ಮೂಲಂಗಿ ಸೇವನೆಯಿಂದ ಕ್ಯಾನ್ಸರ್ ಕೋಶಗಳ ನಿವಾರಣೆ ಜೊತೆಗೆ ಎಷ್ಟೊಂದು ಅರೋಗ್ಯ ಲಾಭಗಳಿವೆ ನೋಡಿ..

0
570

ತರಕಾರಿಗಳ ಸೇವನೆಯಿಂದ ಆರೋಗ್ಯದಲ್ಲಿ ಸಾಕಷ್ಟು ಲಾಭಗಳನ್ನು ಪಡೆದುಕೊಳ್ಳಬಹುದು, ಆದರೆ ಇದರ ಬಗ್ಗೆ ಸರಿಯಾದ ಲಾಭವನ್ನು ತಿಳಿಯದೆ ಕೆಲವರು ಇದರ ಸೇವನೆಯನ್ನು ದ್ವೇಷಿಸುತ್ತಾರೆ. ಆದರೆ ಮೂಲಂಗಿಯಲ್ಲಿರುವಂತಹ ಹಲವಾರು ರೀತಿಯ ಪೋಷಕಾಂಶಗಳು ಕೂದಲು ಹಾಗೂ ಚರ್ಮಕ್ಕೆ ತುಂಬಾ ಸಹಕಾರಿ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಮೂಲಂಗಿಯನ್ನು ಚರ್ಮಕ್ಕೆ ಹಾಗೂ ಕೂದಲಿಗೆ ಹಚ್ಚಿಕೊಳ್ಳುವುದರಿಂದ ಅದು ಸೌಂದರ್ಯ ವೃದ್ಧಿಸುವುದು. ವಿಟಮಿನ್ ಎ ಮತ್ತು ಸಿಯಿಂದ ಸಮೃದ್ಧವಾಗಿರುವಂತಹ ಮೂಲಂಗಿಯು ಚರ್ಮಕ್ಕೆ ಪುನರ್ಶ್ಚೇತನ ನೀಡುವುದು.

Also read: ಬಿಟ್ಟೂಬಿಡದೆ ತಲೆನೋವು ಕಾಡುತ್ತಿದೆಯೇ? ಹಾಗಾದ್ರೆ ಕೂಡಲೇ ಎಚ್ಚರವಹಿಸಿ, ಇದರಿಂದಲೇ ಮಿದುಳು ಕ್ಯಾನ್ಸರ್ ಕೂಡ ಬರಬಹುದು..

ಇದರಲ್ಲಿ ಕ್ಯಾಲ್ಸಿಯಂ, ಪೊಟಾಶಿಯಂ, ಪೋಸ್ಪರಸ್, ಪ್ರೋಟೀನ್ ಮತ್ತು ನಾರಿನಾಂಶವು ಚರ್ಮಕ್ಕೆ ಹಾಗೂ ಕೂದಲಿಗೆ ಅದ್ಭುತವನ್ನು ಉಂಟು ಮಾಡಲಿದೆ. ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಆಕ್ಸಿಡೆಂಟ್ ಗುಣ ಹೊಂದಿರುವಂತಹ ಮೂಲಂಗಿಯು ಹಲವಾರು ಪೋಷಕಾಂಶಗಳೊಂದಿಗೆ ಅತ್ಯಂತ ಆರೋಗ್ಯಕರ ತರಕಾರಿಯಾಗಿದೆ. ಶತಮಾನಗಳಿಂದಲೂ ಅದು ಉರಿಯೂತ,ಗಂಟಲಿನ ಕಿರಿಕಿರಿ,ಜ್ವರ ಮತ್ತು ಪಿತ್ತದೋಷಗಳಂತಹ ಹಲವಾರು ಸಮಸ್ಯೆಗಳ ಚಿಕಿತ್ಸೆಗಾಗಿ ಆಯುರ್ವೇದ ಮತ್ತು ಸಾಂಪ್ರದಾಯಿಕ ಚೀನಿ ಔಷಧಿ ಪದ್ಧತಿಯಲ್ಲಿ ಬಳಕೆಯಾಗುತ್ತಿದೆ. ಅಷ್ಟೇ ಅಲ್ಲದೆ ಮೂಲಂಗಿಯ ರಸದಲ್ಲಿರುವ ಐಸೊಥಾಯೊಸೈನೇಟ್‌ಗಳು ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತವೆ ಎನ್ನುವುದನ್ನು ಅಧ್ಯಯನವೊಂದು ಬೆಳಕಿಗೆ ತಂದಿದೆ.

Also read: ಕೇವಲ ಮಹಿಳೆಯರಿಗೆ ಅಷ್ಟೇ ಅಲ್ಲ ಪುರುಷರಿಗೂ ಸ್ತನ ಕ್ಯಾನ್ಸರ್ ಬರಬಹುದು, ಹೇಗೆ ಅಂತ ಈ ಮಾಹಿತಿ ನೋಡಿ..

ಮೂಲಂಗಿಯಲ್ಲಿರುವ ಆರೋಗ್ಯದ ಲಾಭಗಳೇನು?

1. ಮಲಬದ್ಧತೆಯನ್ನು ತಡೆಯುತ್ತದೆ:

ಮೂಲಂಗಿಯಲ್ಲಿ ಸಮೃದ್ಧವಾಗಿರುವ ನಾರು ಸಂಪೂರ್ಣ ಊಟದ ಅನುಭವ ನೀಡುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ನಿವಾರಿಸಲು ನೆರವಾಗುತ್ತದೆ,ಇದರಿಂದಾಗಿ ದೇಹದ ತೂಕವನ್ನು ಇಳಿಸಿಕೊಳ್ಳುವುದು ಸುಲಭವಾಗುತ್ತದೆ. ನಾರು ಕರುಳಿನ ಚಲನವಲನಕ್ಕೂ ನೆರವಾಗುತ್ತದೆ, ಮಲಬದ್ಧತೆಯನ್ನು ತಡೆಯುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ.

2. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:

ವಿಟಾಮಿನ್ ಸಿ ಶರೀರವನ್ನು ಫ್ರೀ ರ್ಯಾಡಿಕಲ್‌ಗಳಿಂದ ರಕ್ಷಿಸುವ ಶಕ್ತಿ ಮೂಲಂಗಿಯಲ್ಲಿದೆ. ಮತ್ತು ವಾತಾವರಣದಲ್ಲಿಯ ವಿಷಪದಾರ್ಥಗಳಿಂದ ಜೀವಕೋಶಗಳಿಗೆ ಹಾನಿಯನ್ನು ತಪ್ಪಿಸುತ್ತದೆ. ಚರ್ಮ ಮತ್ತು ರಕ್ತನಾಳಗಳ ಆರೋಗ್ಯ ಕಾಯ್ದುಕೊಳ್ಳಲು ನೆರವಾಗುವ ಕೊಲಾಜೆನ್ ಉತ್ಪಾದನೆಯಲ್ಲಿಯೂ ವಿಟಾಮಿನ್ ಸಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

3. ಕ್ಯಾನ್ಸರ್‌ನ್ನು ತಡೆಯುತ್ತದೆ:

Also read: ಪೋಷಕರೇ ನಿಮ್ಮ ಮಕ್ಕಳಿಗೆ ಕ್ಯಾನ್ಸರ್ ಬರದಂತೆ ತಡೆಯಲು ಈ ಕ್ರಮಗಳನ್ನು ಪಾಲಿಸಿ..

ಮೂಲಂಗಿಯಲ್ಲಿರುವ ಆ್ಯಂಥೊಸಿಯಾನಿನ್‌ಗಳು ಮತ್ತು ಇತರ ವಿಟಾಮಿನ್‌ಗಳು ಕ್ಯಾನ್ಸರ್ ನಿಗ್ರಹ ಗುಣಗಳನ್ನು ಹೊಂದಿವೆ. ಮೂಲಂಗಿಯ ರಸದಲ್ಲಿರುವ ಐಸೊಥಾಯೊಸೈನೇಟ್‌ಗಳು ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತವೆ ಎನ್ನುವುದನ್ನು ಅಧ್ಯಯನವೊಂದು ಬೆಳಕಿಗೆ ತಂದಿದೆ. ಇವು ಕ್ಯಾನ್ಸರ್‌ಗೆ ಕಾರಣವಾಗುವ ವಸ್ತುಗಳನ್ನು ಶರೀರದಿಂದ ಹೊರಕ್ಕೆ ಹಾಕುತ್ತವೆ ಮತ್ತು ಗಡ್ಡೆಗಳ ಬೆಳವಣಿಗೆಯನ್ನು ತಡೆಯುತ್ತವೆ.

4. ಮಧುಮೇಹವನ್ನು ನಿಯಂತ್ರಿಸುತ್ತದೆ:

ಮೂಲಂಗಿಯು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್‌ನ್ನು ಹೊಂದಿರುವುದರಿಂದ ಅದನ್ನು ಸೇವಿಸುವುದರಿಂದ ರಕ್ತದಲ್ಲ್ಲಿಯ ಸಕ್ಕರೆ ಮಟ್ಟದಲ್ಲಿ ವ್ಯತ್ಯಯವಾಗುವುದಿಲ್ಲ. ಮೂಲಂಗಿ ರಸದ ಸೇವನೆಯು ಮಧುಮೇಹಿಗಳಲ್ಲಿ ರಕ್ತದಲ್ಲಿಯ ಗ್ಲುಕೋಸ್ ಮಟ್ಟದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ ಮತ್ತು ಅದನ್ನು ನಿಯಂತ್ರಿಸಲು ನೆರವಾಗುತ್ತದೆ.

5. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ:

ಮೂಲಂಗಿಯಲ್ಲಿ ಹೇರಳವಾಗಿರುವ ಪೊಟ್ಯಾಷಿಯಂ ಅಧಿಕ ರಕ್ತದೊತ್ತಡವನ್ನು ತಗ್ಗಿಸಲು ನೆರವಾಗುತ್ತದೆ. ಪೊಟ್ಯಾಷಿಯಂ ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ ಮತ್ತು ರಕ್ತದ ಸುಗಮ ಹರಿವನ್ನು ಹೆಚ್ಚಿಸುತ್ತದೆ. ಅದು ಸಂಕುಚಿತಗೊಂಡಿರುವ ರಕ್ತನಾಳಗಳನ್ನೂ ಹಿಗ್ಗಿಸುತ್ತದೆ ಮತ್ತು ರಕ್ತ ಸಂಚಾರವನ್ನು ಸುಲಭಗೊಳಿಸುತ್ತದೆ.

6. ಮೊಡವೆಗೆ ರಾಮಬಾಣವಾಗಿದೆ:

ಮೂಲಂಗಿಯಲ್ಲಿ ಆಂಟಿಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇರುವ ಕಾರಣದಿಂದಾಗಿ ಇದು ಫ್ರೀ ರ್ಯಾಡಿಕಲ್ ನಿಂದ ಆಗುವ ಹಾನಿಯಿಂದ ಚರ್ಮವನ್ನು ರಕ್ಷಿಸುವುದು. ಚರ್ಮದಲ್ಲಿ ಇರುವಂತಹ ಕೊಳೆ ಹಾಗೂ ಕಲ್ಮಶವನ್ನು ಇದು ತೆಗೆದುಹಾಕುವುದು.

7. ಕೂದಲ ಬೆಳವಣಿಗೆ ಮಾಡುತ್ತೆ:

Also read: ಟಿವಿ ಪ್ರಿಯರೆ ಎಚ್ಚರ; ಹೆಚ್ಚು ಹೊತ್ತು ಟಿವಿ ನೋಡಿದರೆ ಬರಿ ಕಣ್ಣಿಗೆ ಅಪಾಯವಲ್ಲ ಕ್ಯಾನ್ಸರ್ ಕೂಡ ಬರುತ್ತೆ..

ಮೂಲಂಗಿಯಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ತಲೆಹೊಟ್ಟು ಉಂಟು ಮಾಡುವಂತಹ ಬ್ಯಾಕ್ಟೀರಿಯಾವನ್ನು ದೂರ ಮಾಡುವುದು ಮತ್ತು ಆರೋಗ್ಯಕಾರಿ ತಲೆಬುರುಡೆ ಕಾಪಾಡಿಕೊಳ್ಳಲು ನೆರವಾಗುವುದು. ಕಪ್ಪು ಮೂಲಂಗಿಯು ಕೂದಲಿಗೆ ಹಲವಾರು ರೀತಿಯ ಲಾಭಗಳನ್ನು ಉಂಟು ಮಾಡುವುದು ಎಂದು ತಿಳಿದುಬಂದಿದೆ. ನಿಯಮಿತವಾಗಿ ಕಪ್ಪು ಮೂಲಂಗಿಯ ರಸವನ್ನು ತಲೆಬುರುಡೆಗೆ ಹಚ್ಚಿಕೊಳ್ಳುವ ಮೂಲಕ ಕೂದಲ ಬೆಳವಣಿಗೆಗೆ ನೆರವಾಗುವುದು.

8. ಹೃದಯದ ಆರೋಗ್ಯಕ್ಕೆ ಮುಖ್ಯವಾಗಿದೆ:

ಆ್ಯಂಥೊಸಿಯಾನಿನ್ ಉರಿಯೂತ ನಿರೋಧಕ ಗುಣಗಳನ್ನು ಮೂಲಂಗಿ ಹೊಂದಿದ್ದು, ಹೃದಯನಾಳೀಯ ರೋಗಗಳಿಗೆ ತುತ್ತಾಗುವ ಅಪಾಯವನ್ನು ತಗ್ಗಿಸುತ್ತದೆ. ಪಾರ್ಶ್ವವಾಯುವಿಗೆ ಪ್ರಮುಖ ಕಾರಣವಾಗಿರುವ ಕೆಟ್ಟ ಕೊಲೆಸ್ಟ್ರಾಲ್(ಎಲ್‌ಡಿಎಲ್) ಮಟ್ಟವನ್ನು ಕಡಿಮೆ ಮಾಡುತ್ತದೆ. ಇಷ್ಟೊಂದು ಉಪಯೋಗವಿರುವ ಮೂಲಂಗಿಯನ್ನು ಉಪಯೋಗಿಸದೆ ಇದ್ದರೆ ನಷ್ಟವಾಗುವುದು ನಮಗೆ ಅಲ್ಲವೇ?.