ಬೇಸಿಗೆಯ ಶಾಖದಿಂದ ಬಿಡುಗಡೆ: ರಾಗಿ ಗಂಜಿ!! ಮಾಡುವುದು ಹೇಗೆ??

0
1573

ಬೆಸಿಗೆ ಆರಂಭವಾಗಿದೆ. ಸೂರ್ಯ ಶಾಖ ಭೂಮಿಯ ತಾಪ ಹೆಚ್ಚಿಸುತ್ತದೆ. ಇನ್ನು ಇದರಿಂದ ಆರೋಗ್ಯದ ಮೇಲೆ ಬದಲಾವಣೆಆಗುವುದು ಸಾಮನ್ಯ. ಬೇಸಿಗೆಯಲ್ಲಿ ಯಾವ ಯಾವ ಆಹಾರ ಸೇವಿಸಿದರೆ ಉತ್ತಮ ಎಂದು ತಲೆ ಕೆಡುತ್ತದೆ.

ರಾಗಿ ನಮ್ಮ ರಾಜ್ಯದಲ್ಲಿ ಹೆಚ್ಚಾಗಿ ಸಿಗುವು ಧಾನ್ಯ. ಈ ಪದಾರ್ಥ ಬೆಸೆಗೆಗೆ ಹೇಳಿ ಮಾಡಿಸಿದ್ದು. ಬೇಸಿಗೆ ತಾಪವನ್ನು ನಿಮ್ಮ ದೇಹ ನಿಯಂತ್ರಿಸಲು ರಾಗಿ ಗಂಜಿ ಅಥವಾ ರಾಗಿ ಅಂಬಲಿ ಮಾಡಿ ಕುಡಿದರೆ ಆರೋಗ್ಯಕ್ಕೆ ಉತ್ತಮ. ಹಾಗಿದ್ದರೇ ಈ ರಾಗಿ ಗಂಜಿಯನ್ನುಮಾಡುವ ವಿಧಾನ ತಿಳಿಯದೇ ಇದ್ದರೆ, ನಿಮಗಾಗಿ ಸುಲಭ ವಿಧಾನ.

ಗಂಜೀ ಮಾಡಲು ಬೇಕಾದ ಸಾಮಗ್ರಿ

–      4 ಟಿ ಸ್ಪೂನ್ ರಾಗಿ ಹಿಟ್ಟು

–      ½ ಚಮಚ ಪುಡಿ ಮಾಡಿದ ಜೀರಿಗೆ

–      1 ಕಪ್ ಮಜ್ಜಿಗೆ ಅಥವಾ ಮೊಸರು

–      2 ಲೋಟ ನೀರು

–      ರುಚಿಗೆ ತಕ್ಕ ಉಪ್ಪು

ಗಂಜಿ ಮಾಡುವ ವಿಧಾನ

–      ಪಾತ್ರೆಯಲ್ಲಿ ರಾಗಿ ಹಿಟ್ಟನ್ನು ಹಾಕಿ ½ ಕಪ್ ನಷ್ಟು ನೀರು ಹಾಕಿ, ಚೆನ್ನಾಗಿ ಮಿಶ್ರಣ ಮಾಡಬೇಕು.

–      ಇನ್ನು ಮಿಶ್ರಣವಾದ ರಾಗಿಯನ್ನು, ಒಂದು ಪಾತ್ರೆಯಲ್ಲಿ ಹಾಕಬೇಕು. ಅಲ್ಲದೆ ಗ್ಯಾಸ್ ಮೇಲೆ ಕಾಯಿಸಬೇಕು. ಸೂಚನೆ: ಹೀಗೆಮಾಡುವಾಗ ರಾಗಿ ಗಂಟಾಗದಂತೆ ನೋಡಿಕೊಳ್ಳಬೇಕು.

–      ಹಿಟ್ಟು ಸ್ವಲ್ಪ ಗಟ್ಟಿ ಆದಾಗ ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆಯನ್ನು ಮಿಕ್ಸ ಮಾಡ, ಗ್ಯಾಸ್ ನಿಂದ ಕೆಳಗೆ ಇಳಿಸಿದ ಬಳಿಕಹಾಕಬೇಕು.

ಹಿಟ್ಟು ತಣ್ಣಗಾದ ಬಳಿಕ ಮೊಸರು ಅಥವಾ ಮಜ್ಜಿಗೆ ಹಾಕ ಮಿಶ್ರಣ ಮಾಡಿದರೆ ಗಂಜಿ ಕುಡಿಯಲು ಸಿದ್ದ.