ರಾಹುಲ್ ಗಾಂಧಿ ಎಚ್.ಎ.ಎಲ್. ಸಂಸ್ಥೆಯ ಉಳಿವಿಗಿ ಮಾಡ್ತಿರೋ ಕೆಲಸಗಳನ್ನು ನೋಡಿದ್ರೆ ಗೊತ್ತಾಗುತ್ತೆ ಅವರಲ್ಲಿ ಎಷ್ಟು ಪ್ರಬುದ್ದತೆ ಬಂದಿದೆ ಅಂತ…

0
385
ಎಚ್ಎಎಲ್ ನಿವೃತ್ತ ನೌಕರರ ಜೊತೆ ರಾಹುಲ್ ಸಂವಾದ; ಕೇಂದ್ರದ ನಡೆಗೆ ಅಸಮಾಧಾನ

ಭವಿಷ್ಯದಲ್ಲಿ ಅಮೆರಿಕಕ್ಕೆ ಸೆಡ್ಡು ಹೊಡೆಯುವ ಶಕ್ತಿ ಎಚ್’ಎಎಲ್ ನಲ್ಲಿದೆ. ದೇಶದ ವೈಮಾನಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ಆದರೆ ಕೇಂದ್ರ ಸರ್ಕಾರ ಎಚ್’ಎಎಲ್’’ಗೆ ಅವಮಾನ ಮಾಡಿದೆ ಎಂದು ಎಐಸಿಸಿ ಅಧ್ಯಕ್ಷ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

Also read: ಪುಸ್ತಕ ಪ್ರಿಯರ ಅವೆನ್ಯೂ ರಸ್ತೆ; ಇಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕಗಳದ್ದೇ ಕಾರುಬಾರು..!

ಬೆಂಗಳೂರಿಗೆ ಆಗಮಿಸಿದ್ದ ರಾಹುಲ್ ಗಾಂಧಿ, ನಗರದ ಮಿನ್ಸ್ಕ್ ಸ್ಕ್ವೇರ್ ಬಳಿ ರಾಫೆಲ್ ವಿವಾದದ ಸಂಬಂಧ ಎಚ್’ಎಎಲ್ ನಿವೃತ್ತ ನೌಕರರ ಜೊತೆ ಸಂವಾದ ನಡೆಸಿದರು. ಸಂವಾದಕ್ಕೂ ಮುನ್ನ ಮಾತನಾಡಿ, ಎಚ್ಎಎಲ್  ಕೇವಲ ಕಂಪನಿ ದೇಶದ ಶಕ್ತಿ. ದೇಶದ ವೈಮಾನಿಕ ಕ್ಷೇತ್ರದಲ್ಲಿ ಎಚ್ಎಎಲ್ ಕೊಡುಗೆ ಅಪಾರವಾದುದು. ಎಚ್ಎಎಲ್ ಸಾಮರ್ಥ್ಯದ ಬಗ್ಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಮಾಮಾ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರ ಮಾತ್ರ ಎಚ್ಎಎಲ್ಗೆ ಯುದ್ಧ ವಿಮಾನ ತಯಾರಿಸುವ ಸಾಮರ್ಥ್ಯ ಇಲ್ಲ ಎಂದೇ ಪ್ರತಿಪಾದಿಸುವ ಮೂಲಕ ಅವಮಾನಿಸುತ್ತಿದೆ ಎಂದು ಸಂವಾದದಲ್ಲಿ ಗುಡುಗಿದರು.


Also read: ಸಂಸದ್ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಮೋದಿ ಸರ್ಕಾರದ ಮಂತ್ರಿಗಳ ಗ್ರಾಮಗಳ ಸ್ಥಿತಿ ಸಂಪೂರ್ಣ ಹಾಳಾಗಿವೆ..

ಪ್ರಧಾನಿ ಮೋದಿ ಇಂತಹ ಅನುಭವಿ ಕಂಪನಿಗೆ ರಾಫೆಲ್ ಯುದ್ಧ ವಿಮಾನ ನಿರ್ಮಾಣ ಗುತ್ತಿಗೆ ನೀಡುವ ಬದಲು ಅನುಭವ ಇಲ್ಲದ ಅನಿಲ್ ಅಂಬಾನಿಯ ರಿಲಯನ್ಸ್ ಡಿಫೆನ್ಸ್ ಕಂಪನಿಗೆ ನೀಡುವ ಮೂಲಕ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರಿಗೆ ಸೈಕಲ್ ಸಹ ನಿರ್ಮಿಸಲು ಬರುವುದಿಲ್ಲ ಎಂದು ಆರೋಪಿಸಿದರು. ಬಳಿಕ ಎಚ್ಎಎಲ್ ನಿವೃತ್ತ ನೌಕರರ ಅಹವಾಲು ಆಲಿಸಿದರು.

Also read: ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್; ಸಮ್ಮಿಶ್ರ ಸರ್ಕಾರದಿಂದ ದಸರಾ ಹಬ್ಬದ ಉಡುಗೊರೆ ರೂಪದಲ್ಲಿ ತುಟ್ಟಿಭತ್ಯೆ ಹೆಚ್ಚಳ..!

ಸಂವಾದದಲ್ಲಿ ಮಾತನಾಡಿದ ಎಚ್ಎಎಲ್ ನಿವೃತ್ತ ನೌಕರ ಸಿರಾಜುದ್ದೀನ್, ಎಚ್ಎಎಲ್  ನಿರ್ಮಿಸಿದ ವಿಮಾನಗಳಿಂದ ಭಾರತ 2 ಯುದ್ಧಗಳನ್ನು ಗೆದ್ದಿದೆ. 75 ವರ್ಷಗಳ ಅನುಭವದ ಎಚ್ಎಎಲ್ ಅನ್ನು ಕೇಂದ್ರ ಸರ್ಕಾರ ರಫೇಲ್ ಡೀಲ್ ನಿಂದ ಕಿತ್ತೆಸೆದಿದೆ. ಕೇಂದ್ರ ಸರ್ಕಾರದ ಈ ನಡೆ ಆಶ್ಚರ್ಯ ತಂದಿಲ್ಲ, ಅಪಮಾನವಾಗಿದೆ. ರಫೇಲ್ ಯುದ್ಧ ವಿಮಾನ ತಯಾರಿಸುವ ಸಾಮರ್ಥ್ಯ ಎಚ್ಎಎಲ್ ಸಂಸ್ಥೆಗೆ ಇದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ನಾವು ಎಚ್ಎಎಲ್ ಆಡಳಿತ ಮಂಡಳಿ ವಿರುದ್ಧವಿಲ್ಲ, ಕೇಂದ್ರ ಸರ್ಕಾರದ ವಿರುದ್ಧ ಇದ್ದೇವೆ. ಎಚ್ಎಎಲ್ನಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಅನುಕೂಲಕರ ವಾತಾವರಣ ಇಲ್ಲ. ಭ್ರಷ್ಟಾಚಾರ, ಅಕ್ರಮದ ವಿರುದ್ಧ ಧ್ವನಿ ಎತ್ತಬೇಕಾಗಿದೆ ಎಂದು ನಿವೃತ್ತ ನೌಕರರಾದ ಮಹಾದೇವನ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.