ಯಶ್ ಸವಾಲಿಗೆ ‘ಪಬ್ಲಿಕ್’ ವಿಚಲಿತ: ತೆರೆದುಕೊಳ್ಳುತ್ತಿವೆ ಇತರ ‘ಕಣ್ಣು’ಗಳು

0
1399

ಮನೆಯೊಳಗೆ ನಡೆಯುವ ಗಂಡ-ಹೆಂಡಿರ ವಿಷಯ, ಬೀದಿ ಜಗಳ, ಗಣ್ಯರ ಮನೆಯ ಸಣ್ಣಪುಟ್ಟ ಜಗಳವನ್ನೂ ರಾಷ್ಟ್ರೀಯ ಸುದ್ದಿ ಎಂಬಂತೆ ಬಿಂಬಿಸಿ ಟಿಆರ್ ಪಿ ಏರಿಸಿ ಕೊಳ್ಳುವತ್ತ ಗಮನ ಹರಿಸಿದ್ದ ಟೀವಿ ಚಾನೆಲ್ ಗಳು ಇದೀಗ ನಟ ಯಶ್ ಅವರ ಸವಾಲಿನಿಂದ ಎಚ್ಚೆತ್ತುಕೊಳ್ಳ ತೊಡಗಿವೆ.

ಯಾವುದು ಪ್ರಸಾರ ಮಾಡಬೇಕು? ಯಾವುದು ಮಾಡ ಬಾರದು? ಯಾವುದು ವೈಯಕ್ತಿಕ? ಯಾವುದು ಸಾರ್ವ ಜನಿಕ? ನಮ್ಮ ಇತಿಮಿತಿಗಳೇನು? ಎಂಬ ಯಾವ ನೈತಿಕ ಪ್ರಶ್ನೆಗಳನ್ನು ಹಾಕಿಕೊಂಡು ಆತ್ಮವಿಮರ್ಶೆ ಕೂಡ ಮಾಡಿ ಕೊಳ್ಳದೇ ‘ನಾನೇ ಮೊದಲು ‘ ಎಂದು ಬ್ರೇಕಿಂಗ್ ನ್ಯೂಸ್ ಗಳ ಭರದಲ್ಲಿ ಮುನ್ನುಗ್ಗುತ್ತಿದ್ದ ಟೀವಿ ಚಾನೆಲ್ ಗಳ ವೇಗಕ್ಕೆ ಬ್ರೇಕ್ ಬೀಳುವ ಸಮಯ ಬಂದಿದೆ.

ಕಾವೇರಿ ಗಲಾಟೆ ಸಂದರ್ಭದಲ್ಲಿ ಟಿಆರ್ ಪಿಗಾಗಿ ಚಾನೆ ಲ್ಗಳ ಹಪಾಹಪಿ, ಇತ್ತೀಚೆಗೆ ರೈತನೊಬ್ಬನಿಗೆ ನೇರ ಪ್ರಸಾರ ಮಾಡುವುದಾಗಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದು, ವಕೀಲರು ಮತ್ತು ಪತ್ರಕರ್ತರ ಜಟಾಪಟಿ ಮುಂತಾದ ಹತ್ತುಹಲವು ಘಟನೆಗಳು ಇನ್ನೂ ಹಸಿರಾಗಿವೆ.

ಇತ್ತೀಚೆಗಷ್ಟೇ ಕಾವೇರಿ ಗಲಾಟೆಯಲ್ಲಿ ತಮ್ಮ ಹೇಳಿಕೆ ಯನ್ನು ಎಡಿಟ್ ಮಾಡಿ ತೋರಿಸಿ ಅಪಾರ್ಥಕ್ಕೆ ಗುರಿ ಮಾಡಿದ್ದ ಮಾಧ್ಯಮಗಳ ವಿರುದ್ಧ ನಟಿ ರಮ್ಯಾ ತಮ್ಮ ಅಸಮಾಧಾನ ತೋಡಿಕೊಂಡಿದ್ದರು. ಪ್ರಕಾಶ್ ರೈ ಕೂಡಾ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಸಿಟ್ಟಾಗಿ ಜನಶ್ರೀ ಚಾನೆಲ್ ಆಂಕರ್ ಮೇಲೆ ಕೂಗಾಡಿದ್ದರು.

ಇದೀಗ ನಟ ಯಶ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪಬ್ಲಿಕ್ ಟೀವಿಯ ರಂಗನಾಥ್ ಸೇರಿದಂತೆ ಟೀವಿ ಚಾನೆಲ್ ಗಳಿಗೆ ಸವಾಲು ಹಾಕಿರುವುದು ಮಾಧ್ಯಮ ಲೋಕದಲ್ಲಿ ಸಂಚಲನ ಉಂಟು ಮಾಡಿದೆ. ಎಲ್ಲರ ನೈತಿಕತೆ ಪ್ರಶ್ನೆ ಮಾಡೋ ಮಾಧ್ಯಮಗಳನ್ನು ಪ್ರಶ್ನೆ ಮಾಡಬಾರದೇ? ನಿಮ್ಮನ್ನು ಯಾರೂ ಪ್ರಶ್ನೆ ಮಾಡಬಾರದು ಎಂದಾದರೆ ನಮ್ಮನ್ನು ಪ್ರಶ್ನಿಸಲು ನೀವ್ಯಾರು? ಎಂದು ಯಶ್ ನೇರವಾಗಿ ಪ್ರಶ್ನಿಸಿದ್ದಾರೆ.

ರೈತರ ಬಗ್ಗೆ ನಟನಟಿಯರಿಗೂ ಕಾಳಜಿ ಇದೆ. ಅವರ ಹೆಸ ರಿನಲ್ಲಿ ಟಿಆರ್ ಪಿ ಹೆಚ್ಚಿಸಿಕೊಳ್ಳುವ ಬದಲು ನೀವು ಕಾಳಜಿ ತೋರಿಸಿ. ನೀವು ಈ ನಾಡಿನ ಪ್ರಜೆಗಳು ತಾನೆ ಎಂದಿದ್ದಾರೆ. ರೈತರ ಪರ ನಿಜವಾದ ಕಾಳಜಿ ಇದ್ದರೆ ಅವರ ನೆರವಿಗೆ ಕಾರ್ಯಕ್ರಮ ರೂಪಿಸಿ. ರೈತ ಸಂಕ್ರಮಣ ಕಾಲದಲ್ಲಿ ದ್ದಾನೆ. ಅವನ ಮನೆ ಬೆಳಗಿಸುವ ಕೆಲಸ ಎಲ್ಲರೂ ಸೇರಿ ಮಾಡೋಣ. ದೀಪ ಹಚ್ಚು ಕೆಲಸಕ್ಕೆ ಕರೆದರೆ ಬರುತ್ತೇನೆ. ಬೆಂಕಿ ಹಚ್ಚುವ ಕೆಲಸಕ್ಕೆ ಬರೊಲ್ಲ ಎಂದು ಯಶ್ ಸವಾಲು ಹಾಕಿದ್ದಾರೆ.
ಈ ಸವಾಲಿಗೆ ಪ್ರತಿಕ್ರಿಯಿಸಿರುವ ಪಬ್ಲೀಕ್ ಟೀವಿ ರಂಗ ನಾಥ್, ನಮ್ಮ ದು ಸೀಮಿತ ವೇದಿಕೆ. ಇಲ್ಲಿಗೆ ಬಂದರೆ ಚರ್ಚಿಸೋಣ. ನಾನು ಹೊರಗೆ ಬರಲಾರೆ. ಅಷ್ಟಕ್ಕೂ ನಾನು ಸವಾಲು ಹಾಕಿ ಎಂದು ಕೇಳಿಕೊಂಡಿಲ್ಲ ಎಂದು ಜಾರಿಕೊಳ್ಳಲು ಯತ್ನಿಸಿದ್ದಾರೆ.

ಆದರೆ ಟಿವಿ೯ ಈ ಸವಾಲನ್ನು ಸ್ವೀಕರಿಸಿದ್ದಾಗಿ ಹೇಳಿಕೊಂ ಡಿದೆ. ರೈತರ ಸಮಸ್ಯೆ ಬಗೆಹರಿಸುವ ಕುರಿತು ಪ್ರೈಮ್ ಟೈಮ್ ನಲ್ಲೇ ಕಾರ್ಯಕ್ರ. ರೂಪಿಸುತ್ತೇವೆ. ಎಲ್ಲಾ ಕ್ಷೇತ್ರದ ಗಣ್ಯರಿಗೂ ಬಹಿರಂಗ ಆಹ್ವಾನ ನೀಡಿದ್ದು, ಶೀಘ್ರದಲ್ಲೇ ದಿನಾಂಕ ನಿಗದಿಪಡಿಸುವುದಾಗಿ ಪ್ರಕಟಿಸಿದೆ.

ಆದರೆ ಉಳಿದ ಯಾವುದೇ ಚಾನೆಲ್ ಗಳು ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ. ಸದ್ಯಕ್ಕೆ ಮಾಧ್ಯಮ ಲೋಕ ದಲ್ಲಿ ಇದೊಂದು ಸಂಚಲನ ಸೃಷ್ಟಿಯಾಗಿದ್ದು, ಸುಖಾಂತ್ಯ ಕಾಣಲಿ, ರೈತರ ಸಮಸ್ಯೆಗಳಿಗೆ ಪರಿಹಾರ ದೊರೆಯಲಿ, ಸವಾಲು ಹಾಕಿದ ಎಂಬ ಕಾರಣಕ್ಕೆ ಯಶ್ ಅವರನ್ನು ಹಣಿಯಲು ಯಾವುದೇ ತಂತ್ರಗಳು ಆಗದಿರಲಿ ಎಂಬುದೇ ಅಂತರ್ಮುಖಿ ಆಶಯ