ಇನ್ಮುಂದೆ ಪಬ್ಲಿಕಲ್ಲಿ ಸೆಲ್ಫಿ ತೆಗೆದ್ರೆ ಕಂಬಿ ಎಣಿಸೋದು ಗ್ಯಾರಂಟಿ…

0
887

ಎಲ್ಲೆಲ್ಲಿ ಬೇಕೋ ಅಲ್ಲಲ್ಲೇ ಸೆಲ್ಫಿ ತೆಗೆಯುವವರು ಮಿಸ್ ಮಾಡದೇ ಓದಿ.

ಇತ್ತೀಚಿಗೆ ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯ ಮತ್ತು ಇಂದ್ರಪ್ರಸ್ಥ ಇನ್ಸ್ಟಿಟ್ಯೂಟ್ ಮಾಹಿತಿ ದೆಹಲಿ ವಿದ್ವಾಂಸರು ಹೊಸ ಅಧ್ಯಯನ ಸಂಶೋಧನೆಗಯ ಪ್ರಕಾರ ವಿಶ್ವದಲ್ಲಿ ಅತಿ ಹೆಚ್ಚು ಸೆಲ್ಫಿ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡವರು ಭಾರತದಲ್ಲೇ ಹೆಚ್ಚುಎಂದು ವರದಿಯಾಗಿದೆ.

ಯುವಜನರಲ್ಲಿ ಇತ್ತೀಚೆಗೆ ಸೆಲ್ಫಿ ಹುಚ್ಚು ಅತಿಯಾಗುತ್ತಿದೆ. ಮೊಬೈಲ್ ಹಿಡಿದು ನಾನಾ ಭಂಗಿಗಳಲ್ಲಿ ಫೋಟೊ ತೆಗೆದುಕೊಳ್ಳುತ್ತಿರುತ್ತಾರೆ. ಸಮಯ, ಸ್ಥಳ, ಪರಿಸ್ಥಿತಿ, ಪ್ರಯೋಜನ, ಉದ್ದೇಶ ಯಾವುದೂ ಇದರ ಹಿಂದೆ ಇರುವುದಿಲ್ಲ. ಅದೇನೋ ಖುಷಿ, ಸಂತಸ, ಸಡಗರ.ಮನುಷ್ಯ ಖುಷಿ ಬಯಸುವುದು ಸಹಜ.ಈ ಸೆಲ್ಫಿ ಹುಚ್ಚಿನಿಂದ ಜೀವಹಾನಿಯಗುತ್ತಿರುವುದು ಹೆಚ್ಚಾಗಿದೆ.

ಅತಿಯಾದ ಸೆಲ್ಫಿ ಹುಚ್ಚು ಎಂತೆಂತಹ ಅನಾಹುತಗಳಿಗೆ ಕಾರಣವಾಗುತ್ತಿದೆ ಎಂಬುದನ್ನು ಅರಿತ ಉತ್ತರ ಪ್ರದೇಶದ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಕಂಡಕಂಡಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳತ್ತ ತಮಗೂ ಮತ್ತು ಪರರಿಗೂ ಅಪಾಯ ತಂದೊಡ್ಡುತ್ತಿರುವುದರ ಬಗ್ಗೆ ಗಂಭೀರವಾಗಿ ಆಲೋಚಿಸಿ, ಹೆದ್ಧಾರಿ, ರೈಲ್ವೆ ಹಳಿ, ರೈಲು ನಿಲ್ದಾಣ, ಎತ್ತರದ ಕಟ್ಟಡಗಳು ಇತ್ಯಾದಿ ಕಡೆಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತ ನಿಂತರೆ ಬಂಧನ/ದಂಡ ವಿಧಿಸಲು ಮುಂದಾಗಿದ್ದಾರೆ.