ಹಾವು ಕಡಿತದಿಂದ ಸಾವನ್ನು ತಪ್ಪಿಸುವ ಮಹಾನ್ ಸಾಧನ ಕಂಡುಹಿಡಿದಿದ್ದಾರೆ ಈ ಪ್ರೊಫೆಸರ್!!

0
6557

ಭಾರತದಲ್ಲಿ ಹಾವನ್ನು ನೋಡಿದರೆ ಜನ ಓಡುತ್ತಾರೆ , ಹಿಡಿಯಲು ಪ್ರಯತ್ನಿಸುತ್ತಾರೆ , ಇನ್ನು ಕೆಲವರು ಅದನ್ನು ಹೊಡೆಯಲು ಮುಂದಾಗುತ್ತಾರೆ , ಇವೆಲ್ಲದರ ನಡುವೆ ಹಾವು ಯಾರಿಗಾದರೂ ಹಾವು ಕಚ್ಚಿದರೆ ಅವನ ಸಾವು ಖಚಿತವಾದಂತೆ , ಯಾಕೆ ಹಾಗೆ ಹಾವು ಕಡಿತ್ತಕ್ಕೆ ಚಿಕಿತ್ಸೆಯೇ ಇಲ್ವಾ ಅನ್ನೋ ಪ್ರಶ್ನೆ ನಿಮ್ಮನ್ನು ಕಾಡೋದು ಸಹಜ.

ಭಾರತದಲ್ಲಿ ಪ್ರತಿವರ್ಷ ೨ ಲಕ್ಷ ಜನ ಹಾವು ಕಡಿತಕ್ಕೆ ಗುರಿಯಾಗುತ್ತಿದ್ದಾರೆ ಜಗತ್ತಿನಲ್ಲಿ ಈ ಸಂಖ್ಯೆ ೫೦ ಲಕ್ಷ. ನಮ್ಮ ದೇಶದಲ್ಲಿ ೨೫೦ ವಿಧದ ಹಾವುಗಳಿದ್ದು ಅದರಲ್ಲಿ ೫೨ ವಿಷ ಸರ್ಪಗಳು ಇವೆ , ಹಾಗು ಅತ್ಯಂತ ವಿಷಕಾರಿಯಾದ ೫ ಹಾವುಗಳಿವೆ. ಅವು ಕಚ್ಚಿದರೆ ಮನುಷ್ಯ ಕೇವಲ ೩ ರೇ ಗಂಟೆಗಳಲ್ಲಿ ಸಾಯುತ್ತಾನೆ.

Also read: ನಿಮಗೆ ಎಲ್ಲಾದರೂ ಹಾವು ಕಚ್ಚಿದರೆ ತಕ್ಷಣಕ್ಕೆ ಏನ್ ಮಾಡಬೇಕು ಅನ್ನೋದು ಇಲ್ಲಿದೆ ನೋಡಿ..!

ಹಾವು ಕಡಿತದಿಂದ ದೇಹದಲ್ಲಿ ವಿಷ ಸೇರಿಕೊಂಡರೆ “ಆಂಟಿ ಸ್ನೇಕ್ ವೀನಮ್” ಬಿಟ್ಟರೆ ಇನ್ಯಾವ ಚಿಕಿತ್ಸೆಯಿಂದಲೂ ಬದುಕುವ ಅವಕಾಶ ಇಲ್ಲ. ಹಾವು ಕಚ್ಚಿದ ವ್ಯಕ್ತಿಗೆ ೩ ಗಂಟೆಗಳ ಒಳಗೆ ಪ್ರಥಮ ಚಿಕಿತ್ಸೆ ಮಾಡಿದರೆ ಉಳಿಯುವ ಸಾಧ್ಯತೆ ಇರುತ್ತದೆ. ನಮ್ಮ ರಾಜ್ಯದಲ್ಲಿ ಪರಿಚಿತವಾದ ೧೦೮ ನಂತಹ ಆಂಬ್ಯುಲೆನ್ಸ್‌ನಲ್ಲಿ “ಆಂಟಿ ಸ್ನೇಕ್ ವೀನಮ್‌” ಲಭ್ಯವಾಗುವಂತೆ ಆದರೆ , ಅಪಾಯದಿಂದ ಬಹಳಷ್ಟು ಜನರನ್ನು ಕಾಪಾಡಬಹುದೆಂದು , ಹಾಗು ಮರಣಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದೆಂದು ಉಪಾಯ ಕಂಡುಹಿಡಿದವರು ಹಿಮಾಚಲ ಪ್ರದೇಶದ ಪ್ರೊಫೆಸರ್ ಡಾಕ್ಟರ್ ಒಮೇಶ್ ಕುಮಾರ್ ಭಾರತಿ.

ಹಾವಿನ ಕಡಿತಕ್ಕೆ ಗುರಿಯಾದ ವ್ಯಕ್ತಿಯನ್ನು ಗಂಟೆಯೊಳಗೆ ಆಸ್ಪತ್ರೆಗೆ ತೆಗೆದುಕೊಂಡು ಹೋದರೆ ಪ್ರಾಣವನ್ನು ಕಾಪಾಡುವ ಅವಕಾಶ ಇದೆ. ಆದರೆ ನಮ್ಮಲ್ಲಿ ಆಂಬ್ಯುಲೆನ್ಸ್‌ನಲ್ಲಿ ಈ ಅವಕಾಶ ಇಲ್ಲ. ಇದರ ಬಗ್ಗೆ ಸರ್ಕಾರಕ್ಕೆ ಸಮಗ್ರ ದೃಷ್ಟಿಕೋನ ಇಲ್ಲ. ಈ ವಿಷಯವನ್ನು ಗಮನಿಸಿದ ಒಮೇಶ್ ಕುಮರ್ , ಹಿಮಾಚಲ ಪ್ರದೇಶದಲ್ಲಿ ಈ ಯೋಜನೆಯನ್ನು ಜಾರಿಗೆ ತಂದು ಕೇವಲ ಒಂದು ವರ್ಷ ಕಳೆಯುವಷ್ಟರಲ್ಲಿ ೪೨ ಜನರ ಪ್ರಾಣ ಕಾಪಾಡಿದರು , ಒಂದು ವೇಳೆ ಜನ , ಏನ್ ಜಿ ಓ ಗಳು ಹಾಗು ಸರ್ಕಾರ ಈ ನಿಟ್ಟಿನಲ್ಲಿ ದೃಷ್ಟಿಹರಿಸಿದರೆ ಹಾವು ಕಚ್ಚಿದ ಎಲ್ಲ ಜನರನ್ನು ಕಾಪಾಡಬಹುದು ಎಂಬುದು ಅವರ ವಾದ.

ಇದರ ಬಗ್ಗೆ ಒಂದು ಸಂಶೋಧನಾ ಪತ್ರವನ್ನು ಇಂಡಿಯನ್ ಜರ್ನಲ್ ಆಫ್ ಅಪ್ಲೈಡ್ ರೀಸರ್ಚ್ ೨೦೧೫ ಕ್ಕೆ ಸಲ್ಲಿಸಿದರು. ಅದನ್ನು ದೇಶದಲ್ಲಿ ಅಷ್ಟೇ ಅಲ್ಲದೆ , ವಿಶ್ವ ಆರೋಗ್ಯ ಸಂಸ್ಥೆ (WHO) ಸಹ ಇದನ್ನು ಹೊಗಳಿತ್ತು. ಈ ವಿಷಯವನ್ನು ಕಳೆದ ವರ್ಷ ಜೆನೀವಾದಲ್ಲಿ ನಡೆದ ವಿಶ್ವ ಆರೋಗ್ಯ ಸಂಸ್ಥೆ (WHO) ಶೃಂಗದಲ್ಲಿ ಪ್ರಸ್ತಾಪಿಸದರು , ಆ ವಿವರಗಳನ್ನು ಕೇಂದ್ರ ಸರ್ಕಾರ ಸಹ ತೆಗೆದುಕೊಂಡಿದೆ.

ಹಾವು ಕಚ್ಚುವುದರಿಂದ ಆಗುವ ಸಾವಿನಲ್ಲಿ ನೂರಕ್ಕೆ ಶೇ.೯೫ ರಷ್ಟು ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗುವುದಿಲ್ಲ , ಒಂದು ವೇಳೆ ಆಂಬುಲೆನ್ಸ್‌ಗಳಲ್ಲಿ “ಆಂಟಿ ಸ್ನೇಕ್ ವೀನಮ್” ಇರುವಂತೆ ಆದರೆ , ಈ ಮರಣಗಳ ಸಂಖ್ಯೆ ಕಡಿಮೆಯಾಗುತ್ತದೆ ಎನ್ನುತ್ತಾರೆ ಡಾಕ್ಟರ್ ಒಮೇಶ್. ಈಗಾಗಲೆ ಇದು ಪಕ್ಕದ ರಾಜ್ಯ ಆಂಧ್ರಪ್ರದೇಶದಲ್ಲಿ ಜಾರಿಯಾಗಿದೆ ಇದರಿಂದ ಸಾಕಷ್ಟು ಜನರ ಪ್ರಾಣ ಉಳಿಸಿದಂತಾಗಿದೆ.   ಇದೆ ರೀತಿ ಎಲ್ಲ ರಾಜ್ಯದಲ್ಲಿ ಆದರೆ ಲಕ್ಷಾಂತರ ಜನರ ಪ್ರಾಣ ಉಳಿಸಬಹುದು.

Also read: ಹಾವಿನ ವಿಷವನ್ನೂ ಇಳಿಸಬಲ್ಲ ಕರ್ಪೂರ ಅನೇಕ ರೋಗಗಳಿಗೆ ರಾಮಬಾಣ