ಹೊಸ ವರ್ಷಕ್ಕೆ ಪವರ್-ಫುಲ್ ಆಗಿ ಶುಭಾಶಯ ತಿಳಿಸಿದ ಅಪ್ಪು….

0
405

ಸದಾ ಒಂದು ಹೊಚ್ಚ ಹೊಸ ರೀತಿಯಲ್ಲಿ ಅಭಿಮಾನಿಗಳನ್ನು ರಂಜಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಯಾವಾಗಲು ತುಂಬಾನೆ ಚಟುವಟಿಗೆಯಿಂದಿರುವ ಅಪ್ಪು ಈಗ ಹೊಸ ವರ್ಷದ ಶುಭಾಶಯಗಳನ್ನು ಕೂಡ ತುಂಬ ವಿಭಿನ್ನ ರೀತಿಯಲ್ಲಿ ಹೇಳಿದ್ದಾರೆ.

ಹೊಸ ವರ್ಷಕ್ಕೆ ಸ್ಯಾಂಡಲ್-ವುಡ್ ನ ಹಲವರು ಶುಭಾಶಯಗಳನ್ನು ತಮ್ಮದೇ ಆದ ರೀತಿಯಲ್ಲಿ ತಿಳಿಸಿದ್ದಾರೆ, ಆದರೆ ಇತರೆಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಪುನೀತ್ ಒಂದು ಫಿಟ್ನೆಸ್ ವೀಡಿಯೋದ ಮೂಲಕ ವ್ಯಾಯಾಮ ಅಭ್ಯಾಸ ಮಾಡುತ್ತಲೇ ವಿಶ್ ಮಾಡಿದ್ದಾರೆ.

ಕಳೆದ ತಿಂಗಳು ಅಪ್ಪು ಅಭಿನಯದ ಬಹು ನಿರೀಕ್ಷಿತ ಚಿತ್ರವಾದ “ಅಂಜನೀಪುತ್ರ” ರಿಲೀಸ್ ಆಗಿತ್ತು, ಕೆಲವು ವಿವಾದಗಳಿಂದ ಚಿತ್ರ ಪ್ರದರ್ಶನೆಯನ್ನು ನಿಲ್ಲಿಸಲಾಗಿತ್ತು, ಆದರೆ ಈಗ ಆ ವಿವಾಧಗಳೆಲ್ಲ ದೂರವಾಗಿ ಆ ಚಿತ್ರ ಈಗ ರಾಜ್ಯಾಧ್ಯಂತ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿದೆ, ಚಿತ್ರದ ಯಶಸ್ಸಿನಿಂದ ಅಪ್ಪು ತುಂಬಾನೆ ಖುಷಿಯಾಗಿ ಈ ವಿಡಿಯೋ ಹಾಕಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಅವರ ಪಿಆರ್ ಕೆ ಆಡಿಯೋಸ್ ಮೂಲಕ ಇತ್ತೀಚಿಗೆ ಹೊಸಪೇಟೆಯಲ್ಲಿ ಬಿಡುಗಡೆ ಮಾಡಿದ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯದ, ಸೂರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಟಗರು ಚಿತ್ರದ ಪ್ರಚಾರಕ್ಕಾಗಿ ಪುನೀತ್ ತಮ್ಮ ಎಲ್ಲ ಕೆಲಸಗಳಿಗೆ ತಾತ್ಕಾಲಿಕ ವಿರಾಮ ಹೇಳಿದ್ದಾರೆ.

ಒಟ್ಟಿನಲ್ಲಿ ಪುನೀತ್ ಹಾಗು ಶಿವಣ್ಣ ಅಭಿಮಾನಿಗಳು ಟಗರು ಚಿತ್ರದ ಬಿಡುಗಡೆಗಾಗಿ ಕುತೂಹಲದಿಂದ ಕಾಯುತ್ತಿರುವುದಂತು ನಿಜ…!