ರಾಹುಲ್ ಗಾಂಧಿ ರಾಜೀನಾಮೆಯನ್ನು ತಿರಸ್ಕರಿಸಿದ CWC ಸಭೆ; ಕಾಂಗ್ರೆಸ್ ಗೆ ಹೊಸ ಅಧ್ಯಕ್ಷರನ್ನು ನೇಮಿಸುವಂತೆ ರಾಹುಲ್ ಒತ್ತಾಯ..

0
253

ಲೋಕಸಭಾ ಚುನಾವಣೆಯಲ್ಲಿ ಇಡಿ ದೇಶದಲ್ಲೇ ಕುಗ್ಗಿದ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ಳುವ ಭಯದಲ್ಲಿದ್ದು ಪಕ್ಷದ ಇಷ್ಟೊಂದು ಸೋಲಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯೇ ಕಾರಣ ಎನ್ನುವ ದೂರಿನಲ್ಲಿ ಅಧ್ಯಕ್ಷ ಸ್ಥಾನನದಿಂದ ಕೆಳಗಿಳಿಯಲು ನಿರ್ಧರಿಸಿರುವ ರಾಹುಲ್ ಗಾಂಧಿ, ತಮ್ಮ ಈ ನಿರ್ಧಾರವನ್ನು ಪಕ್ಷಕ್ಕೆ ತಿಳಿಸಿದ್ದಾರೆ. ಹೊಸ ಸಂಸದರ ಸಭೆ ನಡೆಸಲು ನಿರಾಕರಿಸಿರುವ ರಾಹುಲ್ ಗಾಂಧಿ, ಅವರ ಎಲ್ಲಾ ಸಭೆಗಳು ಹಾಗೂ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಎನ್ನುವುದು ಮೂಲಗಳಿಂದ ತಿಳಿದಿದ್ದು, ಜವಹರಲಾಲ್ ನೆಹರು ಅವರಿಗೆ ಪುಣ್ಯ ತಿಥಿ ಅಂಗವಾಗಿ ನಮನ ಸಲ್ಲಿಸಿದ್ದ ನಂತರ ಇಂದು ಬೆಳಗ್ಗೆ ರಾಹುಲ್ ಗಾಂಧಿ, ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ರಾಹುಲ್ ಗಾಂಧಿ ರಾಜೀನಾಮೆ?

ಚುನಾವಣೆಯಲ್ಲಿ ಬಾರಿ ಸೋಲುಕಂಡ ಕಾಂಗ್ರೆಸ್ ಪಕ್ಷ, ದೇಶದಲ್ಲಿ ಅವಮಾನಕ್ಕೆ ಗುರಿಯಾಗಿದ್ದು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ರಾಹುಲ್ ಗಾಂಧಿ, ನಿರಾಕರಿಸಿದ್ದು, ಆ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಈಗಾಗಲೇ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜೀನಾಮೆಗೆ ಮುಂದಾಗಿದ್ದರು. ಆದರೆ ಕಾರ್ಯಕಾರಿಣಿ ಸದಸ್ಯರು ರಾಹುಲ್ ಗಾಂಧಿ ರಾಜೀನಾಮೆಯನ್ನು ತಿರಸ್ಕರಿಸಿದರು. ಎಂದು CWC ಸಭೆಯ ನಂತರ ಕಾಂಗ್ರೆಸ್ ನಾಯಕರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಮಾತನಾಡಿ, ರಾಹಲ್ ಗಾಂಧಿ ರಾಜೀನಾಮೆ ಸಲ್ಲಿಸಿದ್ದು ಸತ್ಯ, ಆದರೆ ಅದನ್ನು ಸಿಡಬ್ಲ್ಯುಸಿ ಮುಖಂಡರು ತಿರಸ್ಕರಿಸಿದ್ದಾರೆ ಎಂದರು.

ಈಗ ಮತ್ತೆ ರಾಜಿನಾಮೆಗೆ ಮುಂದಾದ ರಾಹುಲ್ ಗಾಂಧಿ ಉನ್ನತ ಹುದ್ದೆಗೆ ಹೊಸ ವ್ಯಕ್ತಿಯನ್ನು ಆಯ್ಕೆ ಮಾಡಲು ಸಮಯ ನೀಡಿದ್ದಾರೆ ಎಂಬುದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ರಾಹುಲ್ ಗಾಂಧಿ ಮನಸನ್ನು ಬದಲಾಯಿಸಲು ಪ್ರಯತ್ನಿಸಿದ್ದ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಗೆ ವಿಶ್ರಾಂತಿ ನೀಡಿ ಪಕ್ಷದ ಅಧ್ಯಕ್ಷರನ್ನು ಬದಲಾಯಿಸಲು ನಿರ್ಧರಿಸಿದ್ದಾರೆ. ರಾಹುಲ್ ಗಾಂಧಿ ಮನಸ್ಸು ಬದಲಾವಣೆಗಾಗಿ ಪ್ರವಾಸ ಕೈಗೊಳ್ಳುವಂತೆ ಹಲವು ನಾಯಕರು ಹೇಳಿದ್ದಾರೆ.

ಮುಂದಿನ ಎಐಸಿಸಿ ಅಧ್ಯಕ್ಷ ಸ್ಥಾನ ಯಾರಿಗೆ?

ಪಕ್ಷದ ನಾಯಕರು ಎಷ್ಟೇ ಒತ್ತಡ ಹೇರುತ್ತಿದ್ದರೂ, ರಾಜೀನಾಮೆ ನೀಡುವುದು ಶತಸಿದ್ಧ ಎಂದು ಹಠ ಹಿಡಿದಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಪಕ್ಷದ ಅತ್ಯುನ್ನತ ಹುದ್ದೆಗೆ ಬೇರೆ ನಾಯಕರನ್ನು ಹುಡುಕಿಕೊಳ್ಳಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ರಾಹುಲ್ ಗಾಂಧಿ ಅವರು ಈ ನಿರ್ಧಾರಕ್ಕೆ ಕಟಿಬದ್ಧವಾದರೆ ಮತ್ತು ಪಕ್ಷದ ನಾಯಕರು ಕೂಡ ಮನಸ್ಸು ಬದಲಿಸಿದರೆ, ಗಾಂಧಿಯೇತರ ಕುಟುಂಬದಿಂದ ಪಕ್ಷದ ನಾಯಕನನ್ನು ಹುಡುಕುವುದು ಅನಿವಾರ್ಯವಾಗುತ್ತದೆ. ಏಕೆಂದರೆ, ಪ್ರಿಯಾಂಕಾ ವಾದ್ರಾ ಕೂಡ ಈ ಜವಾಬ್ದಾರಿ ಹೊರಲು ಸಿದ್ಧರಿಲ್ಲ. ಅಲ್ಲದೆ, ಈ ಪಟ್ಟಕ್ಕೆ ಅವರ ಹೆಸರು ಎಳೆದು ತರಬೇಡಿ ಎಂದು ರಾಹುಲ್ ಗಾಂಧಿ ಅವರೇ ತಾಕೀತು ಮಾಡಿದ್ದಾರೆ.

ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಹುಲ್ ಅವರು ರಾಜೀನಾಮೆಯ ಪ್ರಸ್ತಾವ ಮುಂದಿಟ್ಟರೂ, ಹಿರಿಯ ನಾಯಕರೆಲ್ಲ ಅವರೇ ಮುಂದುವರಿಯಬೇಕೆಂದು ಪಟ್ಟು ಹಿಡಿದಿದ್ದರು. ಕೆಲವರು ಆತ್ಮಹತ್ಯೆಯ ಬೆದರಿಕೆ ಕೂಡ ಒಡ್ಡಿದ್ದರು. ಆದರೆ, ರಾಹುಲ್ ತಾವೇ ಮುಂದುವರಿಯುವುದಾಗಿ ಸ್ಪಷ್ಟವಾಗಿ ಹೇಳಿರಲಿಲ್ಲ. ನಂತರ ಭಾನುವಾರ ಕೂಡ ರಾಹುಲ್ ಗಾಂಧಿ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಲೋಕಸಭೆಗೆ ಆಯ್ಕೆಯಾದ 52 ಸಂಸದರಲ್ಲಿ ಹಲವರು ರಾಹುಲ್ ಗಾಂಧಿ ಅವರ ಮೊಬೈಲಿಗೆ ಕರೆ ಮಾಡಿದರೂ ಅವರು ಯಾವುದೇ ಕರೆಗಳನ್ನು ಸ್ವೀಕರಿಸಿಲ್ಲ. ಲೋಕಸಭೆಯ ಸೋಲಿನ ನಂತರ ಮತ್ತು ಅನುಭವಿಸಿರುವ ಅವಮಾನದ ನಂತರ ಅವರ ಕೋಪ ಇನ್ನೂ ಶಮನವಾದಂತಿಲ್ಲ. ರಾಹುಲ್ ಗಾಂಧಿಯವರ ವರ್ತನೆ ನೋಡಿದರೆ ರಾಜೀನಾಮೆ ನೀಡುವುದು ಖಚಿತವಾಗಿದೆ.