ಆಟದಲ್ಲಿ ಗೆದ್ದ ಹಣ ಪರೋಪಕಾರಕ್ಕೆ ಬಳಸಿದ ಬ್ಯಾಡ್ಮಿಂಟನ್‌ ತಾರೆ ಸಿಂಧು..!

0
332

ಸೆಲಬ್ರಿಟಿ ಅಂದ್ರೆ ಏನೋ ಒಂದು ರೀತಿಯ ಆಕರ್ಷಣೆ. ಅವರು ಮಾಡೋ ಕೆಲಸ, ಸೆಲಬ್ರಿಟಿಗಳ ನಡೆ-ನುಡಿಗಳನ್ನು ಜನ ಇಷ್ಟ ಪಡ್ತಾರೆ. ಜೊತೆಗೆ ಅಭಿಮಾನಿಗಳು ಸೆಲಬ್ರಿಟಿಗಳನ್ನು ಫಾಲೋ ಕೂಡ ಮಾಡ್ತಾರೆ. ಹಾಗಾಗಿ ಸೆಲಬ್ರಿಟಿಗಳು ಉತ್ತಮ ಆದರ್ಶಗಳನ್ನು ರೊಢಿಸಿಕೊಂಡಿರ್ತಾರೆ. ಬ್ಯಾಡ್ಮಿಂಟನ್‌ ತಾರೆ, ಒಲಿಂಪಿಕ್‌ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಕೂಡಾ ಈಗ ತನ್ನ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ. ಹೌದು.. ಸಿಂಧು ತಾವು ಗೆದ್ದ 25 ಲಕ್ಷ ರೂಪಾಯಿಯನ್ನು ಕ್ಯಾನ್ಸರ್ ಆಸ್ಪತ್ರೆಗೆ ದಾನ ಮಾಡಿದ್ದಾರೆ.

ಬಾಲಿವುಡ್‌ ಹಿರಿಯ ನಟ ಅಮಿತಾಬ್‌ ಬಚ್ಚನ್‌ ನಿರೂಪಣೆಯ ‘ಕೌನ್‌ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದಲ್ಲಿ ಸಿಂಧು ಭಾಗವಹಿಸಿದ್ರು. ಕಾರ್ಯಕ್ರಮದಲ್ಲಿ ಬಚ್ಚನ್ ಪ್ರಶ್ನೆಗಳಿಗೆ ಉತ್ತರಿಸಿ 25 ಲಕ್ಷ ರೂ. ಹಣವನ್ನು ತಮ್ಮದಾಗಿಸಿಕೊಂಡ್ರು. ಇನ್ನು ಈ ಆಟದಲ್ಲಿ ಗೆದ್ದ ಹಣವನ್ನು ಬಸವತಾರಕಂ ಇಂಡೋ-ಅಮೆರಿಕನ್‌ ಕ್ಯಾನ್ಸರ್‌ ಆಸ್ಪತ್ರೆಗೆ ಸಿಂಧು ದಾನ ಮಾಡಿದ್ದಾರೆ.

ಬಸವತಾರಕಂ ಇಂಡೋ-ಅಮೆರಿಕನ್ ಆಸ್ಪತ್ರೆಯ ಮುಖ್ಯಸ್ಥ, ಟಾಲಿವುಡ್‌ನ ಖ್ಯಾತ ನಟ ಎನ್‌.ಬಾಲಕೃಷ್ಣ ಅವರಿಗೆ 25 ಲಕ್ಷ ರೂ. ಚೆಕ್‌ ಅನ್ನು ಸಿಂಧು ನೀಡಿದ್ದಾರೆ. ಸಿಂಧು ಅವರ ಈ ಕಾರ್ಯವನ್ನು ಬಾಲಕೃಷ್ಣ ಶ್ಲಾಘಿಸಿದರು. ಈ ಮೂಲಕ ಸಿಂಧು ಕ್ಯಾನ್ಸರ್ ರೋಗಿಗಳಿಗೆ ನೆರವಾಗುವುದರ ಜೊತೆಗೆ ಹಲವರಿಗೆ ಮಾದರಿಯಾಗಿದ್ದಾರೆ.