ತೆಂಗಿನ ಬೆಳೆಗಾರರಿಗೆ ವರದಾನ ಈ ನೀರಾ, ಈ ರೈತ ನೀರಾದಿಂದ ಎಷ್ಟು ಲಾಭ ಮಾಡಿಕೊಳ್ಳುತ್ತಿದ್ದಾನೆ ಅಂಥ ಗೊತ್ತಾದ್ರೆ ಆಶ್ಚರ್ಯ ಪಡ್ತೀರ…

0
2141

ತೆಂಗಿನ ಮರಗಳಿಗೆ ಮಳೆ ಕೊರತೆ, ನುಸಿ ಪೀಡೆಯಿಂದ ರಕ್ಷಣೆ ಮಾಡಿಕೊಳ್ಳಲು ಇವರು ಒಂದು ಹೊಸ ದಾರಿಯನ್ನು ಹುಡುಕಿದ್ದಾರೆ, ಇದನ್ನು ನಮ್ಮ ರಾಜ್ಯದ ಜನರು ಮಾತ್ರವಲ್ಲದೆ ಕೇರಳದವರು ಮತ್ತು ವಿದೇಶಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಯಾರು ಈ ದಾರಿಯನ್ನು ಹುಡುಕಿದ್ದು ಏನದು ಹೊಸ ದಾರಿ ಅಂತೀರ ನೀವೇ ನೋಡಿ.

ಮಳೆ ಕೊರತೆ ಇರುವ ಕಾರಣ ತೆಂಗಿನ ಮರಗಳು ನುಸಿ ಬಾಧೆಗೆ ಒಳಗಾಗುತ್ತಿವೆ, ಇದರಿಂದ ರಕ್ಷಿಸಲು ರೈತ ಮುಖಂಡ ಎಸ್.ಎನ್.ಸಿದ್ದೇಗೌಡ ಅವರು ನೀರಾ ಜ್ಯೂಸ್ ಕೇಂದ್ರ ತೆರೆದಿದ್ದಾರೆ. ನಿತ್ಯ ಸುಮಾರು 60 ಲೀಟರ್ ನೀರಾ ಬಿಕಾರಿಯಾಗುತ್ತಿದೆಯಂತೆ, 1 ಗ್ಲಾಸ್ ನೀರಾಗೆ 15.ರೂ ನಿಗದಿಪಡಿಸಿದ್ದಾರೆ, ಅದಲ್ಲದೆ ಇದು ಮದ್ಯವಲ್ಲ ಪೋಷಕಾಂಶಗಳುಳ್ಳ ರಸ ಎಂದು ಮೈಸೂರಿನ CFTRI ಪರೀಕ್ಷೆ ಮಾಡಿದ ನಂತರ ಸರ್ಕಾರ ಕೂಡ ಇದಕ್ಕೆ ಅನುಮತಿ ನೀಡಿದೆ.

ರೈತ ಮುಖಂಡ ಎಸ್.ಎನ್.ಸಿದ್ದೇಗೌಡ ಅವರ ಈ ಹೊಸ ಪ್ರಯೋಗದಿಂದ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರಾ ಕುಡಿಯಲೆಂದೇ ಪ್ರವಾಸಿಗರು ಬರುತ್ತಿದ್ದಾರೆ, ಅದಲ್ಲದೆ ಇದನ್ನು ವಿದೇಶಿಗರು ರುಚಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಇದರಿಂದ ರೈತರಿಗೂ ಸಾಕಷ್ಟು ಉಪಯೋಗವಾಗುತ್ತಿದೆ, ತಾವು ಮರದಿಂದ ಇಳಿಸಿದ ನೀರಾವನ್ನು ನೇರವಾಗಿ ನೀರಾ ಕೇಂದ್ರಕ್ಕೆ ಮಾರಾಟ ಮಾಡುತ್ತಿದ್ದಾರೆ ನಿತ್ಯ ಸುಮಾರು 100 ಲೀಟರ್ ನೀರಾವನ್ನು ಮರದಿಂದ ಇಳಿಸುತ್ತಿದ್ದಾರೆ.

ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿರುವ ಸಿದ್ದೇಗೌಡ ನೀರಾ ಕೇಂದ್ರಕ್ಕೆ ಎಂದೇ ಅವರು ಅಕ್ಕ-ಪಕ್ಕದ ರೈತರ ಜಮೀನಿನಲ್ಲಿರುವ ಸುಮಾರು 40 ಮರಗಳನ್ನು ಗುತ್ತಿಗೆ ಪಡೆದಿದ್ದಾರೆ, ವಾರಾಂತ್ಯಕ್ಕೆ ಬೆಂಗಳೂರು, ಮೈಸೂರು ಮತ್ತು ಇನ್ನು ಹಲವೆಡೆ ಇಂದ ಗ್ರಾಹಕರು ಬರುತ್ತಿದ್ದಾರಂತೆ, ಇನ್ನು ಕೆಲವು ಗ್ರಾಹಕರು ಇದಕ್ಕೆ ಮೋಡಿಯಾಗಿ ಬೆಳಗ್ಗೆ 5.30 ಕ್ಕೆ ಹೊಲದಲ್ಲಿ ನೀರಾ ಇಳಿಸುವಾಗಲೇ ಬಂದು ತಾಜಾ ನೀರಾವನ್ನು ಸವಿಯುತ್ತಿದ್ದಾರಂತೆ.

ಇನ್ನು ನೀರಾದಿಂದ ತಯಾರಿಸಿಲ್ಪಡುವ ಕೆಜಿ ಬೆಲ್ಲಕ್ಕೆ 300. ರೂ ಬೆಲೆ ಇದ್ದು ಇದು ಕೇವಲ 7 ಲೀಟರ್ ನೀರಾದಿಂದ ತಯಾರಿಸಬಹುದಂತೆ. ಕ್ಯಾಂಪ್ಕೋ ಕಂಪನಿ ನೀರಾವನ್ನು ಕೊಳ್ಳಲು ಮುಂದಾಗಿದ್ದಾರೆ ಇದರಿಂದ ಚಾಕಲೇಟ್, ಐಸ್ ಕ್ರೀಮ್‌, ಐಸ್ ಕ್ಯಾಂಡಿ, ಪೇಡಾ, ಸಕ್ಕರೆ, ಕಲ್ಲು ಸಕ್ಕರೆ ಕೂಡ ತಯಾರಿಸಬಹುದಂತೆ ಮತ್ತು ಕೇರಳ ಸರ್ಕಾರ ನೀರಾವನ್ನು ಕೊಳ್ಳಲು ಸಿದ್ಧವಿದೆ, ಅಲ್ಲಿ ನೀರಾ ಸರ್ಕಾರದ ಮಾನ್ಯತೆ ಪಡೆದಿದೆ.

ಒಟ್ಟಿನಲ್ಲಿ ಸರ್ಕಾರ ರೈತರಿಂದ ನೇರವಾಗಿ ಹಾಲು ಪಡೆದಂತೆ, ನೀರಾವನ್ನು ಪಡೆದು ಅವರನ್ನು ಪ್ರೋತಾಹಿಸಬೇಕು ಎಂಬುದು ಸಿದ್ದೇಗೌಡರ ಒತ್ತಾಯವಾಗಿದೆ…!