ರಾಹುಲ್ ದ್ರಾವಿಡ್ : ಭಾರತದ ಮಹಾ ಗೋಡೆ

0
912

ರಾಹುಲ್ ದ್ರಾವಿಡ್. ಹೆಸರು ಕೇಳಿದ ಕೂಡಲೇ ಮನಸಿಗೆ ಬರುವ ಚಿತ್ರಣವೇನು? ಶಿಸ್ತು, ಸಂಯಮ, ತಾಳ್ಮೆ, ಏಕಾಗ್ರತೆ, ಬುದ್ಧಿವಂತಿಕೆ, ಇತ್ಯಾದಿ. ಶ್ರೇಷ್ಠತೆಯ ಪರಾಕಾಷ್ಠೆಯನ್ನು ತಲುಪಿಯೂ ಇನ್ನೂ ಮುಂದಕ್ಕೆ ಹೋಗಬೇಕು ಎಂದು ಸದಾ ಹಂಬಲಿಸುತ್ತಿರುವ, ತಾನಿನ್ನೂ ಕ್ರೀಡೆಯ ವಿದ್ಯಾರ್ಥಿ ಎಂದು ತನ್ನನ್ನು ತಾನು ಪರಿಗಣಿಸುವ ಅಪರೂಪದ ಕ್ರೀಡಾಳು. ಯಾವುದರಲ್ಲಿ ನಾವು ಪರಿಪಕ್ವವಾಗಿಲ್ಲವೋ ಅದನ್ನು ಪ್ರಯತ್ನಿಸಲೂಬಾರದು ಎಂಬ ಧೋರಣೆಯೊಂದಿಗೆ ತನ್ನ ಕ್ರೀಡಾ ಜೀವನದ ಅತ್ಯುನ್ನತ ಮಟ್ಟ ತಲುಪಿರುವ ವ್ಯಕ್ತಿ ದ್ರಾವಿಡ್.

ಪ್ರತಿಯೊಬ್ಬರಿಗೆ ನನ್ನದು, ನಮ್ಮದು, ನಮ್ಮವರು ಎಂದರೆ ಏನೋ ಒಂಥರಾ ಅಟ್ಯಾಚ್‍ಮೆಂಟ್. ಅದೇ ರೀತಿ ಕರ್ನಾಟಕದ ಯಾವುದೇ ತಂಡವೆಂದರೆ ಅದು ಗೆಲ್ಲಬೇಕೆಂಬ ಹಪಾಹಪಿ. ರಣಜಿ ಟ್ರೋಫಿ ನಡೆಯುತ್ತಿರುವಾಗ ಪತ್ರಿಕೆಗಳಲ್ಲಿ ಆಗಾಗ ಒಂದು ಹೆಸರು ನನಗೆ ಆಕರ್ಷಕವೆನಿಸುತ್ತಿತ್ತು. ಆ ಹೆಸರು ಪ್ರತಿ ಬಾರಿ ಹೆಚ್ಚು ಹೆಚ್ಚು ಪ್ರಾಮುಖ್ಯತೆ ಪಡೆಯುವಾಗ ನನಗೆ ಇನ್ನೂ ಹೆಚ್ಚು ಅಭಿಮಾನ. ಕರ್ನಾಟಕ ತಂಡದ ಆಟದಲ್ಲಿ ಆ ವ್ಯಕ್ತಿ ಹೆಚ್ಚು ಹೆಚ್ಚು ಸಾಧನೆ ಮಾಡಲಿ ಎಂಬ ನಿರಂತರ ಹಾರೈಕೆ.

ಆ ಹೆಸರೇ ರಾಹುಲ್ ದ್ರಾವಿಡ್.
ಅವರಿಗೆ ಕನ್ನಡ ಬರೋಲ್ಲ ಅಂತ ಸುಳ್ಳು ವದಂತಿ . ವಿಡಿಯೋ ನೋಡಿ ಎಷ್ಟು ಚನ್ನಾಗಿ ಕನ್ನಡ ಮಾತಾಡ್ತಾರೆ :
 

ಸುದೀರ್ಘ ಕಾಲ ಕ್ರಿಕೆಟ್‍ನ ಘನತೆ ಹೆಚ್ಚಿಸಿದ, ಭಾರತ ತಂಡಕ್ಕೆ ಆಪತ್ಭಾಂಧವನಾಗಿ ಕೆಚ್ಚೆದೆಯ ಹೋರಾಟ ಸಂಘಟಿಸಿ, ಹಲವಾರು ಸೋಲುಗಳನ್ನು ತಪ್ಪಿಸಿ, ಬಹಳಷ್ಟು ಗೆಲುವನ್ನು ಸಮರ್ಪಿಸಿದ ಅಪ್ರತಿಮ ನಿಷ್ಠಾವಂತ ಕ್ರಿಕೆಟಿಗ ರಾಹುಲ್ ದ್ರಾವಿಡ್‍ಗೆ ಶುಭ ನಮನಗಳು.