ಕ್ರಿಕೆಟ್-ನಿಂದ ನಿವೃತ್ತಿಯ ನಂತರವೂ ಸೂಪರ್ ಹೀರೋ ಆಗಿ ಮಿಂಚುತ್ತಿದ್ದಾರೆ, ‘ಗೋಡೆ’ ಖ್ಯಾತಿಯ ಕನ್ನಡಿಗ, ರಾಹುಲ್ ದ್ರಾವಿಡ್….!

0
568

ಭಾರತೀಯ ಕ್ರಿಕೆಟ್ ಕಂಡ ಅತ್ಯದ್ಭುತ ಕ್ರಿಕೆಟಿಗರಲ್ಲಿ ಒಬ್ಬರಾದ, ಅಭಿಮಾನಿಗಳಿಂದ “ದಿ ವಾಲ್” ಎಂದೇ ಹೊಗಳಿಸಿಕೊಳ್ಳುವ, ಟೆಸ್ಟ್ ಕ್ರಿಕೆಟ್-ನ ಚಕ್ರವರ್ತಿ, ಎದುರಾಳಿ ತಂಡದ ಬೌಲರ್-ಗಳನ್ನು ಕಾಡುವ ಕರ್ನಾಟಕದ ಆಟಗಾರ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ 45 ನೇ ಹುಟ್ಟು-ಹಬ್ಬಕ್ಕೆ ಮಾಧ್ಯಮವೊಂದು ವಿಶೇಷ ಕೊಡುಗೆ ನೀಡಿದೆ.

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಅಂಡರ್ -19 ಮತ್ತು ‘ಎ’ ತಂಡಗಳ ಪ್ರಸ್ತುತ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಅವರ ಹುಟ್ಟು ಹಬ್ಬದಂದು, ಚೆನ್ನೈನ ಕ್ರೀಡಾ ಮಾಧ್ಯಮ ಮತ್ತು ವಾಣಿಜ್ಯ ಆರಂಭದ ಸ್ಪೋರ್ಟ್ಸ್-ವಾಕ್ ‘ದಿ ವಾಲ್’ ಎಂಬ ಹೆಸರಿನ ಕಾಮಿಕ್ ಪುಸ್ತಕವನ್ನು ಬಿಡುಗಡೆ ಮಾಡಿದೆ. ಇನ್ನು ಆ ಪುಸ್ತಕದಲ್ಲಿ ಏನಿದೆ ವಿಶೇಷ ಅಂತೀರ, ಆ ಪುಸ್ತಕದಲ್ಲಿ ರಾಹುಲ್ ದ್ರಾವಿಡ್ ಒಬ್ಬ ಸೂಪರ್ ಹೀರೋ ಗೊತ್ತ.

ರಾಹುಲ್ ದ್ರಾವಿಡ್ ಅವರನ್ನು ಸೂಪರ್ ಹೀರೋ ಎಂದು ಬಿಂಬಿಸಿರುವ ‘ದಿ ವಾಲ್’ ಪುಸ್ತಕವನ್ನು ಹಿಮಾಂಶು ಎಂಬುವವರು ಬರೆದಿದ್ದಾರೆ, ಇದಕ್ಕೆ ವ್ಯಂಗ್ಯಚಿತ್ರಕಾರ ಹಾಗು ಸಂಸ್ಥೆಯ ಸಹ-ಸಂಸ್ಥಾಪಕರಾದ ಅಹೀದನ್ ಅವರು ವಿವರಣೆಯನ್ನು ನೀಡಿ ಚಿತ್ರಗಳನ್ನು ತಯಾರಿಸಿದ್ದಾರೆ.

ಈ ಕಾಮಿಕ್ ಪುಸ್ತಕದಲ್ಲಿ ದ್ರಾವಿಡ್ ಆಡಿದ ಶ್ರೇಷ್ಠ ಇನ್ನಿಂಗ್ಸ್-ಗಳನ್ನು ವಿವರಿಸಲಾಗಿದೆ. ಸಂಸ್ಥೆಯ ಇನ್ನೊಬ್ಬ ಸಹ-ಸಂಸ್ಥಾಪಕರಾದ ಕೆಎಸ್. ದಿವಾಕರ ಅವರು ಕಳೆದ ವರ್ಷ RDFC ರಾಹುಲ್ ದ್ರಾವಿಡ್ ಫ್ಯಾನ್ ಕ್ಲಬ್ ಸದಸ್ಯರನ್ನು ಭೇಟಿ ಮಾಡಿ ಪುಸ್ತಕಕ್ಕೆ ಮಾಹಿತಿ ಪಡೆದಿದ್ದರು. ಪುಸ್ತಕ ಬಿಡುಗಡೆ ವೇಳೆಯಲ್ಲಿ ‘ದಿ ವಾಲ್’ ಅಭಿಮಾನಿಗಳಲ್ಲಿ ದ್ರಾವಿಡ್ ಅವರ ನೆನಪುಗಳು ಮರುಕಳಿಸಲಿವೆ ಎಂದರು.

ಈ ಪುಸ್ತಕದಲ್ಲಿ, ದ್ರಾವಿಡ್ ಅವರ ಸಹ ಆಟಗಾರರಾದ ವಿವಿಎಸ್ ಲಕ್ಷ್ಮಣ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ಇತರೆ ಆಟಗಾರರ ಜೊತೆ ಆಡಿದ ಇನ್ನಿಂಗ್ಸ್ ಮತ್ತು ಅವರ ವೈಯಕ್ತಿಕ ಬದುಕಿನ ಬಗ್ಗೆ ಕೂಡ ಸಾಕಷ್ಟು ವಿವರಣೆಯನ್ನು ನೀಡಿದ್ದಾರೆ. ಸದ್ಯ ಈ ಪುಸ್ತಕ ಆನ್-ಲೈನ್ ಮಾರುಕಟ್ಟೆಯಲ್ಲಿ 199 ರೂ. ಬೆಲೆಗೆ ಮಾರಾಟವಾಗುತ್ತಿದೆ.