ಚಂದನ್ ಶೆಟ್ಟಿಯನ್ನು ಬಂಧಿಸಲೇಬೇಕೆಂದು ಹೋರಾಟಕ್ಕಿಳಿದ ಕನ್ನಡ ಸಂಘಟನೆಗಳು; ಈ ಜೋಡಿಗೆ ಆರು ತಿಂಗಳಲ್ಲಿ ತಾಯಿ ಶಿಕ್ಷೆ ನೀಡುತ್ತಾಳೆಂದು ಶಾಪ ಹಾಕಿದ ಸಚಿವ.!

0
361

ಮೈಸೂರು ಯುವ ದಸರಾ ವೇದಿಕೆಯನ್ನು ಚಂದನ್ ಶೆಟ್ಟಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪದ ಮೇಲೆ ಅವರನ್ನು ಕೂಡಲೇ ಬಂಧಿಸಬೇಕು ಎನ್ನುವ ಹೋರಾಟ ಶುರುವಾಗಿದೆ. ಕ್ಷಮೆ ಕೇಳಿದರೆ ಸರಿ ಹೋಗಲ್ಲ. ಆತನನ್ನು ಬಂಧಿಸಬೇಕು. ಚಂದನ್ ಶೆಟ್ಟಿಗೆ ವೇದಿಕೆ ಹತ್ತಲು ಯೋಗ್ಯತೆ ಇಲ್ಲ. ಇನ್ನು ಮುಂದೆ ಚಂದನ್ ಶೆಟ್ಟಿ ಯಾವುದೇ ವೇದಿಕೆ ಕಾರ್ಯಕ್ರಮ ಮಾಡಿದರೆ ಅವರಿಗೇ ಮಸಿ ಬಳಿಯುತ್ತೇವೆ ಎಂದು ಜಯ ಕರ್ನಾಟಕ ಸಂಘಟನೆ ಪ್ರತಿಭಟನೆ ಮಾಡುತ್ತಿದೆ.

Also read: ಮೈಸೂರು ದಸರಾ ವೇದಿಕೆಯಲ್ಲೇ ನಿವೇದಿತಾಳಿಗೆ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ; ಸಾಮಾಜಿಕ ಜಾಲತಾಣದಲ್ಲಿ ಭಾರಿ ಟಿಕೆ.!

ಚಂದನ್ ಶೆಟ್ಟಿಯನ್ನು ಬಂಧಿಸಬೇಕು?

ಹೌದು ಶುಕ್ರವಾರ ರಾತ್ರಿ ಯುವ ದಸರಾ ಕಾರ್ಯಕ್ರಮದಲ್ಲಿ ಗೆಳತಿ ನಿವೇದಿತಾ ಗೌಡಗೆ ಪ್ರೇಮ ನಿವೇದನೆ ಮಾಡಿರುವ ವಿಚಾರ ಈಗ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ. ಇಂದು ಜಯಕರ್ನಾಟಕ ಸಂಘಟನೆಯಿಂದ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಚಂದನ್ ಶೆಟ್ಟಿ ಪ್ರಪೋಸ್ ಮಾಡುವ ಮೂಲಕ ವಿಶ್ವಪ್ರಸಿದ್ಧ ಮೈಸೂರು ದಸರಾ ವೇದಿಕೆಯನ್ನ ವೈಯಕ್ತಿಕ ವಿಚಾರಕ್ಕೆ ಬಳಸಿದ್ದಾರೆ ಎಂದು ಖಂಡಿಸಿದ್ದಾರೆ. ಕ್ಷಮೆ ಕೇಳಿದರೆ ಸರಿ ಹೋಗಲ್ಲ. ಆತನನ್ನು ಬಂಧಿಸಬೇಕು. ಚಂದನ್ ಶೆಟ್ಟಿಗೆ ವೇದಿಕೆ ಹತ್ತಲು ಯೋಗ್ಯತೆ ಇಲ್ಲ. ಇನ್ನು ಮುಂದೆ ಚಂದನ್ ಶೆಟ್ಟಿ ಯಾವುದೇ ವೇದಿಕೆ ಕಾರ್ಯಕ್ರಮ ಮಾಡಿದರೆ ಅವರಿಗೇ ಮಸಿ ಬಳಿಯುತ್ತೇವೆ ಎಂದು ಎಚ್ಚರಿಕೆ ನೀಡಿದರು.

Also read: ಸುದೀಪ್ ಸಿನಿಮಾ ನೋಡಿ ರೋಮ ಎದ್ದು ನಿಲ್ಲುತಂತೆ; ಸರಿಯಾದ ಹುಲಿ ಬಂದ್ರೆ ‘ಹೆಬ್ಬುಲಿ’ ಓಡಿ ಹೋಗ್ತಾರೆ ನಟ ಸುದೀಪ್ ಕುರಿತು ವಿನಯ್ ಗುರೂಜಿ ಅಪಹಾಸ್ಯ.!

ಮೈಸೂರು ದಸರಾಕ್ಕೆ ಇದು ಅವಮಾನ ಎಂದು ಅಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು, ದಸರಾ ವೇದಿಕೆಗೆ ಅವಮಾನ ಮಾಡಿದ ಚಂದನ್ ಶೆಟ್ಟಿಯನ್ನ ಬಂಧಿಸುವಂತೆ, ಅಲ್ಲದೆ ಚಂದನ್ ಮೇಲೆ ಕೇಸು ದಾಖಲಾಗಬೇಕು ಎಂದು ಒತ್ತಾಯ ಮಾಡಿದ್ದಾರೆ. ನಾಡ ದೇವತೆ ಚಾಮುಂಡೇಶ್ವರಿ ದೇವಿಗೆ ಇದು ಅಪಮಾನ ಮಾಡಿದ ಹಾಗೇ ಎಂದು ಅರೋಪ ಮಾಡಿದ್ದಾರೆ. ಚಂದನ್ ಶೆಟ್ಟಿ ಹಾಗೂ ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಜಯಕರ್ನಾಟಕ ಜಿಲ್ಲಾಧ್ಯಕ್ಷ ಜಗದೀಶ್ ಮಾತನಾಡಿ, ಐತಿಹಾಸಕ ಪರಂಪರೆ ಇರುವ ದಸರಾಕ್ಕೆ ಕಳಂಕ ತಂದಿದ್ದಾರೆ. ಹಿನ್ನಲೆ ಗಾಯಕ ಚಂದನ್ ಶೆಟ್ಟಿಯ ಮೈಸೂರು ದಸರಾ ವೇದಿಕೆಯನ್ನ ವೈಯುಕ್ತಿಕ ವಿಚಾರಕ್ಕೆ ಬಳಕೆ ಮಾಡಿಕೊಂಡಿದ್ದಾನೆ. ಇದು ಸರ್ಕಾರದ ವೇದಿಕೆ, ಏನ್ ಆ ವೇದಿಕೆ ಅವರಪ್ಪನದ್ದಾ, ಜಿಲ್ಲಾಡಳಿತ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಇದು ನಮ್ಮ ದಸರಾಕ್ಕೆ ಮಾಡಿದ ಅಪಮಾನ ಎಂದು ಕಿಡಿಕಾರಿದ್ದಾರೆ.

ಆರು ತಿಂಗಳಲ್ಲಿ ತಾಯಿ ಶಿಕ್ಷೆ ನೀಡುತ್ತಾಳೆ;

ಚಂದನ್ ಶೆಟ್ಟಿ ವಿರುದ್ಧ ಮಾತನಾಡಿದ ಮೈಸೂರು ಉಸ್ತುವಾರಿ ಸಚಿವ ವಿ ಸೋಮಣ್ಣಇದರಿಂದ ಕೆಂಡಾಮಂಡಲವಾಗಿದ್ದು ಇದು ಅಕ್ಷಮ್ಯ ಅಪರಾಧ ಎಂದಿದ್ದಾರೆ. ಚಂದನ್ ಮತ್ತು ನಿವೇದಿತಾ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಸೋಮಣ್ಣ, ಯುವ ದಸರಾ ವೇದಿಕೆ ಚಾಮುಂಡಿಶ್ವರಿಯ ದೇವರ ಸನ್ನಿಧಿ. ಆ ತಾಯಿಯ ಸನ್ನಿಧಿಯಲ್ಲಿ ಈ ರೀತಿಯ ನಡೆ ಸರಿಯಲ್ಲ. ಇನ್ನು ಆರು ತಿಂಗಳಲ್ಲಿ ಅವರಿಬ್ಬರಿಗೂ ಆ ತಾಯಿ ಶಿಕ್ಷೆ ನೀಡುತ್ತಾಳೆ. ಈ ಅಪರಾಧಕ್ಕೆ ಕ್ಷಮೆಯೇ ಇಲ್ಲ ಎಂದಿದ್ದಾರೆ.

Also read: ಹೊಟ್ಟೆ ಪಾಡಿಗಾಗಿ ಕೆಲಸ ಹುಡುಕುತ ಮುಂಬೈ ಹೋದ ಯುವಕರಿಗೆ ಒಲಿಯಿತು 23. ಕೋಟಿ ರೂ. ಲಾಟರಿ.! —

ತಪ್ಪು ಅಂತ ಒಪ್ಪಿಕೊಳ್ಳುವುದಿಲ್ಲ ನಿವೇದಿತಾ ಗೌಡ

ಯುವ ದಸರಾ ವೇದಿಕೆಯನ್ನು ಚಂದನ್ ಶೆಟ್ಟಿ ದುರ್ಬಳಕೆ ಮಾಡಿಕೊಂಡರು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ನಿವೇದಿತಾ ಗೌಡ, ನಮ್ಮ ವೈಯಕ್ತಿಕ ಜೀವನದ ಬಗ್ಗೆ ಅನೇಕರು ಮಾತನಾಡಿದ್ದಾರೆ. ನಾವು ಕಪಲ್ಸ್, ಫ್ರೆಂಡ್ಸ್ ಅಂತ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಕೆಲವರು ರೂಮರ್ಸ್ ಎಬ್ಬಿಸಿದರು. ಯುವ ದಸರಾದಲ್ಲಿ ಪ್ರಪೋಸ್ ಮಾಡಿದ್ದರಲ್ಲಿ ತಪ್ಪೇನಿದೆ? ವೇದಿಕೆಯನ್ನು ಕೆಟ್ಟ ರೀತಿಯಲ್ಲಿ ಬಳಸಿಕೊಂಡಿಲ್ಲ. ಒಂದು ವೇಳೆ ವೇದಿಕೆ ಮೇಲೆ ಮದುವೆ ಆಗಿದ್ದರೆ ತಪ್ಪಾಗುತಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.