ಚೀನಾ ಓಪನ್ ಗೆದ್ದು ಇತಿಹಾಸ ಬರೆದ ಸಿಂಧು

0
626

ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ. ಸಿಂಧು ಚೀನಾ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಮತ್ತೊಂದು ಇತಿಹಾಸ ಬರೆದಿದ್ದಾರೆ.

ಭಾನುವಾರ ನಡೆದ ವನಿತೆಯರ ಸಿಂಗಲ್ಸ್ ಫೈನಲ್‌ನಲ್ಲಿ 21-11, 17-21, 21-11ಸೆಟ್‌ಗಳಿಂದ ಆತಿಥೇಯ ಆಟಗಾರ್ತಿ ಸನ್ ಯೂನ್ ಅವರನ್ನು ಸದೆಬಡಿದು ಮೊದಲ ಬಾರಿ ಪ್ರಶಸ್ತಿ ಎತ್ತಿ ಹಿಡಿದ ಸಾಧನೆ ಮಾಡಿದರು.

2014ರಲ್ಲಿ ಸೈನಾ ನೆಹವಾಲ್ ಈ ಟೂರ್ನಿ ಗೆದ್ದಿದ್ದರೆ 2015ರಲ್ಲಿ ರನ್ನರ್ ಅಪ್ ಆಗಿದ್ದರು. ಸಿಂಧು ಇದೀಗ ಈ ಟೂರ್ನಿ ಗೆದ್ದ ಭಾರತದ ಎರಡನೇ ಆಟಗಾರ್ತಿ ಎನಿಸಿಕೊಂಡಿದ್ದು, ಮತ್ತೊಂದು ಎತ್ತರಕ್ಕೇರಿದ್ದಾರೆ.

ಇದೇ ಮೊದಲ ಬಾರಿ ಚೀನಾ ಓಪನ್ ಫೈನಲ್‌ಗೇರಿದ್ದ ಸಿಂಧು ಚೊಚ್ಚಲ ಪ್ರವೇಶದಲ್ಲೇ ಈ ಸಾಧನೆ ಮಾಡಿದ್ದಾರೆ.