ನಮ್ಮ ಅಪ್ಪು, ತೆರೆಯ ಮೇಲಷ್ಟೇ ಅಲ್ಲ ನಿಜ ಜೀವನದಲ್ಲಿಯೂ ಬಂಗಾರದ ರಾಜಕುಮಾರ!!!

0
979

ತೆರೆಯ ಮೇಲೆ ಹೀರೋಗಳು ಸಮಾಜಮುಖಿ ಕಾರ್ಯವನ್ನು ಮಾಡಿ ಅಭಿಮಾನಿಗಳ ಮನಗೆಲ್ಲುವುದು ರೀಲು.. ಆದರೆ ರಿಯಲ್ ಲೈಫ್ ನಲ್ಲೂ ಇಂತಹದ್ದೇ ಘಟನೆ ಹಲವು ನಡೆದಿವೆ. ಅದಕ್ಕೆ ಉದಾಹಾರಣೆ ಇಲ್ಲಿದೆ.

Source: Public TV

ಇವರು ನಟನೆಗೆ ಅಭಿಮಾನಿಗಳು ಫಿದಾ.. ನಟನೆ, ಫೈಟು, ಡ್ಯಾನ್ಸ್ ಎಲ್ಲದರಲ್ಲೂ ಇವರ ಕೈ ಮೇಲು.. ಇವರೇ ದೊಡ್ಡಮನೆ ಹುಡುಗ ಪುನಿತ್ ರಾಜ್ ಕುಮಾರ್. ಇತ್ತೀಚೀಗೆ ಕನ್ನಡ ಖಾಸಗಿ ವಾಹಿನಿಯ ವರದಿಯಲ್ಲಿ ಪುನಿತ್ ಅಭಿಮಾನಿಯೊಬ್ಬರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಸುದ್ದಿ ಬಿತ್ತರಿಸಲಾಗಿತ್ತು. ಪುನೀತ್ ಇದನ್ನು ಮನಗಂಡು ಅವರಿಗೆ ಸಹಾಸ ಮಾಡಿದ್ದಾರೆ.

ಆರನೇ ತರಗತಿ ಓದುತ್ತಿರುವ ದಾವಣಗೆರೆಯ 12 ವರ್ಷದ ಪ್ರೀತಿ ಪುನಿತ್ ಅವರ ದೊಡ್ಡಅಭಿಮಾನಿ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಇವರು ನೋವಿನಿಂದ ಬಳಲಿ ಬೆಂಡಾಗಿದ್ದರು. ಇವರು ತಾವು ಜೀವನದಲ್ಲಿ ಒಮ್ಮೆಯಾದರು ಪುನೀತ್ ಅವರನ್ನು ನೋಡಲೇ ಬೇಕು ಎಂಬ ಆಸೆಯನ್ನು ಹೊಂದಿದ್ದರು. ಇವರ ಆಸೆ ಇತ್ತೀಚೀಗೆ ಫಲಿಸಿದೆ. ಇವರು ಕನ್ನಡದ ಪವರ್ ಸ್ಟಾರ್ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲದೆ ಅವರೊಂದಿಗೆ ಮಾತುಕತೆ ನಡೆಸಿ, ಸಂತಸ ಹಂಚಿಕೊಂಡಿದ್ದಾರೆ. ಅಲ್ಲದೆ ಅವರೊಂದಿಗೆ ಫೋಟೋಗೆ ಪೋಸ್ ನೀಡಿದ್ದಾರೆ.

ತಮ್ಮ ಅಭಿಮಾನಿ ಪುಟ್ಟ ಬಾಲಕಿಯನ್ನು ಭೇಟಿ ಮಾಡಿದ ಪುನೀತ್, ಆರೋಗ್ಯ ವಿಚಾರಿಸಿ ಕೊಂಡಿದ್ದಾರೆ. ಚಿಕಿತ್ಸೆ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಇವರ ನೆರವಿನಿಂದ ಪ್ರೀತಿ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರೀತಿ ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಇವರಿಗೆ ಕಿಡ್ನಿ ದಾನ ಮಾಡಿದ್ರೆ ಬದುಕಿಸುವ ಭರವಸೆ ಮೂಡಿಸಿದ್ದಾರೆ. ವೈದ್ಯರ ಮಾತಿನಿಂದ ಸಂತಸಗೊಂಡ ತಂದೆ ಮಗಳಿಗೆ ತಮ್ಮ ಒಂದು ಕಿಡ್ನಿ ನೀಡಲು ನಿರ್ಧರಿಸಿದ್ದಾರೆ.