ಖಾಸಗಿ ಆಸ್ಪತ್ರೆ ಕೆಲಸಗಾರರಿಗೆ ಸಿಹಿ ಸುದ್ದಿ!!

2
2020

ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯವನ್ನು ಮಾಡುವ ವೈದ್ಯರಿಗೆ ಹಾಗೂ ದಾದಿಯರಿಗೆ ಇಲ್ಲಿದೆ ಸಿಹಿ ಸುದ್ದಿ. ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ ಹೊಸ ಆದೇಶವನ್ನು ಹೊರಡಿಸಿದ್ದು, ಆಸ್ಪತ್ರೆಗಳಲ್ಲಿ ಕಾರ್ಯಮಾಡುವ ವೈದ್ಯರು ಹಾಗೂ ನರ್ಸ್ ಗಳಿಗೆ ಕನಿಷ್ಠ ವೇತನ ನಿಗದಿ ಮಾಡುವಂತೆ ಕೇಳಿಕೊಂಡಿದೆ.

ಪ್ರಸಕ್ತ ವರ್ಷದ ಜನವರಿ 6ರಿಂದ ಈ ಆದೇಶ ಜಾರಿಗೆ ಬಂದಿದ್ದು, ಎಲ್ಲ ಖಾಸಗಿ ಆಸ್ಪತ್ರೆಗಳು ಹಾಗೂ ಸರ್ಕಾರದ ಅನುಮತಿ ಪಡೆದ ಉದ್ದಿಮಗಳಿಗೆ ಅನ್ವಯವಾಗುತ್ತದೆ ಎಂದು ಆದೇಶಿಸಲಾಗಿದೆ.

Image result for private hospital workers india

ಇದರಂತೆ ಕಿರಿಯ ವೈದ್ಯರು, ಆಯುರ್ವೇದಿಕ್ ವೈದ್ಯರು, ಹೋಮಿಯೋಪತಿ ವೈದ್ಯರು ಈ ಕಾಯ್ದೆ ಅನುಸಾರ ಸುಮಾರು 40 ಸಾವಿರ ಹಣವನ್ನು ಪಡೆಯಲಿದ್ದಾರೆ.

ಕನಿಷ್ಠ ವೇತನವನ್ನು ಮೂರು ವಲಯಗಳಲ್ಲಿ ವಿಂಗಡಿಸಲಾಗಿದೆ. ಆಯಾ ಜನರ ಜೀವನ ನಿರ್ವಹಣೆ ಬೇಕಾದ ಅಗತ್ಯತೆಗಳನ್ನು ಮನಗೊಂಡು ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಅಲ್ಲದೆ ಪಟ್ಟಣ, ಮಹಾನಗರ ಪಾಲಿಕೆ, ಹೋಬಳಿಗಳನ್ನು ಮೂರು ವಲಯಗಳಲ್ಲಿ ವಿಂಗಡಿಸಲಾಗಿದೆ.

Image result for private hospital workers india

ಹೆಚ್ಚಿನ ಸವಲತ್ತು ಏನು ಸಿಗುತ್ತೆ?

1-    ವಾರದ ರಜಾ ದಿನದಲ್ಲಿ ಕೆಲಸ ಮಾಡಿದರೆ ಆ ದಿನದ ಕೂಲಿ ನೀಡಬೇಕು.

2-    ಕೆಲಸಗಾರ 8 ಗಂಟೆಗಿಂತ ಹೆಚ್ಚಿನ ಸಮಯ ಕೆಲಸ ನಿರ್ವಹಿಸದಲ್ಲಿ, ಆತನಿಗೆ ಹೆಚ್ಚುವರಿ ಮೊಬಲಗನ್ನು ನೀಡತ್ತಕ್ಕದ್ದು

3-    ಹಬ್ಬದ ದಿನಗಳಲ್ಲೂ ಕೆಲಸ ಮಾಡಿದವರಿಗೆ ಅವರ ಒಂದು ದಿನದ ಸಂಬಳ ಒದಗಿಸಬೇಕು.

4-    ಕೆಲಸಗಾರನಿಗೆ ನೀಡುವ ಹಣವನ್ನು ಚೆಕ್ ಅಥವಾ ಬ್ಯಾಂಕ್ ಗೆ ವರ್ಗಾಯಿಸಬೇಕು.

ಈ ನಿಯಮದ ಅನ್ವಯ ಶೌಚಾಲಯ ಶುಚಿಗೊಳಿಸುವ ಕಾರ್ಮಿಕರಿಗೆ (ಸುಮಾರು 12870 ರಿಂದ 14 ಸಾವಿರ), ಲಿಫ್ಟ್/ ಆಂಬುಲೆನ್ಸ್ ಚಾಲಕರಿಗೆ (9100-10270), ಡಿಪ್ಲೋಮಾ ಮಾಡಿದ ಹೋಮಿಯೋಪತಿ, ವೈದ್ಯರು, ಮೈಕ್ರೋಬಯಾಲಜಿಸ್ಟ್‍ (10140-11180) ವೇತನವನ್ನು ನಿಗದಿ ಪಡಿಸಲಾಗಿದೆ.