ನಿಮಗಿದು ಗೊತ್ತಿರಲಿ ರಫೇಲ್ ಏರ್ ಕ್ರಾಫ್ಟ್ ಅವಳಿ ಯುದ್ಧ ವಿಮಾನ

0
605

ಕೇಂದ್ರ ಸರಕಾರವು ವಾಯುಪಡೆಗೆ ಬಲ ತುಂಬುವ ನಿಟ್ಟಿನಲ್ಲಿ ಫ್ರಾನ್ಸ್ ನಿಂದ 36 ರಫೇಲ್ ಯುದ್ಧ ವಿಮಾನಗಳನ್ನು ನೇರವಾಗಿ ಖರೀದಿಸಲು ಉದ್ಯುಕ್ತವಾಗಿದ್ದು. ಈ ಒಪ್ಪಂದ ಅಂತಿಮ ಹಮತದಲ್ಲಿದೆ. ಈ ಯುದ್ಧ ವಿಮಾನ ನಮಗೇಕೆ ಬೇಕು, ಇದರ ಹಿನ್ನೆಲೆಯೇನು ಎಂಬ ಬಗ್ಗೆ ಕಿರು ಮಾಹಿತಿ ಇಲ್ಲಿದೆ.

ಏನಿದು ಏರ್ ಕ್ರಾಫ್ಟ್

ಡಸ್ಸಾಲ್ಟ್ ರಫೇಲ್ – ಇದೊಂದು ಅವಳಿ ಯುದ್ಧ ವಿಮಾನ. ಫ್ರಾನ್ಸ್’ನ ವಾಯುಪಡೆ ಮತ್ತು ನೌಕಪಡೆಗೆಂದು ಅಭಿವೃದ್ಧಿಪಡಿಸಲಾಗಿದೆ. ಸಣ್ಣ ಮತ್ತು ದೀರ್ಘ ವ್ಯಾಪ್ತಿಯವರೆಗೆ ಕ್ಷಿಪಣಿಗಳನ್ನು ಹೊತ್ತೊಯ್ಯಬಲ್ಲ  ಸಾಮರ್ಥ್ಯವನ್ನು ಹೊಂದಿರುವ ರಫೇಲ್ ಏರ್ ಕ್ರಾಫ್ಟ್, ನೆಲ ಮತ್ತು ಸಮುದ್ರದಿಂದಲೂ ದಾಳಿ ನಡೆಸಬಲ್ಲದು. ಈ ವಿಮಾನವು 1.8 ಮ್ಯಾಕ್ (1.8 ಪಟ್ಟು ಶಬ್ದ ವೇಗದಲ್ಲಿ 1.8 ಪಟ್ಟು) ವೇಗದಲ್ಲಿ ಕ್ರಮಿಸಬಲ್ಲದು. ಇದರ ಕಾರ್ಯಾಚರಣೆಯ ಎತ್ತರವು 50 ಸಾವಿರ ಅಡಿ ಮಿತಿಇದೆ.

ಬೇಡಿಕೆಯ ವಿಮಾನ:

ಮಲ್ಟಿ –ಮೋಡ್ ರಾಡರ್ ನಂತರ ಉನ್ನತ ತಂತ್ರಜ್ಞಾನವನ್ನು ಹೊಂದಿರುವ ರಫೇಲ್ ಗೆ ಭಾರಿ ಬೇಡಿಕೆ ಇದೆ. ಯುರೋಫೈಟರ್ ಕಂಪನಿಯ ತೂಫಾನ್ ವಿಮಾನಕ್ಕೆ ಇದು ಹತ್ತಿರದ ಸ್ಪರ್ಧಿ ಆಗಿದೆ. ಬ್ರೆಜಿಲ್ ಮತ್ತು ಈಜಿಪ್ಟ್ ಹೊರತುಪಡಿಸಿದರೆ ಈ ವಿಮಾನದ ಪ್ರಮುಖ ಖರೀದಿದಾರ ರಾಷ್ಟ್ರಗಳಲ್ಲಿ ಭಾರತವು ಒಂದಾಗಿದೆ.

ಭಾರತ ಮತ್ತು ರಫೇಲ್

2012 ಫೆಬ್ರವರಿಯಲ್ಲಿ ಭಾರತದ ರಕ್ಷಣಾ ಸಚಿವಾಲಯವು ಭಾರತೀಯ ವಾಯುಪಡೆಯ ಎಂಎಂಆರ್ ಸಿಎ (ಮಧ್ಯಮ ಬಹುಪಾತ್ರದ ಯುದ್ಧ ವಿಮಾನ) ಪ್ರೋಗ್ರಾಂಗೆ ರಫೇಲ್ ವಿಮಾನ ಆಯ್ದುಕೊಂಡಿತ್ತು. ಇದರ ಒಪ್ಪಂದ 20 ಶತಕೋಟಿ ಡಾಲರ್. ಒಪ್ಪಂದದ ನೀತಿ ನಿಯಮಗಳಡಿ 126 ರಫೇಲ್ ವಿಮಾನಗಳ ಪೈಕಿ 18 ಹಾರಾಟಕ್ಕೆ ಸಿದ್ಧವಾಗಿದ್ದರೆ, ಉಳಿದ ವಿಮಾನಗಳ ಬಿಡಿಭಾಗಗಳನ್ನು ಸರಕಾರ ಸ್ವಾಮ್ಯದ ಎಚ್ ಎ ಎಲ್ ಘಟಕದಲ್ಲಿ ಜೋಡಿಸಬೇಕಿತ್ತು. ಈ ವಿಷಯದಲ್ಲಿ ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಸ್ಥಗಿತಗೋಂಡಿತ್ತು. ಈಗ ಮತ್ತೆ ಒಪ್ಪಂದವಾಯಿತು.

ಮೊದಲ ವಿಮಾನ:

ಪರಿಷ್ಕೃತ ಒಪ್ಪಂದದ ಅನ್ವಯ ಎಲ್ಲ 36 ರಫೇಲ್ ಯುದ್ಧ ವಿಮಾನಗಳನ್ನು ಫ್ರಾನ್ಸ್ ಸಿದ್ಧ ಸ್ಥಿತಿಯಲ್ಲೇ ಪೂರೈಸಲಿದೆ. 36 ವಿಮಾನಗಳ ಪೈಕಿ ಮೊದಲ ತುಕಡಿ 2019 ರಲ್ಲಿ ಭಾರತೀಯ ವಾಯುಪಡೆ ಕೈಸೇರಿದೆ. ಇನ್ನು ಯುದ್ಧ ವಿಮಾನಗಳ ಗುಣಮಟ್ಟದಲ್ಲಿ ಯಾವೂದೇ ರಾಜಿ ಮಾಡಿಕೊಂಡಿಲ್ಲ. 126 ಯುದ್ಧ ವಿಮಾನಗಳನ್ನು ಪೂರೈಸುವ 20 ಬಿಲಿಯನ್ ಡಾಲರ್ ಒಪ್ಪಂದದಡಿ ಯಾವ ದರ್ಜೆಯ ವಿಮಾನಗಳನ್ನು ಪೂರೈಸಲು ಒಪ್ಪಿಕೊಳ್ಳಲಾಗಿತ್ತೋ ಅದೇ ವಿಮಾನಗಳ ವಾಯುಪಡೆ ಕೈಸೇರಲಿವೆ ಎಂದು ಮೂಲಗಳು ತಿಳಿಸಿವೆ.