ರಾಜ್ ಕುಟುಂಬ ಎಂದಿಗೂ ಆಡಂಬರಕ್ಕೆ ಮಣೆ ಹಾಕಿದವರಲ್ಲ, ರಸ್ತೆ ಬದಿ ಚಿತ್ರಾನ್ನ ತಿಂದು ಪುನೀತ್ ತಮ್ಮ ಸರಳತೆ ಮೆರೆದಿದ್ದಾರೆ..

0
530

ತಮ್ಮ ಚಿತ್ರಗಳಲ್ಲಿ ವಿಭಿನ್ನವಾಗಿ ನಟಿಸುತ್ತ, ಜನರ ಮನೋರಂಜಿಸುತ್ತಿರುವ ಪವರ್-ಸ್ಟಾರ್ ಪುನೀತ್ ರಾಜ್‍ಕುಮಾರ್‍, ತಮ್ಮ ನಿಜ ಜೀವನದಲ್ಲಿ ಯಾವಾಗಲೂ ತಮ್ಮ ಸರಳತೆಯಿಂದಲೇ ಕರ್ನಾಟಕದ ಜನರ ಮನೆ ಮಾತಾಗಿದ್ದಾರೆ. ಚಿತ್ರದಲ್ಲಿ ಸ್ಟಾರ್ ಆಗಿ ಮಿಂಚುವ ಅಪ್ಪು ನಿಜಜೀವನದಲ್ಲಿ ತುಂಬಾನೆ ಸಿಂಪಲ್ ಮನುಷ್ಯ, ಇಲ್ಲಿದೆ ಅದಕ್ಕೆ ಉದಾಹರಣೆ.

ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಟನೆಯ ಟಗರು ಚಿತ್ರದ ಆಡಿಯೋ ಲಾಂಚ್‌ಗೆ ಇಡೀ ಕುಟುಂಬಸ್ಥರು ಹೊಸಪೇಟೆಗೆ ತೆರಳಿದ್ದರು. ಹೊಸಪೇಟೆಯ ಕಾರ್ಯಕ್ರಮ ಮುಗಿದ ನಂತರ ಬೆಂಗಳೂರಿಗೆ ಬರುವಾಗ ಪುನೀತ್ ದಾರಿಯಲ್ಲಿ ಇದ್ದ ಚಿಕ್ಕ ತಿಂಡಿ ಗಾಡಿಯಲ್ಲಿ, ತಿಂಡಿ ರುಚಿಯನ್ನು ಸವಿದ್ದಿದ್ದಾರೆ, ಪುನೀತ್ ಅವರನ್ನು ನೋಡಿದ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಂದಾದರು, ಎಲ್ಲರ ಜೊತೆಯಲ್ಲಿ ಪ್ರೀತಿಯಿಂದ ಸೆಲ್ಫಿ ತೆಗೆದುಕೊಂಡು ತಮ್ಮ ಅಭಿಮಾನಿಗಳಿಗೆ ಖುಷಿ ನೀಡಿದರು.

ಜೀವನೋಪಾಯಕ್ಕಾಗಿ ರಸ್ತೆ ಬದಿಯಲ್ಲಿ ಒಂದು ಚಿಕ್ಕ ಗಾಡಿಯಲ್ಲಿ ತಿಂಡಿ ಮಾರುತ್ತಿದ್ದ ಇವರ ಬಳಿ ಬಂದು ಪುನೀತ್ ರಾಜಕುಮಾರ್ ಚಿತ್ರನ್ನ ಸವಿದಿದ್ದನ್ನು ಕಂಡು ಅವರು ಅಚ್ಚರಿಯಾಗಿದ್ದಾರೆ. ಚಿತ್ರರಂಗದಲ್ಲಿ ದೊಡ್ಡಮಟ್ಟದಲ್ಲಿ ಹೆಸರು ಮಾಡಿರುವ ನಟ ಈ ರೀತಿ ಯಾವ ಆಹಂಕಾರವಿಲ್ಲದೆ ಸಾಮಾನ್ಯ ವ್ಯಕ್ತಿಯ ಹಾಗೆ ರಸ್ತೆ ಬದಿಯ ಗಾಡಿಯಲ್ಲಿ ಚಿತ್ರನ್ನ ತಿನ್ನುತ್ತಿರುವುದು ನಿಜಕ್ಕೂ ಅವರ ಸರಳತೆಗೆ ಹಿಡಿದ ಕನ್ನಡಿ ಎಂದು ಹೊಗಳಿದ್ದಾರೆ.

ಈ ಹಿಂದೆ ಕೂಡ ಪುನೀತ್ ರಾಜ್‍ಕುಮಾರ್ ತಮ್ಮ ತಾಯಿ ದಿ.ಪಾರ್ವತಮ್ಮ ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ನಗರದ ಶಕ್ತಿಧಾಮ ಅನಾಥಾಶ್ರಮದ ಮಕ್ಕಳ ಜೊತೆ ಆಚರಿಸಿದ್ದರು.

ಒಟ್ಟಾರೆ ಸ್ವಲ್ಪ ಹೆಸರು ಗಳಿಸಿದ ಮೇಲೆ ಅಹಂಕಾರದಿಂದ ಮೆರೆಯುವ ನಟ-ನಟಿಯರಿಗೆ ಪುನೀತ್ ಅವರ ಸರಳತೆ ಪಾಠವಾಗಿದೆ…!