ರಾಗಿ ಮಸಾಲಾ ದೋಸೆ ಆರೋಗ್ಯಕ್ಕೂ ಸೈ ರುಚಿಗೂ ಸೈ ….ಹೇಗೆ ಮಾಡೋದು ಅಂತೀರಾ ಇಲ್ಲಿ ನೋಡಿ..!

0
1629

ರಾಗಿ ಸೇವಿಸುವುದರಿಂದ ನಿರೋಗಿ ಯಾಗಿರಬಹುದು ಎಂಬ ಮಾತಿದೆ. ಆದ್ದರಿಂದಲೇ ಹಿಟ್ಟು ತಿಂದು ಗಟ್ಟಿಯಾಗು ಎನ್ನುತ್ತಾರೆ. ಅತಿ ಕಡಿಮೆ ಬೆಲೆಗೆ ಸಿಗುವ ಧಾನ್ಯ ರಾಗಿ. ಆದರೆ ಇದರಲ್ಲಿರುವ ಪೌಷ್ಟಿಕಾಂಶ ಅಪಾರ. ಪ್ರೋಟಿನ್, ಕೊಬ್ಬು, ಪಿಷ್ಟ, ಖನಿಜ, ಸುಣ್ಣ, ನಾರು, ಮುಂತಾದವುಗಳಿಂದ ಸಮೃದ್ಧವಾಗಿರುವ ರಾಗಿಯನ್ನು ನಿತ್ಯದ ಆಹಾರದಲ್ಲಿ ಬಳಸುವುದು ಒಳ್ಳೆಯದು. ಇಂತಹ ಆರೋಗ್ಯಕರ ಅಡಿಗೆಯಲ್ಲಿ ರಾಗಿ ಮಸಾಲಾ ದೋಸೆ ಒಂದು.

ಬೇಕಾಗುವ ಸಾಮಗ್ರಿಗಳು

 • ದಪ್ಪ ಅಕ್ಕಿ 1 ಕಪ್
 • ರಾಗಿ 1 ಕಪ್
 • ಕಡಲೆಬೇಳೆ 2 ಟೇಬಲ್ ಚಮಚ
 • ಉದ್ದಿನ ಬೇಳೆ 1/2 ಕಪ್
 • ಮೆಂತೆ ಕಾಳು 1 /4 ಟೀ ಚಮಚ
 • ಬೆಣ್ಣೆ ಅಥವಾ ತುಪ್ಪ 2 ರಿಂದ 3 ಟೇಬಲ್ ಚಮಚ
 • ಸಕ್ಕರೆ 1 /4 ಚಮಚ
 • ಉಪ್ಪು ರುಚಿಗೆ ತಕ್ಕಷ್ಟು

 • ಅಕ್ಕಿ, ಉದ್ದಿನಬೇಳೆ. ಕಡಲೆಬೇಳೆ, ರಾಗಿ ಮತ್ತು ಮೆಂತೆಯನ್ನು ತೊಳೆದು 5 ರಿಂದ 6 ಗಂಟೆಗಳ ಕಾಲ ನೆನೆಸಿ.
 • ನಂತರ ಅದನ್ನು ನುಣ್ಣಗೆ ರುಬ್ಬಿ ಅದಕ್ಕೆ ಉಪ್ಪು ಸೇರಿಸಿ ರಾತ್ರಿ ಇಡಿ ಅಥವಾ 8 ರಿಂದ 10 ಗಂಟೆಗಳ ಕಾಲ ಬಿಡಿ.
 • ಆಮೇಲೆ ದೋಸೆ ಹಿಟ್ಟಿಗೆ ಸ್ವಲ್ಪ ಸಕ್ಕರೆ ಸೇರಿಸಿ ಚೆನ್ನಾಗಿ ಹೊಂದಿಸಿ.
 • ದೋಸೆ ತವಾವನ್ನು ಬಿಸಿ ಮಾಡಿ ದೋಸೆ ಎರೆದು ಮೇಲಿನಿಂದ ತುಪ್ಪ ಅಥವಾ ಬೆಣ್ಣೆ ಹಚ್ಚಿ ಬೇಯಿಸಿ.
 • ದೋಸೆ ತವಾ ಕಾದ ಮೇಲೆ ದೋಸೆ ಹುಯ್ಯಿರಿ. ಸುತ್ತಲೂ ಎಣ್ಣೆ ಹಾಕಿ ಹದವಾದ ಉರಿಯಲ್ಲಿ ಬೇಯಿಸಿ.
 • ಈಗ ಗರಿಗರಿಯಾದ ರಾಗಿ ಮಸಾಲಾ ದೋಸೆ ಸಿದ್ಧವಾಗಿದೆ ಇದನ್ನು ತೆಂಗಿನಕಾಯಿ ಚಟ್ನಿ ಅಥವಾ ಆಲೂಗಡ್ಡೆ ಪಲ್ಯದೊಂದಿಗೆ ಸವಿಯಿರಿ.