ವಾಸ್ತವಾಂಶ; ಸತ್ಯಾಂಶಗಳಿಗೆ ‘ತಿಲ’ ‘ತರ್ಪಣವಿಟ್ಟ’ ಪಬ್ಲಿಕ್ ಟಿ.ವಿ. ‘ತ್ರಿಲೋಕಜ್ಞಾನಿಯ’ ಮತ್ತೊಂದು ಎಡವಟ್ಟು ಬಹಿರಂಗ !

0
5702

ಒಂದರ ಮೇಲೊಂದು ವಿವಾದ, ಪ್ರಮಾದಗಳಲ್ಲಿ ಮುಳುಗಿರುವ ಪಬ್ಲಿಕ್ ಟಿ.ವಿ. ಇನ್ನೊಂದು ಎಡವಟ್ಟು ಮಾಡಿಕೊಂಡಿದೆ. ನಟ ಯಶ್-ರವರು ನಾನು ಯಾವುದೇ ಚರ್ಚೆಯಲ್ಲಿ ಭಾಗವಹಿಸಲು ಸಿದ್ದ ಎಂದು ಹೇಳಿ ಪಬ್ಲಿಕ್ ಟಿ.ವಿ. ಗೆ ಛೀಮಾರಿ ಹೇಳುವ ಮೂಲಕ ತಮ್ಮ ಟಿ.ಆರ್.ಪಿ ಉಲ್ಬಣಿಸುವ ತಂತ್ರಗಾರಿಕೆಯನ್ನು ಮಣ್ಣು ಮುಕ್ಕಿಸಿದ ಬಳಿಕ, ಭಾರತೀಯ ರಿಸರ್ವ್ ಬ್ಯಾಂಕ್ ರವರ 2,000 ನೋಟ್ ನಲ್ಲಿ ನ್ಯಾನೊಟೆಕ್ನಾಲಾಜಿ ಜಿ.ಪಿ.ಎಸ್ ಚಿಪ್ ಇದೆ, ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ನಲ್ಲಿ ಬಿಟ್ಟು ಇತರೆ ಜಾಗಗಲ್ಲಿ ಶೇಖರಿಸಿದಲ್ಲಿ ಇದನ್ನು ಆರ್ಥಿಕ ಬೇಹುಗಾರಿಕೆ [ಫೈನಾನ್ಸಿಯಲ್ ಇಂಟೆಲಿಜೆನ್ಸ್] ಸಂಸ್ಥೆಯು ಇದನ್ನು ಸ್ಯಾಟಲೈಟ್ ಮೂಲಕ ಗುರುತಿಸಿಬಹುದು; ತನ್ಮೂಲಕ ಕಾಳಧನವನ್ನು ಸಲೀಸಾಗಿ ಗುರುತಿಸಬಹುದು. ಭೂಮಿಯ ಒಳಗೆ 120 ಮೀಟರ್ ಅಡಿಗಿಸಿದ್ದರೂ ಅದನ್ನು ಸ್ಯಾಟಲೈಟ್ ಮೂಲಕ ಗುರುತಿಸಬಹುದು ಎಂದು ವಿವೇಕ್ ಮಲ್ಯ ಎಂಬ ಆರ್ಥಿಕ ತಜ್ಞರಿಗೆ ಫೋನಾಯಿಸಿ ತಮ್ಮ ಚಾನೆಲ್ ನಲ್ಲಿ ತೋರಿಸಿದ್ದಾರೆ.

ಆದರೆ, ಇದು ಹಸಿ ಸುಳ್ಳು. ಭಾರತೀಯ ರಿಸೆರ್ವೆ ಬ್ಯಾಂಕ್ ಯಾವುದೇ ರೀತಿಯಾದ ಚಿಪ್ ಅನ್ನು ಶೀಘ್ರದಲ್ಲೇ ಬಿಡುಗಡೆ ಗೊಳಿಸಲಿರುವ 2,000 ನೋಟ್ ನಲ್ಲಿ ಹಾಕಿದ್ದೇವೆ ಎಂದು ಅಧಿಕೃತವಾಗಿ ಹೇಳಿಲ್ಲ. ದಿ ಹಿಂದೂ ಪತ್ರಿಕೆಯಲ್ಲಿ ಇದರ ಬಗ್ಗೆ ವರದಿ ಬಂದಿತ್ತಾದರೂ; ಈ ಮಾಹಿತಿ ಸತ್ಯವಲ್ಲ.

ಆರ್.ಬಿ.ಐ ನವರೇ ಹೇಳುವ ಹಾಗೆ , ಕರೆನ್ಸಿ ಮೌಲ್ಯ [ಡಿನಾಮಿನೇಷನ್ ] ಕಮ್ಮಿಯಿದ್ದಷ್ಟೂ ಕರೆನ್ಸಿ ನೋಟಿನ ‘ಉತ್ಪಾದನಾ ವೆಚ್ಚ’ ಕಡಿಮೆ ಇರುತ್ತೆ. ಉದಾಹರಣೆಗೆ: 1,000 ರೂ ನೋಟಿನ ಮುದ್ರಣಕ್ಕೆ (ಒಂದು ನೋಟಿಗೆ ) ತಗಲುವ ವೆಚ್ಚ ರೂ.3/-. ನೋಟಿನ ಮೌಲ್ಯ ಹೆಚ್ಚಾದಷ್ಟು ಅದರ ಉತ್ಪಾದನಾ ವೆಚ್ಚ ಆರ್.ಬಿ.ಐ ಗೆ ಕಡಿಮೆಯಾಗುತ್ತೆ.

ನೋಟಿನ ಮೌಲ್ಯ [ಡಿನಾಮಿನೇಷನ್] ಕಡಿಮೆ ಇದ್ದಲ್ಲಿ; ಉದಾ: 10,20,50,100 ಇದರ ಉತ್ಪಾದನಾ ವೆಚ್ಚ ಹೆಚ್ಚುತ್ತದೆ. ಆದ್ದರಿಂದ, ಬೊಕ್ಕಸಕ್ಕೆ ಹೊರೆಯಾಗದಿರುವ ದೃಷ್ಟಿಯಿಂದ 2,000 ನೋಟ್ ಮುದ್ರಣ ಮಾಡಲು ಆರ್.ಬಿ.ಐ. ನಿರ್ಧರಿಸಿರುವುದು.

ಆದರೆ, ತ್ರಿಲೋಕಜ್ಞಾನಿ, ಮೌಖಿಕ ಸನ್ನೆಗಳ ಹರಿಕಾರರಾದ ರಂಗನಾಥರು ಮತ್ತು ರಾಧಕ್ಕ ಇದನ್ನೇ ಇಟ್ಟ್ಕೊಂಡು ತಜ್ಞರನ್ನು ಸಂಪರ್ಕಿಸಿ ‘ನೋಟಿನ ನಾಟಕ’ ವನ್ನು ತೋರಿಸಿ ಕರ್ನಾಟಕದ ಜನತೆಗೆ ತಪ್ಪು ಸಂದೇಶವನ್ನು ಕೊಟ್ಟಿದ್ದಾರೆ. ರಂಗನಾಥರ dramatics; ರಾಧೆಯ ಕಿರುಚಾಟ, ಹಾಸ್ಯವಲ್ಲದ ಹಾಸ್ಯವನ್ನು ಕರ್ನಾಟಕ ಜನತೆ ತಾಳ್ಮೆಯಿಂದ ನೋಡುತ್ತಿರುವುದಕ್ಕೆ ಅವರು ಅಭಾರಿಯಾಗಿರಬೇಕಷ್ಟೆ.

7057487a-e8d4-4810-a729-f9763e803b9b

ಅಸಲಿಗೆ, 2,000/- ನೋಟು ಬರುವುದನ್ನೇ ಆರ್.ಬಿ.ಐ ಧೃಡೀಕರಿಸಿಲ್ಲ. ಅಷ್ಟರಲ್ಲಿ, ಸಿಮ್, ನಾನೋ ಟೆಕ್ನಾಲಜಿ ಬಗ್ಗೆ ಕಾಗೆ ಹಾರಿಸಿದ ತ್ರಿಲೋಕ ಜ್ಞಾನಿಗಳು ಮತ್ತು ರಾಧೆಯ ಉಪಟಳವನ್ನು ಕಳಪೆ ಮಟ್ಟದ ಸಂಶೋಧನೆಯನ್ನು ಬಟಾಬಯಲಾಗಿದೆ.

ಪಬ್ಲಿಕ್ ಟಿ.ವಿ. ಫೇಸ್ಬುಕ್ ಪೇಜ್ ನಲ್ಲಿ ಇದನ್ನು ಅನೇಕರು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಬೆಳಕು’ ಎಂಬ ಅದ್ಭುತವಾದ ಕಾರ್ಯಕ್ರಮವನ್ನು ಮಾಡುವ ರಂಗನಾಥರು, ಟಿ.ವಿ. ಮಾರುಕಟ್ಟೆಯಲ್ಲಿ ಏರುತ್ತಿರುವ ಪೈಪೋಟಿಗೆ ಸಂಶೋದನಾರಹಿತವಾದ; ಧೃಡೀಕರಣವಿಲ್ಲದ ಸುದ್ದಿಯನ್ನು ಸತ್ಯ ಎಂದು ಬಿಂಬಿಸಿವುದು ಪತ್ರಿಕೋದ್ಯಮಕ್ಕೆ ತತ್ವಗಳಿಗೆ ಬಾಹಿರವೆಂದು ನಮ್ಮ ಅಭಿಪ್ರಾಯ.