ಲೈಂಗಿಕ ಶಕ್ತಿಯನ್ನು ವೃದ್ಧಿಸಲು ದುಬಾರಿ ಮಾತ್ರೆ ಮದ್ದುಗಳ ಮೊರೆ ಹೋಗೋ ಮೊದ್ಲುಈ ಮನೆ ಔಷಧಿಗಳಿಂದ ಉತ್ತಮ ಪರಿಹಾರ ಕಂಡುಕೊಳ್ಳಿ…

0
5633

ವಿಪರೀತ ಒತ್ತಡ, ಚಿಂತೆ, ವ್ಯಸನ, ದುಃಖ, ನಿದ್ರಾಹೀನತೆ, ವ್ಯಾಯಾಮ ಇಲ್ಲದಿರುವಿಕೆ, ಅಜೀರ್ಣ, ಹೊಟ್ಟೆ ಕೆಟ್ಟಿರುವಿಕೆ, ಅವಿಶ್ರಾಂತ ಜೀವನ ಮುಂತಾದವುಗಳು ಕಾಮಾಸಕ್ತಿಯನ್ನು ಕಡಿಮೆ ಮಾಡುತ್ತವೆ.ಉತ್ತಮ ವ್ಯಾಯಾಮದ ಜೊತೆ ಒಳ್ಳೆಯ ಆಹಾರ ಪದ್ದತಿಯು ಲೈಂಗಿಕ ಶಕ್ತಿಯನ್ನಷ್ಟೇ ಅಲ್ಲದೆ ಹಲವಾರು ರೋಗಗಳ ತಡೆಗಟ್ಟುವಿಕೆಗೆ ಕಾರಣವಾಗುತ್ತದೆ.

ಈ ಕೆಳಗಿನ ಮನೆಮದ್ದುಗಳನ್ನು ಪಾಲಿಸಿದ್ದಲ್ಲಿ ಲೈಂಗಿಕ ಶಕ್ತಿ ವೃದ್ಧಿಯಾಗುವುದರಲ್ಲಿ ಸಂಶಯವೇ ಇಲ್ಲ..

೧) ೨೧ ದಿನಗಳ ಕಾಲ ಬೆಳಿಗ್ಗೆ ಕಾಳಿ ಹೊಟ್ಟೆಯಲ್ಲಿ ಬೇವಿನ ರಸ ಸೇವಿಸಿದ್ದಲ್ಲಿ ನಿಶ್ಶಕ್ತಿಯು ಕಡಿಮೆಯಾಗಿ ಕಾಮಾಸಕ್ತಿಯು ಜಾಸ್ತಿಯಾಗುತ್ತದೆ.
೨) ತುಳಸಿ ಬೇರಿನ ಚೂರ್ಣ ಅಥ್ವಾ ತುಳಸಿ ಬೀಜದ ಚೂರ್ಣವನ್ನು ಬೆಲ್ಲದೊಂದಿಗೆ ಸೇವಿಸುತ್ತಿದ್ದರೆ ವೀರ್ಯವೃದ್ಧಿಯಾಗುತ್ತದೆ.
೩) ತುಳಸಿ ಗಿಡದ ಬಲಿತ ಬೇರನ್ನು ಹಲ್ಲುಗಳಿಂದ ಕಚ್ಚಿ ಅಗಿದು ತಿಂದರೆ ಪುರುಷತ್ವ ಬರುತ್ತದೆ.

೪) ಇಪ್ಪತ್ತೊಂದು ದಿನಗಳ ಕಾಲ ಒಮುಕಾಳು ಸಣ್ಣಗೆ ಪುಡಿ ಮಾಡಿ ಒಂದು ಟಿ ಚಮಚ ಊಟದ ನಂತರ ತಿಂದಲ್ಲಿ ವೀರ್ಯವೃದ್ಧಿಯೊಂದಿಗೆ ದೈಹಿಕ ಶಕ್ತಿ ಲಭಿಸುವುದು.
೫) ಜವೆಗೋಧಿ ಮತ್ತು ಖರ್ಜೂರ ಸಮಪ್ರಮಾಣದಲ್ಲಿ ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿ ಬಿಸಿ ಮಾಡಿ ಅದಕ್ಕೆ ಹಾಲು, ಕಲ್ಲುಸಕ್ಕರೆ ಮತ್ತು ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಚಿಟಿಕೆ ಏಲಕ್ಕಿ ಪುಡಿಯನ್ನು ಬೆರೆಸಿ ಪಾಯಸ ಮಾಡಿ ದಿನಕ್ಕೆರಡು ಬಾರಿ ಸೇವಿಸಬೇಕು.
೬) ಬಿಸಿ ನೀರಿನಲ್ಲಿ ತೊಳೆದ ಖರ್ಜೂರದ ಜೊತೆ ನೆನಸಿದ ಬಾದಾಮಿ ಮತ್ತು ಗೋಡಂಬಿಯನ್ನು ಅಗಿದು ತಿಂದು ಹಾಲು ಸೇವಿಸಬೇಕು.

೭) ವೀರ್ಯವು ಅತಿ ನೀರಾಗಿ ಹರಿಯುತ್ತಿದ್ದರೆ ಅತ್ತಿಯ ಮರದ ಚಕ್ಕೆ, ಆಲದ ಮರದ ಎಳೆಯ ಕುಡಿ, ಕಲ್ಲುಸಕ್ಕರೆ ಈ ಮೂರನ್ನು ನುಣ್ಣಗೆ ಅರೆದು ನೊರೆಹಾಲಿನಲ್ಲಿ ಕದಡಿ ೪೦ ದಿನಗಳ ಕಾಲ ದಿನಕ್ಕೆರಡು ಬಾರಿಯಂತೆ ಕುದಿದ್ದಲ್ಲಿ ಸಮಸ್ಯೆ ಪರಿಹಾರವಾಗುತ್ತದೆ.
೮)ಪ್ರತಿದಿನ ಬೆಳಗ್ಗೆ ಒಂದು ತುಂಡು ಕಲ್ಲುಸಕ್ಕರೆಯ ಮೇಲೆ ಸ್ವಲ್ಪ ಆಲದ ಹಾಲನ್ನು ೧೫-೨೦ ತೊಟ್ಟು ಹಾಕಿ ತಿನ್ನುವುದರಿಂದ ನಪುಂಸಕತೆಯು ನಿವಾರಣೆಯಾಗುತ್ತದೆ.

೯) ಬಾದಾಮಿಯನ್ನು ಮತ್ತು ಹುರಿಗಡಲೆಯನ್ನು ಸಮಪ್ರಮಾಣದಲ್ಲಿ ಬೆರೆಸಿ ಬಾಯಲ್ಲಿ ಅಗಿದು ತಿಂದ ಮೇಲೆ ಹಾಲು ಕುಡಿದರೆ ಲೈಂಗಿಕ ಶಕ್ತಿ ವೃದ್ಧಿಸುತ್ತದೆ.
೧೦) ಕಲ್ಲಂಗಡಿ, ತುಳಸಿ ಎಲೆ, ಹುರಿದ ಹಲಸಿನ ಬೀಜ, ಹುಣಸೆ ಬೀಜ, ಬಾದಾಮಿ, ಒಂದೆಲಗ, ಕಾಮಕೆಸ್ತೂರಿ, ಒಣದ್ರಾಕ್ಷಿ, ಖರ್ಜೂರ, ಗೋಡಂಬಿಗಳನ್ನು ಆಹಾರದಲ್ಲಿ ನಿಯಮಿತವಾಗಿ ಸೇವಿಸುವುದರಿಂದ ಲೈಂಗಿಕ ಶಕ್ತಿ ಹೆಚ್ಚಾಗುತ್ತದೆ.