‘ತ್ರಿಲೋಜ್ಞಾನಿ’ ರಂಗನಾಥರಿಗೆ ಬುದ್ದಿ ಕಲಿಸಿದ ಜಾಲತಾಣಿಗರು; ಯಶ್ Vs ರಂಗನಾಥ್ ನಲ್ಲಿ ಯಶ್ ಗೆ ಅಭೂತಪೂರ್ವ ಜಯ

0
1418

ಸಾಮಾನ್ಯ ಕನ್ನಡಿಗ  ವತಿಯಿಂದ ನೆನ್ನೆ ನಡೆಸಲಾದ ಲೈವ್ ಫೇಸ್ಬುಕ್ ಮತದಾನದಲ್ಲಿ, ಜಾಲತಾಣಿಗರು ರಂಗನಾಥರ ಮತ್ತು ಪಬ್ಲಿಕ್ ಟಿ.ವಿ ಯ ‘ನಕಾರಾತ್ಮಕ ಟಿ.ಆರ್.ಪಿ.’ ಗಳಸುವಿಕೆಗೆ ಟೋಂಗ್ ನೀಡಿದ್ದಾರೆ. ಸುಮಾರು 100,000+ ಮೆಚ್ಚುಗೆ ಗಳಿಸಿರುವ ಸಾಮಾನ್ಯ ಕನ್ನಡಿಗ ತನ್ನ ಫೇಸ್ಬುಕ್ ಪೇಜ್ನಲ್ಲಿ ನಡೆಸಿದ ಲೈವ್ ವೋಟಿಂಗ್ನಲ್ಲಿ ‘ತ್ರಿಲೋಕಜ್ಞಾನಿ’ ರಂಗನಾಥರಿಗೆ ೬೦೦೪ ಮತ ದೊರೆತರೆ, ಯಶ್ ಅವರಿಗೆ ೧೭,೪೬೨ ಮತ ಲಭಿಸಿತು.

ಈ ಹಿಂದೆ ಪಬ್ಲಿಕ್ ಟಿ.ವಿ. ಮತ್ತು ಯಶ್ ನೊಂದಿಗೆ ನಡೆದ ಸಂವಾದಗಳು, ಪರಸ್ಪರ ಹಗ್ಗ ಜಗ್ಗಾಟಗಳನ್ನು; ಆರೋಪ ಪ್ರತ್ಯಾರೋಪ, ಪದೇ ಪದೇ #elidirayash ಎಂದು ಗೊಣಗಾಡುತ್ತಿದ್ದ ಮಾಧ್ಯಮಗಳು; ಯಶ್ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದೊಂದಿಗೆ ಸುಖಾಂತ್ಯ ಕಂಡಿತ್ತು. ಆದರೆ, ರಂಗನಾಥರು ಮತ್ತು ಪಬ್ಲಿಕ್ ಟಿ.ವಿ. ಯವರು ಪದೇ ಪದೇ ಜನರಿಗೆ ರೋಸಿಹೋಗುವಂತೆ ಎಲ್ಲಿ ಯಶ್ ಎಂದು.. ಮತ್ತು ಯಶ್ ರನ್ನು ಬಳಸಿ ಅನಾವಶ್ಯಕವಾಗಿ ತೇಜೋವಧೆ ಮಾಡಿದ್ದು ಇಲ್ಲಿ ಸ್ಮರಿಸಬಹುದು.

ಈ ನಿಟ್ಟಿನಲ್ಲಿ ನಡೆಸಿದಿಯೇ ಲೈವ್ ಮತದಾನದಲ್ಲಿ ಜನರು ಪಬ್ಲಿಕ್ ಟಿ.ವಿ ರಂಗನಾಥರನ್ನು ತಿರಸ್ಕರಿಸಿದ್ದಾರೆ. ನಕಾರಾತ್ಮಕ ತಂತ್ರಗಳನ್ನು ಜನ ತಿರಸ್ಕರಿಸುವ ಮೂಲಕ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ್ದಾರೆ.