ಭಾರತದ ಟೆಸ್ಟ್ ಸಾಧನೆಯ ಹಿಂದೆ ಕುಂಬ್ಳೆ ಮಾತ್ರವಲ್ಲ ಇನ್ನೊಬ್ಬ ಕನ್ನಡಿಗ ರಾಘವೇಂದ್ರ ಅವರ ಕೊಡುಗೆಯ ಬಗ್ಗೆ ಓದಿ!!

0
688

ಆಸ್ಟ್ರೇಲಿಯಾ ವಿರುದ್ಧ ಭಾರತ 4 ಟೆಸ್ಟ್ ಸರಣಿಯ ಬಾರ್ಡರ್ ಗವಾಸ್ಕರ್ ಟ್ರೊಫಿಯನ್ನು 2-1ರಿಂದ ಗೆದ್ದು ಕೊಂಡಿದೆ. ಯಶಸ್ಸಿನಅಲೆಯಲ್ಲಿ ತೇಲುತ್ತಿರುವ ಭಾರತ ತಂಡಕ್ಕೆ ಶುಭಾಶಯಗಳ ಮಾಹಪೋರವೇ ಹರಿದು ಬರುತ್ತಿದೆ. ಆದರೆ ಈ ಯಶಸ್ಸಿನ ಹಿಂದೆಕನ್ನಡಿಗನ ಕೈವಾಡ ಇದೆ ಎಂದರೇ ನಂಬಲು ಸಾಧ್ಯವೇ. ಎಸ್. ಈ ಅಭುತ್ ಪೂರ್ವ ಯಶಸ್ಸಿನ ಹಿಂದೆ ಅನಿಲ್ ಕುಂಬ್ಳೆ, ರಾಹುಲ್‍ಅವರ ಕೊಡುಗೆ ಅಪಾರ. ಆದರೆ ಈವರನ್ನೂ ಬಿಟ್ಟ ಇನ್ನೊಬ್ಬ ಕನ್ನಡಿಗ ಕೈವಾಡವಿದೆ.

ಹೌದು.. ಕರ್ನಾಟಕದ ಇನ್ನೋರ್ವ ಪ್ರತಿಭೆ ಈ ಗೆಲುವಿನ ಹಿಂದೆ  ತೆರೆ ಮೆರೆಯ ಕಾರ್ಯವನ್ನು ಮಾಡಿದೆ. ಆಸೀಸ್ ತಂಡದ ಬೌನ್ಸರ್, ಶರವೇಗದ ಎಸೆತ, ಶಾರ್ಟ್ ಪಿಚ್ ಎಸೆತಗಳನ್ನು ಎದುರಿಸಲು, ಭಾರತ ಬ್ಯಾಟ್ಸ್ ಮನ್ ಗಳಿಗೆ ನೆಟ್ಸ್ ಅಭ್ಯಾಸದಲ್ಲಿ ಥ್ರೋ ಡೌನ್ಎಸೆತಗಳನ್ನು ಎಸೆಯುವ ಸಹಾಯಕ ಸಿಬ್ಬಂದಿ ಕರ್ನಾಟಕದ ರಾಘವೇಂದ್ರ. ಇವರು ಮೂಲತಃ ಕುಮಟಾದವರು. ಇವರಿಗೆ ಚಿಕ್ಕವಯಸ್ಸಿನಿಂದ ಕ್ರಿಕೆಟ್ ಪ್ರೀತಿ.  ರಾಘವೇಂದ್ರವ  ರ ತಂದೆ  ಮುಂಬೈಗೆ ಕೆಲಸಕ್ಕೆ ಕಳುಹಿಸುತ್ತಾರೆ. ಅಲ್ಲಿ ರಾಘವೇಂದ್ರ, ಸಚಿನ್ ಗುರುರಮಾಕಾಂತ್ ಅಚ್ರೇಕರ್ ಅವರನ್ನು ಭೇಟಿ , ಮಾಡುತ್ತಾರೆ.

ಅಲ್ಲಿ ಕ್ರಿಕೆಟ್ ಕಲಿತು ಕುಮುಟಾಗೆ ಮರಳುತ್ತಾರೆ. ಕುಮಟಾದಲ್ಲಿ ಶಿಕ್ಷಣಪೂರೈಸಿ ತಂದೆಯ ವಿರೋಧದ ನಡುವೇಯೂ ರಾಘವೇಂದ್ರ ಹುಬ್ಬಳ್ಳಿಗೆ ಬರುತ್ತಾರೆ. ರಾಜನಗರದಲ್ಲಿ ಕೆಎಸ್ ಸಿಎ ಅಂಗಳದ ಮಗ್ಗಲಿನಸ್ಮಶಾನದಲ್ಲಿ ಸುಮಾರು 4 ವರ್ಷ ಕಳೆಯುತ್ತಾರೆ. ಈ ವೇಳೆ ಅಪಘಾತದಲ್ಲಿ ಇವರ ಕೈಗೆ ಗಾಯವಾಗುತ್ತದೆ. ಆದರೂ ಧೃತಿ ಗೆಡದೆ,ಕೋಚಿಂಗ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಹಂತ ಹಂತವಾಗಿ ಯಶಸ್ಸಿನ ಮೆಟ್ಟಿಲು ಏರಿದ ರಾಘವೇಂದ್ರ ಅವರಿಗೆ ಈಗರಾಜಮರ್ಯಾದೆ.

2011ರಲ್ಲಿ ಮೊದಲ ಬಾರಿಗೆ ಇವರು ಟೀಮ್ ಇಂಡಿಯಾಕ್ಕೆ ಆಯ್ಕೆ ಆಗುತ್ತಾರೆ. ಮತ್ತೆ 2014ರಿಂದ ಈ ವರೆಗೂ ಇವರು ಭಾರತ ತಂಡದ ಸಹಾಯಕ ಕೋಚ್ ಕಾರ್ಯವನ್ನು ಮಾಡುತ್ತಿದ್ದಾರೆ. ಇವರ ಕ್ರಿಕೆಟ್ ಪ್ರೀತಿ, ಬದ್ಧತೆ ರಾಘವೇಂದ್ರ ಅವರೇ ಸಾಠಿ.

ವಿರಾಟ್ ಕೊಹ್ಲಿ ಸಹ ಇತ್ತೀಚಿಗೆ ತಮ್ಮ ಶತಕವನ್ನು ರಾಘವೇಂದ್ರ ಅವರಿಗೆ ಅರ್ಪಿಸಿದ್ದರು. ಅಜಿಂಕ್ಯ ರಹಾನೆ, ಯುವರಾಜ್‍ ಸಿಂಗ್,ಸುರೇಶ್ ರೈನಾ, ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತಿತರ ಆಟಗಾರರು ಸಹ ಇವರ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಇನ್ನು ಇತ್ತೀಚೀಗೆ ವೀಕ್ಷಕ ವಿವರಣೆ ಮಾಡುವಾಗ ಭಾರತ ತಂಡದ ಮಾಜಿ ನಿರ್ದೇಶಕ ರವಿ ಶಾಸ್ತ್ರಿ ಅವರು ರಾಘವೇಂದ್ರ ಅವರಗುಣಗಾನ ಮಾಡಿದ್ದರು. ಲಿಟಲ್ ಮಾಸ್ಟರ್ ಸುನೀಲ್ ಗವಾಸ್ಕರ್ ಅವರು ಸಹ ಇವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.

ಇವರಿಂದ ಇನ್ನು ಉತ್ತಮ ಕಾರ್ಯಗಳು ನಡೆಯಲಿ ಎಂಬುದೇ ಅಭಿಮಾನಿಗಳ ಆಶಯ.