ರಾಜ್ಯೋತ್ಸವದ ದಿನದಂದು ಪ್ರತ್ಯೇಕ ರಾಜ್ಯ ಬೇಕೆಂದು ಪ್ರತಿಭಟನೆ ಮಾಡಿದ ಕಲುಬರ್ಗಿಯ ಕೆಲ ನಾಡದ್ರೋಹಿಗಳು!!

0
388

ಕರ್ನಾಟಕದಲ್ಲಿ ಇಂದು ಕರ್ನಾಟಕ ರಾಜ್ಯೋತ್ಸವವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಆದ್ರೆ ಕರ್ನಾಟಕದ ಈ ಪ್ರದೇಶದಲ್ಲಿ ಮಾತ್ರ ಪ್ರತೇಕ ರಾಜ್ಯದ ಕೂಗು ಕೇಳಿ ಬರುತ್ತಿದೆ. ಅದು ರಾಜ್ಯೋತ್ಸವ ದಿನದಂದೇ ಈ ಕೂಗು ಕೇಳಿದ್ದು ವಿಶೇಷವಾಗಿದೆ.


ಬಿಸಿಲ ನಾಡು ಕಲಬುರಗಿಯಲ್ಲಿ ಇಂದು ಪ್ರತೇಕ ರಾಜ್ಯದ ಕೂಗೂ ತೀವ್ರಗೊಂಡಿದೆ. ಅಲ್ಲದೆ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿದವು. ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ, ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಲ್ ಬಳಿ ಪ್ರತ್ಯೇಕ ರಾಜ್ಯ ಘೋಷಣೆಗಳನ್ನು ಕೂಗಿದ್ರು. ಅಲ್ಲದೆ ಧ್ವಜಾರೋಹಣವನ್ನು ಮಾಡಿದ್ರು. ಈ ವೇಳೆ ಮುವತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಪೊಲೀಸರು ಬಂಧಿಸುತ್ತಿರುವುದನ್ನು ಕಂಡು ಬಂಧನಕಾರರು ಓಡಿ ಹೋದ್ರು. ಇನ್ನು ಹೈಕ ವೇದಿಕೆಯಿಂದಲೂ ಕಾರ್ಯಕರ್ತರೂ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸಿದರು. ಈ ಕಾರ್ಯಕರ್ತರನ್ನೂ ಸಹ ಪೊಲೀಸರು ವಶಕ್ಕೆ ತೆಗೆದುಕೊಂಡರು.
ಪ್ರತೇಕ ರಾಜ್ಯ ಕೂಗು ಇಂದು ನಿನ್ನೆಯದಲ್ಲ. ದಶಕಗಳಿಂದಲೂ ನಡೆಯುತ್ತಿದೆ. ಪ್ರತಿ ಬಾರಿ ನವೆಂಬರ್​ 1 ರಂದು ಹೈ-ಕ ಭಾಗದ ಜನ ಕಲ್ಯಾಣ ಕರ್ನಾಟಕವನ್ನು ಆಚರಿಸುತ್ತಾರೆ. ಅಲ್ಲದೆ ಪ್ರತ್ಯೇಕ ರಾಜ್ಯದ ಕೂಗು ಇಡುತ್ತಾರೆ. ಹೈದರಾಬಾದ್ ಕರ್ನಾಟಕ ಪ್ರದೇಶವು ಐತಿಹಾಸಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ಭೌಗೋಳಿಕ ಹಾಗೂ ಸಾಂಸ್ಕೃತಿಕ ಕಾರಣದಿಂದ ಪ್ರಾದೇಶಿಕ ಅಸಮತೋಲನಗಳು ಕಂಡುಬಂದಿವೆ ಎಂಬ ದೂರು ಕೇಳಿ ಬಂತು.

ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನವನ್ನು ನೀಡುವ ಅಗತ್ಯತೆ ಬಗ್ಗೆ 1998 ನೇ ಇಸವಿಯಿಂದೀಚೆಗೆ ರಾಜ್ಯ ಸರ್ಕಾರಗಳು ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಗಲ್ಲಿ ಅಂಗೀಕೃತವಾದ ಠರಾವುಗಳು, ಜ್ಞಾಪನಾ ಪತ್ರಗಳನ್ನು ಕೇಂದ್ರ ಸರ್ಕಾರಕ್ಕೆ ಕಾಲ ಕಾಲಕ್ಕೆ ಸಲ್ಲಿಸಿತು. ಇವುಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು 2012 ರ ಚಳಿಗಾಲದ ಅಧಿವೇಶನದಲ್ಲಿ 317 (ಜೆ) ಅನುಚ್ಛೇದವನ್ನು ಸೇರಿಸುವುದರೊಂದಿಗೆ ಭಾರತದ ಸಂವಿಧಾನಕ್ಕೆ ತಿದ್ದುಪಡಿ ಮಾಡಿತು.