ಅನೇಕ ಜನರಿಗೆ ಗೊತ್ತಿರದ ಪ್ರಪಂಚದ ಏಕೈಕ ಬ್ರಹ್ಮನ ದೇವಾಲಯದ ಕುತೂಹಲ ಸಂಗತಿ..!!

0
2490

ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರುಗಳಿದ್ದು, ಒಂದೊಂದು ದೇವರ ಒಂದೊಂದು ಅವತಾರಗಳಿಗೂ ಭಾರತದ ಉದ್ದಗಲಕ್ಕೂ ದೇವಾಲಯಗಳಿವೆ. ಆದರೆ ಸೃಷ್ಟಿಯ ಮೂಲಕ್ಕೆ ಆಧಾರವಾಗಿರುವ ಬ್ರಹ್ಮನಿಗೆ ಮಾತ್ರ ದೇವಾಲಯಗಳಿಲ್ಲ. ಇದಕ್ಕೂ ಮೂಲವಾದ ಕಾರಣವಿದೆ.

ಬ್ರಹ್ಮನ ಪೂಜೆ ನಿಲ್ಲುವುದಕ್ಕೂ ಇದೆ ಒಂದು ಕಾರಣ

ವಿಷ್ಣುವಿನ ನಾಭಿಯಿಂದ ಹೊರಬಿದ್ದ ಬ್ರಹ್ಮ ಚತುರ್ದಶ ಲೋಕಗಳನ್ನು ಸೃಷ್ಟಿಸಿದನು. ಹೀಗೆ ಬ್ರಹ್ಮಾಂಡದ ಸೃಷ್ಟಿಯ ವೇಳೆ ಬ್ರಹ್ಮ ಶತರೂಪಳೆಂಬ ಸುಂದರ ದೇವತೆಯನ್ನು ಸೃಷ್ಟಿಸಿದ. ತಾನೇ ಸೃಷ್ಟಿಸಿದ ಈ ದೇವತೆಯಿಂದ ಬ್ರಹ್ಮ ಮೋಹಗೊಂಡ. ಬ್ರಹ್ಮದೃಷ್ಟಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದಳಾದರೂ ಎಲ್ಲಾ ದಿಕ್ಕುಗಳಲ್ಲಿ ಆಕೆಯನ್ನು ಹಿಂಬಾಲಿಸಲು ಬ್ರಹ್ಮ ತಲೆಯೊಂದನ್ನು ರೂಪಿಸಿದ. ಸೃಷ್ಟಿ ಕರ್ತನಾಗಿದ್ದರಿಂದ ನಾಲ್ಕು ದಿಕ್ಕುಗಳು ಮತ್ತು ಇವುಗಳ ಮೇಲೊಂದು ಎಂಬಂತೆ ಒಟ್ಟು ಐದು ತಲೆಯನ್ನು ಬ್ರಹ್ಮ ಹೊಂದಿದ. ಇದನ್ನು ಅರಿತ ಶಿವ ತಾನು ಸೃಷ್ಟಿಸಿದವಳ ಮೇಲೆ ತಾನೇ ಅವಳನ್ನು ಮೋಹಿಸುವುದು ತಪ್ಪೆಂದು ಶಿವ ಬ್ರಹ್ಮನ ಮೇಲಿನ ತಲೆಯನ್ನು ಕತ್ತರಿಸಿ ಭೂಲೋಕದಲ್ಲಿ ಬ್ರಹ್ಮನಿಗೆ ಯಾರೂ ಪೂಜೆ ಸಲ್ಲಿಸಬಾರದೆಂದು ಶಿವ ಶಾಪ ನೀಡಿದ ಎಂದೂ ಹೇಳಲಾಗುತ್ತದೆ. ಆದ್ದರಿಂದಲೇ ತ್ರಿಮೂರ್ತಿಗಳಲ್ಲಿ ಇಬ್ಬರಾದ ವಿಷ್ಣು ಮತ್ತು ಶಿವನಿಗೆ ಮಾತ್ರ ಪೂಜೆ ಸಲ್ಲಿಸಲಾಗುತ್ತಿದೆ.

ಹಾಗಾದರೆ ರಾಜಸ್ಥಾನದಲ್ಲಿನ ಪುಷ್ಕರ್‌ನಲ್ಲಿ ಬ್ರಹ್ಮನಿಗೆ ಪೂಜೆ ಸಲ್ಲುತ್ತದೆ. ಇದಕ್ಕೂ ಕೂಡ ಒಂದು ಕಾರಣವಿದೆ.

ಪುರಾಣಗಳ ಪ್ರಕಾರ ಬ್ರಹ್ಮ ಯಜ್ಞ ಮಾಡಬೇಕಿರುತ್ತದೆ. ಮಡದಿ ಇಲ್ಲದೇ ಯಜ್ಞ ಮಾಡುವಂತಿಲ್ಲ. ಆದರೆ ಬ್ರಹ್ಮನ ಮಡದಿ ಸರಸ್ವತಿ ದೇವಿ ಆ ವೇಳೆಯಲ್ಲಿ ಅಲ್ಲಿರುವುದಿಲ್ಲ. ಯಜ್ಞ ಮಾಡಲೇಬೇಕಾದ್ದರಿಂದ ಬ್ರಹ್ಮ ಗಾಯತ್ರಿಯನ್ನು ವಿವಾಹ ಮಾಡಿಕೊಂಡು ಯಜ್ಞವನ್ನು ಪೂರ್ಣಗೊಳಿಸುತ್ತಾನೆ. ಇದರಿಂದ ಕೋಪಿತಗೊಂಡ ಸರಸ್ವತಿ ದೇವಿ ಬ್ರಹ್ಮನಿಗೆ “ನಿನಗೆ ಭೂಲೋಕದಲ್ಲಿ ಪೂಜೆ ಇಲ್ಲದಂತಾಗಲಿ” ಎಂದು ಶಾಪ ನೀಡುತ್ತಾಳೆ. ಆದರೆ ಯಜ್ಞದಲ್ಲಿ ಭಾಗಿಯಾಗಿದ್ದ ಗಾಯತ್ರಿ ತನ್ನ ಶಕ್ತಿಯಿಂದ ಯಜ್ಞ ನಡೆದಿದ್ದ ಪುಷ್ಕರವನ್ನು ರಕ್ಷಿಸುತ್ತಾಳೆ, ಅದಕ್ಕಾಗಿಯೇ ಇಂದಿಗೂ ಪುಷ್ಕರದಲ್ಲಿ ಮಾತ್ರ ಬ್ರಹ್ಮನಿಗೆ ಪೂಜೆ ಸಲ್ಲುತ್ತದೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲ, ಸರಸ್ವತಿ ದೇವಿ ಬ್ರಹ್ಮನಿಗೆ ಇನ್ನೊಂದು ಶಾಪವನ್ನು ಕೊಡುತ್ತಲೇ ಅದೇನಂದರೆ, ಬ್ರಹ್ಮನ ಆಲಯದೊಳಕ್ಕೆ ಪುರುಷರು ಪ್ರವೇಶಿಸಬಾರದೆಂದು, ಒಂದು ವೇಳೆ ಪ್ರವೇಶಿಸಿದರೆ ಅವರಿಗೆ ವೈವಾಹಿಕ ಸಮಸ್ಯೆಗಳು ತಪ್ಪಿದ್ದಲ್ಲ ಎಂದು ಶಪಿಸುತ್ತಾಳಂತೆ. ಹಾಗಾಗಿ ಈ ಆಲಯದೊಳಕ್ಕೆ ಪುರುಷರು ಪ್ರವೇಶಿಸಲ್ಲ.

Also read: ಅತಿ ಮುಖ್ಯ, ಪ್ರಭಾವಶಾಲಿ ಹಾಗೂ ಶಕ್ತಿಶಾಲಿ ದೇವಾಲಯವೆಂದು ನಂಬಲಾದ ಚೆಂಗಣ್ಣೂರು ಮಹಾದೇವ ದೇವಾಲಯ: ಒಮ್ಮೆ ತಪ್ಪದೆ ಭೇಟಿ ಕೊಡಿ