ಈ ಪ್ರಾಣಿ ನೀರು ಸಿಗದಿದ್ದರೆ ಆಹಾರವನ್ನೇ ತೆಗೆದುಕೊಳ್ಳುವುದಿಲ್ಲ.

0
985

ರೆಕೂನ್ (Racoon) ಕರಡಿಯ ಬಳಗಕ್ಕೆ ಸೇರಿದ ಪ್ರಾಣಿ.

© audubonportland
© audubonportland

ರೆಕೂನ್ ಎಂಬುದು ತುಂಬ ವಿಚಿತ್ರವಾದ ಪ್ರಾಣಿ. ಇದು ಆಹಾರವನ್ನು ತಿನ್ನುವ ಮೊದಲು ಅದನ್ನು ನೀರಿನಲ್ಲಿ ತೊಳೆದುಕೊಳ್ಳುತಂತೆ. ನೀರಿನಲ್ಲೇ ಇರುವ ಜೀವಿಗಳನ್ನು ಬೇಟೆಯಾಡಿ ತಿನ್ನುವಾಗಲೂ ರೆಕೂನ್ ಅವನ್ನು ತೊಳೆದೇ ತಿನ್ನುತ್ತದೆ. ಇವು ಮೀನು, ಕಪ್ಪೆ, ಏಡಿಗಳನ್ನೇ ಹೆಚ್ಚಾಗಿ ತಿನ್ನುತ್ತವೆ.

ರೆಕೂನ್ ಗಳು ನೀರಿರುವ ಮತ್ತು ವಾಸಿಸಲು ಮರಗಳಿರುವಂತ ಜಾಗದಲ್ಲಿ ನೆಲೆಸುತ್ತವೆ. ಸಾಮಾನ್ಯವಾಗಿ ಇವು ಕೆನಡಾ, ಅಮೆರಿಕಾ ಮತ್ತು ಮಧ್ಯ ಅಮೆರಿಕದಲ್ಲಿ ಕಂಡುಬರುತ್ತವೆ. ರೆಕೂನ್ ಗಳ ತುಪ್ಪಳ ತುಂಬ ಆಕರ್ಷಕವಾಗಿರುತ್ತದೆ. ರೆಕೂನ್ ಗಳ ತುಪ್ಪಳ, ಚರ್ಮ ಮತ್ತು ಆಹಾರಕ್ಕಾಗಿ ಜನರು ಇವುಗಳ ಬೇಟೆಯಾಡುತ್ತಾರೆ.

ರೆಕೂನ್, ಆಹಾರವನ್ನು ಏಕೆ ನೀರಿನಲ್ಲಿ ತೊಳೆಯುತ್ತದೆ ಎಂಬುದು ಇಂದಿಗೂ ತಿಳಿಯದ ವಿಷಯ. ಕೆಲವು ರೆಕೂನ್ ಗಳಂತೂ ನೀರು ಸಿಗದಿದ್ದರೆ ಆಹಾರವನ್ನೇ ತೆಗೆದುಕೊಳ್ಳುವುದಿಲ್ಲ. ಇನ್ನು ಕೆಲವು ನೀರಿಲ್ಲದಿದ್ದರೂ ಆಹಾರ ಸೇವಿಸುತ್ತವೆ.