ ಪಾಟೀಲ್ ವಿರುದ್ಧ ಐಪಿಸಿ 505ನೇ ಕಲಂನಡಿ (ಪ್ರಚೋದನಾಕಾರಿ ಹೇಳಿಕೆ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಪಾಟೀಲ್ ಅವರು ಆ ಮಟ್ಟಕ್ಕೆ ಪ್ರತಿಕ್ರಿಯಿಸುವ ರೀತಿಯಲ್ಲಿ ಲೇಖನ ಇರಲಿಲ್ಲ. ಅಲ್ಲದೆ, ಅವರ ಪ್ರತಿಕ್ರಿಯೆ ಕರ್ನಾಟಕ ಮತ್ತು ಕನ್ನಡಿಗರನ್ನು ದ್ವೇಷಿಸುವಂತಿವೆ. ಘಟನೆ ನಂತರ ಕ್ಷಮೆ ಕೋರಿರುವ ಅವರು, ಫೇಸ್‌ಬುಕ್‌ ಖಾತೆ ಸ್ಥಗಿತಗೊಳಿಸಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ‘ಸಾಮಾನ್ಯ ಕನ್ನಡಿಗ’ ಗುಂಪಿನ ವಿವೇಕ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.