ಬೆಂಗಳೂರು: ಖಾಸಗಿ ಬಸ್‌ಗಳಿಗೆ ನಗರ ಪ್ರವೇಶ ನಿಷೇಧ ?

0
974

ಹೊರವಲಯದಲ್ಲಿ ಪಯಾ೯ಯ ವ್ಯವಸ್ಥೆಗೆ ಸಾರಿಗೆ ಇಲಾಖೆ ಚಿ೦ತನೆ

ಇನ್ವೆಸ್ಟ್ ಕನಾ೯ಟಕ ನೆಪದಲ್ಲಿ ಫೆಬ್ರವರಿಯಲ್ಲಿ ಖಾಸಗಿ ಬಸ್‌ಗಳ ನಗರ ಪ್ರವೇಶ ನಿಷೇಧಿಸಿ ಪ್ರಯಾಣಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಸಾರಿಗೆ ಇಲಾಖೆ, ಇದೀಗ ಕಾಯ೦ ಆಗಿಯೇ ಸಿಟಿಯಿ೦ದ ಹೊರಹಾಕಲು ಚಿ೦ತನೆ ನಡೆಸಿದೆ.

ಬೆಳಗ್ಗೆ ಸ೦ಚರಿಸುವ ಸ್ಟೇಟ್ ಕ್ಯಾರೇಜ್ ಹಾಗೂ ಕಾ೦ಟ್ರಾಕ್ಟ್ ಕ್ಯಾರೇಜ್ ಬಸ್ಗಳ ನಗರ ಪ್ರವೇಶ ನಿಷೇಧಿಸುವ ಕುರಿತು ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲು ಸಾರಿಗೆ ಇಲಾಖೆ ತೀಮಾ೯ನಿಸಿದೆ. ಈ ಕುರಿತು ಗುರುವಾರ ಸಾರಿಗೆ ಆಯುಕ್ತ ರಾಮೇಗೌಡ ನೇತೃತ್ವದಲ್ಲಿ ಸಭೆ ನಡೆಸಲಾಯಿತು.

ನಗರದ ಹೃದಯ ಭಾಗದಲ್ಲಿ ದಿನೇ ದಿನೆ ಸ೦ಚಾರದಟ್ಟಣೆ ಹೆಚ್ಚಾಗುತ್ತಿದೆ. ನಗರದಲ್ಲಿ ಆರು ಸಾವಿರಕ್ಕೂ ಅಧಿಕ ಬಿಎ೦ಟಿಸಿ ಬಸ್ ಸ೦ಚರಿಸುತ್ತಿದೆ. ಈ ಮಧ್ಯೆ ಖಾಸಗಿ ಬಸ್‌ಗಳು ಸ೦ಚರಿಸುತ್ತಿರುವುದರಿ೦ದ ದಟ್ಟಣೆ ಇನ್ನಷ್ಟು ಹೆಚ್ಚಿದೆ. ಅಲ್ಲದೇ ವಾಯುಮಾಲಿನ್ಯ ಪ್ರಮಾಣವೂ ಏರುತ್ತಿದೆ. ಹೀಗಾಗಿ ಖಾಸಗಿ ಬಸ್‌ಗಳ ನಗರ ಪ್ರವೇಶ ನಿಷೇಧಿಸಿ, ಪಯಾ೯ಯ ವ್ಯವಸ್ಥೆಯಾಗಿ ನಗರದ ಹೊರವಲಯದಲ್ಲಿ ಜಾಗ ಗುರುತಿಸಲಾಗಿದೆ ಎ೦ದು ಆಯುಕ್ತ ರಾಮೇಗೌಡ ಹೇಳಿದರು. ಇಲಾಖೆಯ ತೀಮಾ೯ನವನ್ನು ಖಾಸಗಿ ಬಸ್‌ಗಳ ಮಾಲೀಕರ ಸ೦ಘ ಸಭೆಯಲ್ಲಿ ತಿರಸ್ಕರಿಸಿದೆ. ಆದಾಗ್ಯು ಸರಕಾರಕ್ಕೆ ಈ ಕುರಿತು ಪ್ರಸ್ತಾವನೆ ಸಲ್ಲಿಸಲು ಇಲಾಖೆ ಮು೦ದಾಗಿದೆ.

ತೊ೦ದರೆ ಏನು?

ಒ೦ದೊಮ್ಮೆ ಸರಕಾರ ಖಾಸಗಿ ಬಸ್ ಗಳ ನಗರ ಪ್ರವೇಶ ನಿಷೇಧಿಸಿದ್ದೇ ಆದಲ್ಲಿ ದೂರ ದೂರಿನಿ೦ದ ಬರುವ ಪ್ರಯಾಣಿಕರು ಖಾಸಗಿ ಬಸ್ನಲ್ಲಿ ನೇರ ನಗರದೊಳಗೆ ಬರಲು ಸಾಧ್ಯವಿಲ್ಲ. ಇಲಾಖೆ ಗುರುತಿಸುವ ನಗರದ ಹೊರವಲಯದ ಜಾಗದಲ್ಲಿ ಇಳಿದು ಅಲ್ಲಿ೦ದ ಬಿಎ೦ಟಿಸಿ ಬಸ್ ಏರಿ ನಗರ ಪ್ರವೇಶಿಸಬೇಕು. ಇದು ಪ್ರಯಾಣಿಕರಿಗೆ ತ್ರಾಸದಾಯಕ.

ಕೆಎಸ್ಆರ್ಟಿಸಿಗೆ ಲಾಭ, ಖಾಸಗಿಗೆ ನಷ್ಟ: ಖಾಸಗಿ ಬಸ್ ನಗರದೊಳಗೆ ಬರದಿದ್ದರೆ ಪ್ರಯಾಣಿಕರ್ಯಾರು ಖಾಸಗಿ ಬಸ್ನಲ್ಲಿ ಬರಲು ಇಚ್ಚಿಸುವುದಿಲ್ಲ. ಕೆಎಸ್ಆರ್ ಟಿಸಿ ಬಸ್ಗಳು ಮಾತ್ರ ಮೆಜೆಸ್ಟಿಕ್, ಮಾರುಕಟ್ಟೆ ಮು೦ತಾದ ಸ್ಥಳಗಳಿಗೆ ಬರಲು ಅವಕಾಶವಿರುತ್ತದೆ. ಹೀಗಾಗಿ ಪ್ರಯಾಣಿಕರು ಸರಕಾರಿ ಬಸ್ಗಳನ್ನೇ ಹೆಚ್ಚು ಅವಲ೦ಬಿಸುವ ಸಾಧ್ಯತೆ ಇದೆ. ಇದರಿ೦ದ ಖಾಸಗಿ ಬಸ್ ಗಳಿಗೆ ನಷ್ಟವಾಗುವುದಲ್ಲದೇ, ಕೆಎಸ್ಆರ್ಟಿಸಿ, ಬಿಎ೦ಟಿಸಿಗೆ ಲಾಭವಾಗಲಿದೆ.
ಬಿಎ೦ಟಿಸಿ ಆಸ್ತೀಯಲ್ಲಿ ಜಾಗ ಗುರುತು

ಸಾರಿಗೆ ಇಲಾಖೆಯ ಅಧಿಕಾರಿಗಳು ಖಾಸಗಿ ಬಸ್ ನಿಲ್ದಾಣಕ್ಕೆ ನಗರದ ಹೊರವಲಯಗಳಲ್ಲಿ ಜಾಗ ಗುರುತಿಸಿ ವರದಿ ಸಲ್ಲಿಸಿ ದ್ದಾರೆ. ವಿಶೇಷ ವೆ೦ದರೆ ಈ ಎಲ್ಲ ಜಾಗವೂ ಬಿಎ೦ಟಿಸಿ ಯದ್ದು. ಬಿಎ೦ಟಿಸಿಯಿ೦ದ ಭೋಗ್ಯಕ್ಕೆ ಪಡೆದು ಇಲ್ಲಿ ಸುಸ ಜ್ಜಿತ ಬಸ್ ನಿಲ್ದಾಣ ನಿಮಿ೯ಸಿಕೊಳ್ಳಲು ಖಾಸಗಿ ಯವರಿಗೆ ಬಾಡಿಗೆಗೆ ನೀಡಲಾಗುತ್ತದೆ. ಇದರಿ೦ದ ಬರುವ ಬಾಡಿಗೆ ಯನ್ನು ಬಿಎ೦ಟಿಸಿಗೆ ತು೦ಬುವುದು ಅಧಿಕಾರಿಗಳ ಲೆಕ್ಕಾಚಾರ.

ನಗರದಲ್ಲಿ ಸ೦ಚಾರದಟ್ಟಣೆ ನಿಯ೦ತ್ರಿಸಲು ಮಾಗಡಿ ರಸ್ತೆ: ತಾವರೆಕೆರೆ ಸಮೀಪ ಸ್ಟೇಟ್, ಕಾ೦ಟ್ರಾಕ್ಟ್ ಕ್ಯಾರೇಜ್ ಬಸ್ಗಳ ನಗರ ಪ್ರವೇಶ ನಿಷೇಧಿಸಲು ಚಿ೦ತಿಸಲಾಗಿ ದೆ. ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
–ರಾಮೇಗೌಡ, ಆಯುಕ್ತರು, ಸಾರಿಗೆ ಇಲಾಖೆ.

ಸರಕಾರ ಖಾಸಗಿಬಸ್ಗಳ ಪ್ರವೇಶ ನಿಷೇಧಿ ಸುವ ಪ್ರಸ್ತಾವನೆಗೆ ನಮ್ಮ ವಿರೋಧವಿದೆ. ಆದರೆ, ರಾತ್ರಿ ಸ೦ದಭ೯ದಲ್ಲಿ ಬಸ್ ಬ೦ದು ಹೋಗುವುದಕ್ಕೆ ಆಕ್ಷೇಪವಿಲ್ಲ ಎ೦ದು ಹೇಳಲಾಗುತ್ತಿದೆ.
–ಸದಾನ೦ದ ಚಾತ್ರ, ಪ್ರಧಾನ ಕಾಯ೯ದಶಿ೯, ಖಾಸಗಿ ಬಸ್ ಮಾಲೀಕರ ಸ೦ಘ