ಗುರು ರಾಘವೇಂದ್ರ ಸ್ವಾಮಿಗಳ ಸಾಧನೆ ಹಾಗೂ ಅವರು ಬರೆದಿರುವ ಗ್ರಂಥಗಳ ಬಗ್ಗೆ ತಿಳಿದು ರಾಯರ ಕೃಪೆಗೆ ಪಾತ್ರರಾಗಿ..

0
1150

Kannada News | Karnataka Temple History

ಸತ್ಯ ಹಾಗೂ ಧರ್ಮಗಳ ಪ್ರತಿರೂಪವೆಂದೇ ಹೇಳುವುದಾದರೆ ಮಂತ್ರಾಲಯದ ಶ್ರೀ ಗುರು ರಾಘವೇಂದ್ರರಿಗೆ ಮಾತ್ರ. ರಾಘವೇಂದ್ರ ಸ್ವಾಮಿಗಳು ಎಲ್ಲರಿಗೂ ಎಲ್ಲದಕ್ಕೂ ಬೇಕಾಗಿದ್ದಾರೆ. ಇವರು ಸಾಮಾನ್ಯಜನರಿಗೆ ಮತ್ತು ವಿದ್ವಕ್ತ ಪ್ರಪಂಚಕ್ಕೂ ಬೇಕು. ಬನ್ನಿ ಹಾಗಾದರೆ ರಾಯರು ವಿದ್ವಕ್ತ ಪ್ರಪಂಚಕ್ಕೆ ನೀಡಿರುವ ಕೊಡುಗೆಗಳನ್ನು ತಿಳಿಯೋಣ.

ರಾಯರು ಸ್ವಾಮಿಗಳಾದ ಮೇಲೆ ರಚಿಸಿರುವ ಗ್ರಂಥ ರಚನೆಗಳಿಗೆ ಜಗತ್ತಿನಲ್ಲಿ ಯಾರು ಸರಿ ಸಾಟಿ ಇಲ್ಲ. ಸುಮಾರು 48ಕ್ಕೂ ಮಿಗಿಲಾದ ಗ್ರಂಥಗಳನ್ನು ರಚಿಸಿ ಟಿಪ್ಪಣ್ಣ್ಯಾಚಾರ್ಯ ಚಕ್ರವರ್ತಿಗಳೆಂದು ಪ್ರಸಿದ್ಧಿ ಪಡೆದವರು. ಬಹುಶಃ ಜಗತ್ತಿನಲ್ಲಿ ಯಾವ ಗುರುಗಳಿಗೆ ಇಲ್ಲದ ಮಹಿಮೆ ಶ್ರೀರಾಯರಿಗೆ ಬರಲು ಕಾರಣವೇನೆಂದರೆ ಒಂದು ಪ್ರಲ್ಹಾದರಾದಾಗ ಭಗವಂತನು ಇವರಿಗೆ ವಿಶೇಷವಾದ ವರವನ್ನು ಕೊಟ್ಟು ಅನುಗ್ರಹಿಸಿರುವುದರಿಂದ, ಇನ್ನೊಂದು ಶ್ರೀಮಧ್ವಾಚಾರ್ಯರೇ ಮೊದಲಾದ ಎಲ್ಲಾ ಪೂರ್ವಜ ಯತಿಗಳು ಇವರಲ್ಲಿ ನಿಂದು ಆಶಕ್ತಿಯನ್ನು ಕೊಡುತ್ತಿದ್ದಾರೆ.

ರಾಯರು ಮಹಾ ಮೇಧಾವಿಗಳು. ಎಲ್ಲ ಗ್ರಂಥಗಳಿಗೆ ಮೂಲವಾಗಿರುವ ಟಿಕಾಚಾರ್ಯರು ಬರೆದಿರುವಂಥಹ ಸುಧಾ ಅನ್ನುವಂಥಹ ದೊಡ್ಡ ಗ್ರಂಥಕ್ಕೆ ಪರಿಮಳ ಅನ್ನುವ ಗ್ರಂಥವನ್ನು ರಾಯರು ಬರೆದಿರುತ್ತಾರೆ. ನದೀ ತಾರತಮ್ಯ ಸ್ತೋತ್ರವೆಂಬ ಚಿಕ್ಕ ಗ್ರಂಥದಿಂದ ಆರಂಭಿಸಿ ಪರಿಮಳವೆಂಬ ದೊಡ್ಡ ಗ್ರಂಥಗಳವರೆಗೆ ರಚಿಸಿ ವಿದ್ವಕ್ತ ಪ್ರಪಂಚಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡಿದ್ದಾರೆ. ಅಷ್ಟೇ ಅಲ್ಲ, ಎಲ್ಲ ಉಪನಿಷತ್ತುಗಳಿಗೆ ಅರ್ಥ ಬರೆದಿರುವ ರಾಯರು ಹೀಗೆ ವಿದ್ವಕ್ತ ಪ್ರಪಂಚದಲ್ಲಿ ಯಾರು ಎನನ್ನು ಕೇಳುತ್ತಾರೋ ಅದಕ್ಕೆ ಉತ್ತರವನ್ನು ಬರೆದಿರುತ್ತಾರೆ ಹೀಗೆ ರಾಯರು ತಮ್ಮದೇ ಆದ ಶೈಲಿಯಲ್ಲಿ ಸರಳವಾಗಿ ಮತ್ತು ಎಲ್ಲರಿಗೂ ಅರ್ಥವಾಗುವಂತ ಗ್ರಂಥಗಳನ್ನು ವಿದ್ವಕ್ತ ಪ್ರಪಂಚಕ್ಕೆ ಕೊಡಿಗೆಯಾಗಿ ನೀಡಿದ್ದಾರೆ.

ಇನ್ನು ಮಹಾಭಾರತ ಮತ್ತು ರಾಮಾಯಣ ಇವುಗಳನ್ನೂ ಕೂಡ ಅವರು ಸಣ್ಣ ಸಣ್ಣ ಶ್ಲೋಕಗಳಲ್ಲಿ ಅರ್ಥಾತ ದೊಡ್ಡ ವಿಷಯಗಳನ್ನು ಸಣ್ಣದಾಗಿ ಸಾಮಾನ್ಯ ಜನರಿಗೆ ತಿಳಿಯುವಂಥಹ ರೀತಿಯಲ್ಲಿ ಹೇಳುವ ಶಕ್ತಿ ರಾಘವೇಂದ್ರ ಸ್ವಾಮಿಗಳಲ್ಲಿ ನಾವು ಕಾಣಬಹುದು. ಇದರಿಂದಾಗಿ ವಿದ್ವಕ್ತ ಪ್ರಪಂಚದಲ್ಲಿ ಇರುವ ಧಾರ್ಮಿಕ ಜನರು ಗ್ರಂಥ ಉಲ್ಲಾಪನೆ ಮಾಡಿವ ಮೊದಲು ರಾಯರನ್ನು ನಮಸ್ಕರಿಸುತ್ತಾರೆ.

also read: ರಾಯರು ಅನುಗ್ರಹ ಮಾಡಿದರೂ ಗುರುತಿಸುವ ಶಕ್ತಿ ನಮಗಿರೊಲ್ಲ… ಅದಕ್ಕೆ ಈ ಕಥೆಯೇ ಸಾಕ್ಷಿ…