ನವದೆಹಲಿ: ಮಾರ್ಚ್ 31ರಿಂದ ನಂತರ ಹಳೆಯ ನಿಷೇಧಿತ 500 ಮತ್ತು 1000 ರೂಪಾಯಿಗಳ ನೋಟುಗಳನ್ನು ಹೊಂದಿರುವವರಿಗೆ ದಂಡ ಬೀಳುತ್ತದೆ. ಹಳೆಯ ನೋಟುಗಳನ್ನು ಇಟ್ಟುಕೊಂಡಿದ್ದರೆ ಅವುಗಳಿಗೆ ದಂಡ ವಿಧಿಸುವ ಸುಗ್ರೀವಾಜ್ಞೆಗೆ ಕೇಂದ್ರ ಸರ್ಕಾರ ಬುಧವಾರ ಒಪ್ಪಿಗೆ ನೀಡಿದೆ.
ಪ್ರಧಾನಿ ಮೋದಿ ನೇತೃತ್ವದಲ್ಲಿ ಇಂದು ನಡೆಸಲಾದ ಕ್ಯಾಬಿನೇಟ್ ಸಭೆಯಲ್ಲಿ ಮಾರ್ಚ್ 31 ರ ಬಳಿಕವೂ ಹಳೆಯ ನೋಟುಗಳನ್ನು ಹೊಂದಿರುವವರಿಗೆ ಕನಿಷ್ಠ 50,ದಂಡ ಮತ್ತು 4 ವರ್ಷ ಜೈಲು ಶಿಕ್ಷೆ ವಿಧಿಸಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ. ಈ ಸಂಬಂಧ ಸುಗ್ರಿವಾಜ್ಞೆ ಹೊರಡಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಹಳೆಯ ನೋಟುಗಳನ್ನು ಬ್ಯಾಂಕ್ಗಳಿಗೆ ಜಮಾ ಮಾಡುವ ಅವಧಿ ಡಿಸೆಂಬರ್ 30 ಕ್ಕೆ ಮುಗಿಯಲಿದ್ದು ಮಾರ್ಚ್ 31, 2017ರವರೆಗೆ ನೇರವಾಗಿ ಆರ್.ಬಿ.ಐ ಕಚೇರಿಯಲ್ಲಿ ಜಮಾ ಮಾಡುವ ಅವಕಾಶವಿದೆ.
ಮುಂದಿನ ತಿಂಗಳ ಕೇಂದ್ರ ಬಜೆಟ್ ಅಧಿವೇಶನದಲ್ಲಿ ವಿಧೇಯಕ ಕಾನೂನಾಗಿ ಜಾರಿಗೆ ಬರುವ ನಿರೀಕ್ಷೆಯಿದೆ.