ಹೈವೋಲ್ಟೇಜ್ ಕಣವಾಗಿರುವ ಮಂಡ್ಯಕ್ಕೆ ನಾಳೆ ರಾಹುಲ್ ಗಾಂಧಿ; ಇದು ನಿಖಿಲ್-ಗೆ ಸಾಹಾಯವಾಗುತ್ತಾ??

0
282

ಲೋಕಸಭಾ ಚುನಾವಣೆಯಲ್ಲಿ ಇಡಿ ರಾಜ್ಯದ ತುಂಬೆಲ್ಲ ಹೆಚ್ಚು ಸುದ್ದಿಯಲ್ಲಿರುವ ಮಂಡ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಖುದ್ದಾಗಿ ಪ್ರಧಾನಿ ಅಭ್ಯರ್ಥಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಾಳೆ ಪ್ರಚಾರಕ್ಕೆ ಆಗಮಿಸಲಿದ್ದಾರೆ. ಸಿಎಂ ಪುತ್ರ, ಸುಮಲತಾ ನಡುವೆ ಇರುವ ಸ್ಪರ್ಧೆಯಲ್ಲಿ ಏನಾದರು ಮಾಡಿ ನಿಖಿಲ್ ಅವರನ್ನು ಗೆಲ್ಲಿಸಬೇಕು ಎನ್ನುವ ಚಲದಲ್ಲಿರುವ ಕುಮಾರಸ್ವಾಮಿ ರಾಹುಲ್ ಗಾಂಧಿಯನ್ನು ಪ್ರಚಾರಕ್ಕೆ ಇಳಿಸಿ ಮತಬೇಟೆ ಮಾಡಲಿದ್ದಾರೆ.

Also read: ಮೋದಿ ವಿರುದ್ದ ಮಾತನಾಡಲು ಹೋಗಿ ಪಾಕಿಸ್ತಾನವನ್ನು ಹಾಡಿ ಹೊಗಳಿದ ಕೈ ಶಾಸಕ; ಆಡಿಯೋ ಬಗ್ಗೆ ಜಾಲತಾಣದಲ್ಲಿ ಬಾರಿ ಚರ್ಚೆ..

ಹೌದು ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ ಈ ನಡುವೆ ಸುಮಲತಾ ಪರ ಪ್ರಚಾರಕ್ಕೆ ಇಳಿದ ನಟ ದರ್ಶನ್ ಯಶ್ ಅವರು ಜೋರಾಗಿ ಮತ ಬೇಟೆ ಮಾಡುತ್ತಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯನ್ನು ಶತಾಯಗತಾಯ ಗೆಲ್ಲಿಸಲು ಹಲವು ತಂತ್ರಗಳನ್ನು ಹೆಣೆಯುತ್ತಿದ್ದು ಇದೀಗ ಖುದ್ದು ರಾಹುಲ್ ಗಾಂಧಿಯೇ ಅಖಾಡಕ್ಕಿಳಿಯುವ ಸೂಚನೆಯಿದೆ. ಇದರಿಂದ ಮಂಡ್ಯದಲ್ಲಿ ಮತ್ತೆ ಚುನಾವಣೆ ರಂಗೇರಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ನಾಳೆ ರಾಜ್ಯದಲ್ಲಿ ಮತ ಯಾಚನೆಗೆ ಆಗಮಿಸಲಿರುವ ರಾಹುಲ್ ಗಾಂಧಿ ಕೆ ಆರ್ ನಗರದಲ್ಲಿ ಕಾಂಗ್ರೆಸ್-ಜೆಡಿಎಸ್ ಜಂಟಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಳೆದೆರಡು ದಿನಗಳಿಂದ ಸಿಎಂ ಕುಮಾರಸ್ವಾಮಿ ಮಂಡ್ಯದಲ್ಲಿ ಸತತ ಪ್ರಚಾರ ನಡೆಸುತ್ತಿದ್ದಾರೆ. ಇನ್ನೊಂದೆಡೆ ಸುಮಲತಾ ಮತ್ತು ಅವರ ಬೆಂಬಲಿಗರು ಹಳ್ಳಿ ಹಳ್ಳಿಗೆ ಹೋಗಿ ಪ್ರಚಾರ ನಡೆಸುತ್ತಿದ್ದಾರೆ. ಅದರಂತೆ ಕೆ ಆರ್ ನಗರದಲ್ಲಿ ಸುಮಲತಾ ಅಂಬರೀಷ್ ಗೆ ಪ್ರಚಾರದ ವೇಳೆ ಭರ್ಜರಿ ಪ್ರತಿಕ್ರಿಯೆ ಮತದಾರರಿಂದ ಸಿಕ್ಕಿತ್ತು. ಇದನ್ನು ಸೆಳೆಯಲು ಜೆಡಿಎಸ್ ಇಲ್ಲಿ ಕಾರ್ಯತಂತ್ರ ಹೆಣೆದಿದೆ ಎನ್ನಲಾಗುತ್ತಿದೆ. ಇದಕ್ಕಾಗಿ ಸಿಎಂ ಕುಮಾರಸ್ವಾಮಿಯವರು ರಾಹುಲ್ ಗಾಂಧಿಯವರನ್ನೇ ತಮ್ಮ ಮಗನ ಪರವಾಗಿ ಪ್ರಚಾರ ನಡೆಸಬೇಕೆಂದು ಖುದ್ದಾಗಿ ಆಹ್ವಾನ ಕೊಟ್ಟಿದ್ದಾರೆ.

Also read: ಮತ್ತೆ ಜ್ಯೋತಿಷ್ಯ ನುಡಿದು ನಿಂಬೆಹಣ್ಣಿನ ರಹಸ್ಯ ಬಿಚ್ಚಿಟ್ಟ ಎಚ್.ಡಿ ರೇವಣ್ಣ; ಮತ್ತೆ ಮೋದಿ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ ಘೋಷಣೆ..

ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿ ಮೈಸೂರಿನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾಗೆ ಬೆಂಬಲ ಘೋಷಿಸಿದ್ದರು. ಹೀಗಾಗಿ ರಾಹುಲ್ ಗಾಂಧಿಯವರೇ ಕೆ ಆರ್ ನಗರದಲ್ಲಿ ತಮ್ಮ ಅಭ್ಯರ್ಥಿ ನಿಖಿಲ್ ಗೆ ಮತಯಾಚನೆ ಮಾಡುವ ಸಾಧ್ಯತೆಯಿದೆ. ಆದರೆ ಮೈತ್ರಿ ಸರ್ಕಾರದಲ್ಲಿ ಭಿನ್ನಮತ ಹೊಗೆಯಾಡುತ್ತಿದ್ದರೂ ಕೂಡ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಜನತೆಯ ಮುಂದೆ ತೋರಿಸಿಕೊಳ್ಳುತ್ತಿರುವ ಎರಡು ಪಕ್ಷಗಳು ರಾಹುಲ್ ಗಾಂಧಿಯವರ ಆಗಮನದಿಂದ ಭಿನ್ನಮತ ಸರಿಹೊಂದುವ ಸೂಚನೆ ಇದೆ.

ಚಲುವರಾಯ ಸ್ವಾಮಿಗೆ ಸಿದ್ದು ಖಡಕ್ ಸೂಚನೆ:

Also read: ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆದ್ದು ಅಧಿಕಾರಕ್ಕೆ ಬಂದರೆ ಭಾರತದೊಂದಿಗೆ ಶಾಂತಿ ಮಾತುಕತೆಗೆ ಉತ್ತಮ ಅವಕಾಶ; ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌..

ಹೌದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಂಡ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಚಲುವರಾಯ ಸ್ವಾಮಿಗೆ ಕಾರ್ಯಕ್ರಮದಲ್ಲಿ ತಪ್ಪದೇ ಭಾಗಿಯಾಗಲು ಸೂಚನೆ ನೀಡಿದ್ದಾರೆ. ಸಿದ್ದರಾಮಯ್ಯರ ಈ ಸೂಚನೆಗೆ ಸೈ ಎಂದಿರುವ ಚಲುವರಾಯ ಸ್ವಾಮಿ ರಾಹುಲ್ ಗಾಂಧಿಗೆ ಮುಜುಗರ ಆಗದಂತೆ ನಡೆದುಕೊಳ್ಳುವುದಾಗಿ ಮಾತು ನೀಡಿದ್ದಾರೆ. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಚಲುವರಾಯ ಸ್ವಾಮಿ ರಾಹುಲ್ ನಮ್ಮ ನಾಯಕರು, ಆ ಕಾರಣಕ್ಕೆ ಮಂಡ್ಯದಲ್ಲಿ ಶನಿವಾರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಮೋದಿ ಹೋದ ಕಡೆಯಲ್ಲಿ ರಾಹುಲ್?

Also read: ಸುಮಲತಾ ಅವರಿಗೆ ವೋಟ್ ಹಾಕಲ್ಲ, ಮಂಡ್ಯದಲ್ಲಿ ಮುಸ್ಲಿಮರಿಂದ ಬಹಿರಂಗ ಹೇಳಿಕೆ; ಮೋದಿ ಆಶೀರ್ವಾದ ಸುಮಲತಾಗೆ ಮುಳುವಾಯಿತೆ??

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಶನಿವಾರ ರಾಜ್ಯದ ಮೂರು ಕಡೆ ಜೆಡಿಎಸ್‌-ಕಾಂಗ್ರೆಸ್‌ ಜಂಟಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಸಭೆಗಳಲ್ಲಿ ಉಭಯ ಪಕ್ಷಗಳ ನಾಯಕರು ಭಾಗವಹಿಸುತ್ತಿದ್ದಾರೆ. ಶನಿವಾರ ಮಧ್ಯಾಹ್ನ 12ಕ್ಕೆ ಕೋಲಾರ, 3 ಗಂಟೆಗೆ ಚಿತ್ರದುರ್ಗ ಹಾಗೂ ಸಂಜೆ 5.30ಕ್ಕೆ ಕೆ.ಆರ್‌.ನಗರದಲ್ಲಿ ಏರ್ಪಡಿಸಿರುವ ಜಂಟಿ ಸಭೆಗಳಲ್ಲಿ ರಾಹುಲ್‌ ಗಾಂಧಿ ಭಾಗವಹಿಸಲಿದ್ದಾರೆ. ಈಗಾಗಲೇ ಮೋದಿಯವರು ಚಿತ್ರದುರ್ಗಕ್ಕೆ ಬಂದು ಹೋಗಿದ್ದು ಈಗ ರಾಹುಲ್ ಗಾಂಧಿ ಕೂಡ ಅದೇ ಕೆತ್ರಕ್ಕೆ ಆಗಮಿಸಲಿದ್ದಾರೆ.