ಕರ್ನಾಟಕದಲ್ಲಿ ಮೋದಿ ಅಬ್ಬರ; ರಾಹುಲ್ ಸಂವಾದದಲ್ಲೇ ಮೋದಿ ಪರ ಘೋಷಣೆ..

0
340

ಲೋಕಸಭಾ ಚುನಾವಣೆಯ ಪ್ರಚಾರದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಕರ್ನಾಟಕದಲ್ಲಿ ಮುಜುಗರಕ್ಕೆ ಒಳಗಾದ ಘಟನೆಯೊಂದು ನಡೆದಿದೆ. ಬೆಂಗಳೂರಿನಲ್ಲಿ ಸಂವಾದ ಸಭೆ ನಡೆಯುವ ವೇಳೆ ಟೆಕ್ಕಿಗಳ ಗುಂಪೊಂದು ಮೋದಿ ಮೋದಿ, ಹರಹರ ಮೋದಿ ಎಂದು ಕೂಗುತ್ತ ‘ಮತ್ತೊಮ್ಮೆ ಮೋದಿ’ ಎಂಬ ಫಲಕಗಳನ್ನು ಪ್ರದರ್ಶಿಸಿತು. ಇದರಿಂದ ಕಾಂಗ್ರೆಸ್‌ ನಾಯಕರು ಮತ್ತು ಟೆಕ್ಕಿಗಳ ನಡುವೆ ಚಕಮಕಿ ನಡೆದು ಟೆಕ್ಕಿಗಳ ವಿರುದ್ದ ಪೊಲೀಸ್ ಲಾಟಿ ಬಿಸಲಾಯಿತು.

Also read: ಲಾಲ್ ಬಹದ್ದೂರ್ ಶಾಸ್ತ್ರಿ, ವಾಜಪೇಯಿ ನಂತರ ಪ್ರಧಾನಿ ಆದ ಮೇಲೂ ಬೃಹತ್ ಆಸ್ತಿ ಮಾಡದ ಏಕೈಕ ಪ್ರಧಾನಿ ಅಂದ್ರೆ ಮೋದಿ ಅನ್ಸುತ್ತೆ; ಮೋದಿ ಆಸ್ತಿ ವಿವರ ನೋಡಿ ನಿಮ್ಗೆ ಗೊತ್ತಾಗುತ್ತೆ!!

ಏನಿದು ಘಟನೆ?

ಸೋಮವಾರ ಸಂಜೆ ಮಾನ್ಯತಾ ಟೆಕ್ ಪಾರ್ಕಿ ನ ಆಂಪಿ ಥಿಯೇಟರ್ ನಲ್ಲಿ ನವೋದ್ಯಮಿಗಳ ಜೊತೆ ರಾಹುಲ್ ಗಾಂಧಿ ಸಂವಾದ ಕಾರ್ಯಕ್ರಮ ಆಯೋಜನೆಗೊಂಡಿತ್ತು. ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ಕುಳಿತಿದ್ದ ಟೆಕ್ಕಿಗಳು “ಮೋದಿ ಮೋದಿ” ಎಂದು ಕರೆದು ಆರಂಭದಲ್ಲೇ ಮುಖಭಂಗ ಮಾಡಿದ್ದಾರೆ. ಇದರಿಂದ ಇರಸುಮುರಸು ಅನುಭವಿಸಿದ ರಾಹುಲ್‌ ಗಾಂಧಿ ಪಾರ್ಕ್‌ನ ಒಳ ಪ್ರವೇಶಿಸುತ್ತಿದ್ದಂತೆ ವಿಶ್ರಾಂತಿಗೆ ತೆರಳಿದರು. ಇದೇ ಕಾರಣದಿಂದ ಅವರು ಸಂವಾದ ಸ್ಥಳಕ್ಕೆ ಬರಲು ಸುಮಾರು 20 ನಿಮಿಷ ವಿಳಂಬವಾಗಿದೆ.

ಸಂವಾದ ಮುಗಿಸಿ ರಾಹುಲ್ ಹೊರಹೋಗುವಾಗಲೂ ಈ ಗುಂಪು ಮೋದಿ ಮೋದಿ, ಹರಹರ ಮೋದಿ ಎಂದು ಕೂಗುತ್ತ ‘ಮತ್ತೊಮ್ಮೆ ಮೋದಿ’ ಎಂಬ ಫಲಕಗಳನ್ನು ಪ್ರದರ್ಶಿಸಿತು. ಈ ಘಟನೆಯಿಂದ ಕೆಂಡಾಮಂಡಲಗೊಂಡ ರಾಹುಲ್ ಗಾಂಧಿ ಸ್ಥಳೀಯ ಶಾಸಕರೂ ಆಗಿರುವ ಸಚಿವ ಕೃಷ್ಣ ಬೈರೇಗೌಡ ಹಾಗೂ ಮಾಧ್ಯಮ ವಿಭಾಗದ ಮುಖ್ಯಸ್ಥ ರಿಜ್ವಾನ್ ಅರ್ಷದ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು ಎಂದು ಮೂಲಗಳು ತಿಳಿಸಿವೆ.

ರಾಹುಲ್ ಗಾಂಧಿ ಗರಂ;

ಇಷ್ಟೊಂದು ಜನರು ಬಂದು ಭಿತ್ತಿ ಪತ್ರಗಳನ್ನು ಹಿಡಿದು ಮೋದಿ ಪರ ಘೋಷಣೆ ಕೂಗುತ್ತಾರೆಂದರೆ ಅರ್ಥವೇನು? ಇಂತಹ ಜಾಗದಲ್ಲಿ ಕಾರ್ಯಕ್ರಮ ಆಯೋಜಿಸುವ ಅಗತ್ಯವೇ ಇರಲಿಲ್ಲ. ಸ್ಥಳದ ಆಯ್ಕೆಯಲ್ಲಿ ಎಡವಲಾಗಿದೆ. ಜತೆಗೆ ಟೆಕ್ಕಿಗಳೆಲ್ಲ ಸಂಘಟಿತರಾಗಿ ಬೋರ್ಡ್‌ ಹಿಡಿದುಕೊಂಡು ಬಂದದ್ದೂ ನಿಮ್ಮ ಪೊಲೀಸರಿಗೆ ಗೊತ್ತಾಗಲಿಲ್ಲವಾ? ಇದು ಗುಪ್ತಚರ ವೈಫಲ್ಯವಲ್ಲವಾ? ನಮಗೆ ಮುಜುಗರವಾಗುತ್ತಿರುವಾಗ ಕಾಂಗ್ರೆಸ್‌ ಪರ ಗಟ್ಟಿ ದನಿಯಲ್ಲಿ ಘೋಷಣೆ ಕೂಗಿ ಮೋದಿ ಬೆಂಬಲಿಗರಿಗೆ ತಿರುಗೇಟು ಕೊಡುವ ಕೆಲಸವೂ ಸರಿಯಾಗಿ ನಡೆಯಲಿಲ್ಲ. ಕರ್ನಾಟಕ ಪ್ರವಾಸದಲ್ಲೇ ಇದೊಂದು ಕೆಟ್ಟ ಅನುಭವ” ಎಂದು ಬೇಸರ ತೋಡಿಕೊಂಡರು ಎನ್ನಲಾಗಿದೆ.

ಲಘುಲಾಠಿ ಪ್ರಹಾರ ಟೆಕ್ಕಿಗಳು ವಶಕ್ಕೆ

ರಾಹುಲ್‌ ಬರುತ್ತಿದ್ದಂತೆ ಟೆಕ್ಕಿಗಳು ಮೋದಿ ಪರ ಘೋಷಣೆ ಕೂಗಿದರು. ಮೋದಿ ಮತ್ತೊಮ್ಮೆ, ಹರಹರ ಮೋದಿ, ಈ ಬಾರಿ 400 ಸೀಟುಗಳು ಬಿಜೆಪಿಗೆ, ಸಾಫ್‌ ನಿಯತ್‌-ಸಬ್‌ಕಾ ವಿಕಾಸ್‌ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಜತೆಗೆ ಗೋಬ್ಯಾಕ್‌ ರಾಹುಲ್‌ ಎಂಬ ಘೋಷಣೆ ಕೂಗಿದರು. ತಿರುಗೇಟು ನೀಡಲು ಕಾಂಗ್ರೆಸ್‌ ಕಾರ್ಯಕರ್ತರು ಮುಂದಾದರೂ ಟೆಕ್ಕಿಗಳ ಅಬ್ಬರದ ನಡುವೆ ಅವರ ಧ್ವನಿ ಮೊಳಗಲಿಲ್ಲ. ಇದು ಸ್ಥಳದಲ್ಲಿದ್ದ ಎನ್‌ಎಸ್‌ಯುಐ ಕಾರ್ಯಕರ್ತರನ್ನು ಸಿಟ್ಟಿಗೆಬ್ಬಿಸಿದ್ದು, ಅವರು ಘೋಷಣೆ ಕೂಗುತ್ತಿದ್ದ ಗುಂಪಿನ ವರ್ತನೆಯನ್ನು ಆಕ್ಷೇಪಿಸಿದರು.

ಆಗ ಗುಂಪು ಹಾಗೂ ಎನ್‌ಎಸ್ ಯುಐ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಒಂದು ಹಂತದಲ್ಲಿ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಲಾಠಿ ಪ್ರಹಾರ ಕೂಡ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಇಷ್ಟಾಗಿಯೂ ರಾಹುಲ್ ಗಾಂಧಿ ಕಾರ್ಯಕ್ರಮ ಮುಗಿಸಿ ಹೊರ ಹೋಗುವಾಗಲೂ ಗುಂಪಿನಿಂದ ಮೋದಿ ಪರ ಘೋಷಣೆ ಕೇಳಿ ಬಂದಿದೆ. ಇದು ರಾಹುಲ್ ಗಾಂಧಿ ಅವರಿಗೆ ತೀವ್ರ ಬೇಸರ ಉಂಟು ಮಾಡಿದೆ. ಈ ಹಂತದಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ನಂತರ ಕೆಲವು ಟೆಕ್ಕಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರೆಂದು ತಿಳಿದಿದೆ.

Also read: ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಕರ್ನಾಟಕದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಆಹ್ವಾನ; ಕರ್ನಾಟಕದಲ್ಲಿ ರಾಹುಲ್ ಸ್ಪರ್ಧೆಯ ಬಗ್ಗೆ ನಿಮ್ಮ ಅಭಿಪ್ರಾಯ?