VVIPಗಳ ಕಾರಿಗಿಂತ ಅಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟು ‘ಹೃದಯ’ವಂತಿಕೆ ಮೆರೆದ ಸಬ್ ಇನ್ಸ್ಪೆಕ್ಟರ್ ನಿಜಲಿಂಗಪ್ಪ

0
508

ಇತ್ತೀಚಿಗೆ ಬೆಂಗಳೂರು ರಸ್ತೆಯಲ್ಲಿ ಹಾದು ಹೋಗುವಾಗ ಆಂಬ್ಯುಲೆನ್ಸ್ ಗೆ ದಾರಿ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿ ಯೊಬ್ಬರಿಗೆ ಅಲ್ಲಿನ ಸಂಚಾರಿ ಪೊಲೀಸರು ಹಲ್ಲೆ ಮಾಡಿದ್ದನು ನೀವೇ ಕೇಳಿದ್ದೀರಾ, ಆದರೆ ಶನಿವಾರ ಬೆಂಗಳೂರಿಗೆ ನಮ್ಮ ಮೆಟ್ರೋ ಉದ್ಘಾಟನೆಗೆಂದು ಆಗಮಿಸಿದ್ದ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಕಾರಿಗಿಂತ ರೋಗಿಯನ್ನು ಕೊಂಡೊಯ್ಯುತ್ತಿದ್ದ ಆಂಬ್ಯುಲೆನ್ಸ್ ಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಸಬ್ ಇನ್ಸ್ಪೆಕ್ಟರ್ ನಿಜಲಿಂಗಪ್ಪ ತಮ್ಮ ಹೃದಯ’ವಂತಿಕೆಯನ್ನು ಮೆರೆದಿದ್ದಾರೆ.

Image result for ಸಬ್ ಇನ್ಸ್ಪೆಕ್ಟರ್ ನಿಜಲಿಂಗಪ್ಪ

ಸಾಮಾನ್ಯವಾಗಿ VVIPಗಳು ಬಂದಾಗ ರಸ್ತೆಯ ಮೇಲೆ ಸಾಮಾನ್ಯ ಜನರ ವಾಹನಗಳು ಅಥವಾ ಆಂಬ್ಯುಲೆನ್ಸ್ ಇದ್ದರೂ ಮೊದಲು ಪ್ರಾಶಸ್ತ್ಯ ಸಿಗುವುದೇ VVIPಗಳ ಕಾರಗಳಿಗೆ. ಎಷ್ಟೇ ಜನರ ಸಮಸ್ಯೆಗಳಿದ್ದರೂ ರಸ್ತೆಯನ್ನು ಬ್ಲಾಕ್ ಮಾಡಿ VVIPಗಳಿಗೆ ದಾರಿಮಾಡಿ ಕೊಡಲಾಗುತ್ತದೆ.

ಹಲಸೂರು ಟ್ರಾಫಿಕ್ ಪೊಲೀಸ್ ಎಸ್ ಎಚ್ ನಿಜಲಿಂಗಪ್ಪ ರವರು ನಮ್ಮ ಮೆಟ್ರೋ ಉದ್ಘಾಟನೆಗೆಂದು ಟ್ರಿನಿಟಿ ಜಂಕ್ಷನ್ ನಲ್ಲಿ ಪ್ರಣಬ್ ಮುಖರ್ಜಿಯವರು ವಾಹನ ಸಾಗುತ್ತಿದ್ದರೂ, ಅದನ್ನು ತಡೆದು ನಿಲ್ಲಿಸಿ ಆಂಬ್ಯುಲೆನ್ಸ್ ಸಾಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಅವರ ಐ ಕರ್ತ್ಯವ್ಯ ನಿಷ್ಠೆ ಯನ್ನು www.thenewsism.com ತಂಡ ಹೃತ್ಪೂರ್ವಕ ಅಭಿನಂದನೆಗಳನ್ನು ಕೋರುತ್ತೇವೆ.