ರಾಗಿ ಸೂಪ್ ಹೇಗೆ ಮಾಡೋದು ಅಂತೀರಾ ಇಲ್ಲಿ ನೋಡಿ..!

0
1127

ನಿಮ್ಮ ಆರೋಗ್ಯಕ್ಕೆ ಬೇಕಾಗಿರು ಸೊಪ್ ಇದು ಈ ರಾಗಿ ಯಲ್ಲಿ ಮನುಷ್ಯನಿಗೆ ಬೇಕಾಗುವು ಎಲ್ಲಾ ಅರೋಗ್ಯ ಸಂಬಂಧಿಸಿ ಅಂಶಗಳನ್ನು ಒಳಗೊಂಡಿರುತ್ತದೆ. ಇನ್ನು ಕೆಲವರಿಗೆ ಇದರಬಗ್ಗೆ ಗೊತ್ತಿರುವುದಿಲ್ಲ ಅದಕ್ಕಾಗಿ ಇವತ್ತು ನಿಮಗೆ ರಾಗಿ ಸೂಪ್ ಹೇಗೆ ಮಾಡೋದು ಅಂತ ಹೇಳ್ತಿವಿ ನೋಡಿ.
ಈ ರಾಗಿ ಸೂಪ್ ಮಾಡಲು ಬೇಕಾಗವು ಸಾಮಗ್ರಿಗಳು;

Image result for ragi soup

ನಿಮಗೆ ಎಷ್ಟು ಸೂಪ್ ಬೇಕು ಅದಕ್ಕೆ ಆಗುವಷ್ಟು ಸಾಮಗ್ರಿಗಳನ್ನು ಬಳಸಿ
ರಾಗಿ
ಕ್ಯಾರೆಟ್
ಈರುಳ್ಳಿ
ಸ್ಟಾಕ್
ಬೀನ್ಸ್
ಬೆಳ್ಳುಳ್ಳಿ
ಜಜ್ಜಿದ ಮೆಣಸಿನಕಾಳು
ತುಪ್ಪ
ಉಪ್ಪು ರುಚಿಗೆ ತಕ್ಕಷ್ಟು
ಕಡಲೆ ಹಿಟ್ಟು
ಕೊತ್ತಂಬರಿ ಸೊಪ್ಪು
ಇನ್ನು ಈ ರಾಗಿ ಸೂಪ್ ಮಾಡುವು ವಿಧಾನ ಇಲ್ಲಿದೆ ನೋಡಿ.
ಮೊದಲು ರಾಗಿಯನ್ನು ಸ್ವಚ್ಚ ಮಾಡಿ ತೊಳೆದು, ರಾಗಿಯ ಎರಡರಷ್ಟು ನೀರನ್ನು ಹಾಕಿ ಬೇಯಿಸಿ. ನಂತರ
ಈರುಳ್ಳಿ, ಬೀನ್ಸ್ ಮತ್ತು ಕ್ಯಾರೆಟ್ ಅನ್ನು ತೊಳೆದು ಕತ್ತರಿಸಿಕೊಳ್ಳಿ. ಕೊತ್ತಂಬರಿ ಸೊಪ್ಪನ್ನು ತೊಳೆದು ಹೆಚ್ಚಿಟ್ಟುಕೊಳ್ಳಿ. ಮೆಣಸು ಮತ್ತು ಬೆಳ್ಳುಳ್ಳಿಯನ್ನು ಜಜ್ಜಿಟ್ಟುಕೊಂಡು ನಂತರ

ಒಂದು ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿಕೊಂಡು ಅದಕ್ಕೆ ಮೆಣಸು, ಕೊತ್ತಂಬರಿ ಸೊಪ್ಪು ಮತ್ತು ಕಡಲೆ ಹಿಟ್ಟನ್ನು ಸೇರಿಸಿ ಸ್ವಲ್ಪಕಾಲ ಬೇಯಿಸಿ.
ನಂತರ ಅದೇ ಬಾಣಲೆಗೆ ಕತ್ತರಿಸಿದ ತರಕಾರಿ,ಬೇಯಿಸಿದ ರಾಗಿ, ಸ್ಟಾಕ್ ಮತ್ತು ಉಪ್ಪನ್ನು ಸೇರಿಸಿ. ಹತ್ತು ನಿಮಿಷ ಬೇಯಿಸಿ. ಇದಾದ ನಂತರ ನಿಮಗೆ ರಾಗಿ ಸೂಪ್ ಸವಿಯಲು ಸಿದ್ದವಾಗಿರುತ್ತದೆ