ರಘು ದೀಕ್ಷಿತ್ ಒಬ್ಬ ಹೆಮ್ಮೆಯ ಕನ್ನಡಿಗನೇ ಸರಿ.. ಎಷ್ಟೇ ಸಾಧನೆ ಮಾಡಿದರೂ ಅಹಂಕಾರವೆಂಬುದು ಶೂನ್ಯ..

0
639

ಪಡೆದಿದ್ದು ಸೂಕ್ಷ್ಮ ಜೀವಶಾಸ್ತ್ರದಲ್ಲಿ ಚಿನ್ನದ ಪದಕ.. ಆದರೇ ಮಾಡುತ್ತಿತುವ ಕೆಲಸ ವಿದೇಶಗಳಲ್ಲಿ ಕನ್ನಡದ ಕಂಪನ್ನು ಬೀರುತ್ತಿರುವುದು..

ಒಬ್ಬ ಹೊಸ ತಲೆಮಾರಿನ ವಿಶಿಷ್ಟ ಸಂಗೀತ ಸಂಯೋಜಕ ಗಾಯಕರಲ್ಲೊಬ್ಬರು ತಮ್ಮದೇ ಆದ ಹೊಸ ಪಂಗಡದ ಪ್ರತಿಭೆಯೆಂದು ಗುರುತಿಸಲ್ಪಡುತ್ತಿದ್ದಾರೆ. ಸ್ವಲ್ಪ ಮಟ್ಟಿಗೆ ಇಂಡಿಪಾಪ್, ಎಂದು ವರ್ಗಿಕರಿಸಬಹುದಾಧ ಧಾಟಿಯಲ್ಲಿ ಅವರ ಸಂಗೀತ ಸಾಧನೆ ರೂಪುಗೊಂಡು ಸಾಗುತ್ತಿದೆ. ಇವರು ಮತ್ಯಾರು ಅಲ್ಲ ಕನ್ನಡಿಗರ ಹೆಮ್ಮೆ ರಘು ದೀಕ್ಷಿತ್.. ತಾವೇ ರೂಪಿಸಿದ ಒಂದು ಸಂಸ್ಥೆ “ದಿ ರಘು ದೀಕ್ಷಿತ್ ಪ್ರಾಜೆಕ್ಟ್” ವತಿಯಿಂದ ಸಂಗೀತವನ್ನು ಪ್ರಪಂಚಾದ್ಯಂತ, ಹಲವಾರು ದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ರಘು ದೀಕ್ಷಿತ್, ಸೂಕ್ಙ್ಮ ಜೀವಶಾಸ್ಥ್ರದಲ್ಲಿ ಚಿನ್ನದ ಪದಕ ಪಡೆದಿದ್ದಾರೆ, ಹಾಗುಭರತನಾಟ್ಯದಲ್ಲಿ ವಿದ್ವತ್ ಪದವಿ ಪಡೆದಿದ್ದಾರೆ. ಆದರೂ ಕೂಡಾ ಅವರು ತಮ್ಮ ವಾದ್ಯ ಸ೦ಗೀತದಿ೦ದ ಹೆಸರು ಮಾಡಿದ್ದಾರೆ.

ವಿದ್ಯಾಭ್ಯಾಸ:

ರಘು, ಮೈಸೂರಿನ ಮಾನಸಗಂಗೋತ್ರಿಯಲ್ಲಿ ಜೈವರಸಾಯನಿಕಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ, ಭರತನಾಟ್ಯದಲ್ಲಿ ವಿದ್ವತ್ ಪರೀಕ್ಷೆಯಲ್ಲೂ ತೇರ್ಗಡೆಯಾದರು. ಸ್ವಲ್ಪ ಸಮಯ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ದುಡಿದರು. ಮುಂದೆ ಅದೆಲ್ಲವನ್ನು ಬಿಟ್ಟು ಸಂಗೀತಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡರು. ತಮ್ಮ ಅನುಪಮ ಸಾಧನೆಯಿಂದ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹು ಭರವಸೆಯ ಹೊಸ ಸಂಗೀತಗಾರ ಎಂದು ಗುರುತಿಸಲ್ಪಟ್ಟಿದ್ದಾರೆ. ಜಾಗತಿಕ ಮಟ್ಟದ ಪ್ರಶಸ್ತಿಯನ್ನು ಸಾಂಗ್‌ಲೈನ್ಸ್‌‌ನಿಂದ ಪಡೆದಿದ್ದಾರೆ.

ಸಂಗೀತ ಕ್ಷೇತ್ರ:

ರಘು ದೀಕ್ಷಿತ್  ಪ್ರಾರಂಭದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಹಾಡುಗಳನ್ನು ನುಡಿಸುತ್ತಿದ್ದರು. ಅವರ ಸಂಗೀತದ ಗೀಳಿನ ವಿಷಯ ದಾಖಲಿಸಲು ಯೋಗ್ಯವಾಗಿದೆ. ಒಮ್ಮೆ ವಿದೇಶಿಯರೊಬ್ಬರು ಇಂಗ್ಲೀಷಿನಲ್ಲಿ ಬರೆಯುವ ಬದಲು ಮಾತೃಭಾಷೆಯಲ್ಲಿ ಬರೆಯಲು ಸಲಹೆ ಕೊಟ್ಟಮೇಲೆ ರಘು ಕನ್ನಡದಲ್ಲಿ ಬರೆಯಲು ಪ್ರಾರಂಭಿಸಿದರು. ಹಾಗೆಯೇ ಮುಂದುವರೆದು ಹಿಂದಿಯನ್ನೂ ಸೇರಿಸಿಕೊಂಡರು. ಕನ್ನಡ ಭಾಷೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡು ಹೋಗಿ ಅಲ್ಲಿನ ಸಭಿಕರಿಗೆ ಪ್ರಸ್ತುತಪಡಿಸಿದ ಖ್ಯಾತಿ ರಘು ದೀಕ್ಷಿತ್‍ರಿಗೆ ಸೇರಬೇಕು. ವಿದೇಶಗಳನ್ನು ಬೆಟ್ಟಿಯಾದಾಗ ಅಲ್ಲಿ ಕನ್ನಡ ಭಾಷೆಯ ಹಾಡನ್ನು ಪ್ರಸ್ತುತಪಡಿಸುತ್ತಿದ್ದರು. ಇಂದಿನ ಯುವ ಪೀಳಿಗೆಯವರಿಗೆ ತುಂಬ ಅಚ್ಚುಮೆಚ್ಚಿನ ಗಾಯಕ ರಘು ದೀಕ್ಷಿತ್. ಸೈಕೋ ಚಿತ್ರದಲ್ಲಿ ಅವರು ಸಂಗೀತ ನೀಡಿ ಹಾಡಿದ “ನಿನ್ನ ಪೂಜೆಗೆ ಬಂದೆ” ಹಾಡು ಅತ್ಯಂತ ಜನಪ್ರಿಯತೆಯನ್ನು ಗಳಿಸಿದೆ. ಕನ್ನಡಿಗರು ತೊಡುವ ಲುಂಗಿಯನ್ನೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಶ್ರೇಯಸ್ಸು ಅವರದು. ಟ್ವಿಟ್ಟರ್ ಜಾಲತಾಣದಲ್ಲಿ ತುಂಬ ಚಟುವಟಿಕೆಯಿಂದಿರುತ್ತಾರೆ. ಸಂಪರ್ಕಿಸಿದವರೆಲ್ಲರ ಜೊತೆ ವ್ಯವಹರಿಸುವುದು ತುಂಬ ಕಡಿಮೆ. ರಘು ದೀಕ್ಷಿತ್ ಇದಕ್ಕೆ ಅಪವಾದವೆನ್ನುವ ತರಹ ವರ್ತಿಸುತ್ತಾರೆ.

ಹೆಂಡತಿ ಕಂಟೆಂಪೊರರಿ ಡ್ಯಾನ್ಸರ್. ಆಕೆ ಒಡಿಸ್ಸಿ, ಕಥಕ್, ಭರತನಾಟ್ಯ ಎಲ್ಲ ಕಲಿತು ನೃತ್ಯ ಸಂಯೋಜಕಿಯಾಗಿ ಹೆಸರವಾಸಿಯಾಗಿದ್ದಾರೆ.. ಕಲರ್ಸ್ ಕನ್ನಡದ ಪ್ರಖ್ಯಾತ ಶೋ ಡ್ಯಾನ್ಸಿಂಗ್ ಸ್ಟಾರ್ ನ ಜಡ್ಜ್ ಆಗಿ ಕೂಡ ಕಾಣಿಸಿಕೊಂಡಿದ್ದರು..

ಎಷ್ಟೇ ಸಾಧನೆ ಮಾಡಿದರೂ ಸ್ವಲ್ಪವೂ ಅಹಂಕಾರ ಭಾವ ಇಲ್ಲದ ರಘು ದೀಕ್ಷಿತ್ ಎಲ್ಲರಿಗೂ ಇಷ್ಟವಾಗುತ್ತಾರೆ.. ಇದೇ ನವೆಂಬರ್ 11ಕ್ಕೆ ಅವರ ಹುಟ್ಟುಹಬ್ಬವಿದೆ.. ಶೇರ್ ಮಾಡುವುದರೊಂದಿಗೆ ನಿಮ್ಮ ಶುಭಾಶಯ ತಿಳಿಸಿ..

 

ಜೈ ಹಿಂದ್ ಜೈ ಕರ್ನಾಟಕ..