ನಿಖಿಲ್ ಪರ ಪ್ರಚಾರ ಮಾಡಲು ರಾಹುಲ್ ಗಾಂಧಿ ಮಂಡ್ಯಕ್ಕೆ, ಇದ್ರಿಂದ ನಿಖಿಲ್ ಗೆಲ್ಲುವ ಚಾನ್ಸ್ ಇದ್ಯಾ??

0
548

ಮಂಡ್ಯದಲ್ಲಿ ಚುನಾವಣಾ ಪ್ರಚಾರ ಬರದಿಂದ ಸಾಗಿದೆ. ಇದರ ನಡುವೆ ಮೈತ್ರಿ ಕೂಸು ನಿಖಿಲ್ ಅವರನ್ನು ಗೆಲ್ಲಿಸಲು ಎಲ್ಲಿಲ್ಲದ ಕಸರತ್ತು ನಡೆಸಿರುವ ಜೆಡಿಎಸ್- ಕಾಂಗ್ರೆಸ್ ಪಕ್ಷಗಳು ಪ್ರತಿ ಸ್ಪರ್ಧಿಯಾದ ಸುಮಲತಾ ಅವರ ಸೋಲಿಸಲು ನಾನಾ ತರಹದ ಮಸಲತ್ತು ನಡೆಸಿವೆ. ಸುಮಲತಾ ಪರ ಪ್ರಚಾರಕ್ಕೆ ಇಳಿದ ಯಶ್ ಮತ್ತು ದರ್ಶನ್ ಜನರನ್ನು ತಮ್ಮತ ಸೆಳೆಯುತ್ತಿದ್ದಾರೆ. ಎನ್ನುವ ವಿಷಯವಾಗಿ ಸಿಎಂ ಈಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಕರೆಸುತ್ತಿದ್ದಾರೆ.

Also read: ಮಂಡ್ಯದ ರಾಜಕೀಯಕ್ಕೆ ಜುಟ್ಟಲು ಹಿಡಿದ ಐಟಿ ಅಧಿಕಾರಿಗಳು; ತಂದೆ -ಮಗ ಉಳಿದುಕೊಂಡಿದ್ದ ಹೋಟೆಲ್​​ ಮೇಲೆ ಐಟಿ ದಾಳಿ; ಬೇಸತ್ತ ಕುಮಾರಣ್ಣ ಮೋದಿಯ ಮೇಲೆ ಕಿಡಿ..

ಹೌದು ಮೈತ್ರಿ ಸರ್ಕಾರದ ಪ್ರಚಾರಕ್ಕೆ ಏಪ್ರಿಲ್ 13ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಅದರಂತೆ ಮಂಡ್ಯ ಮತ್ತು ಕೆ.ಆರ್.ನಗರದಲ್ಲಿ ರಾಹುಲ್ ಗಾಂಧಿ ರೋಡ್ ಶೋ ನಡೆಸಲಿದ್ದು, ಪ್ರಚಾರ ನಡೆಸಲಿದ್ದಾರೆ. ಈಗಾಗಲೇ ಕಲಬುರಗಿ ಮತ್ತು ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಅವರು ಲೋಕಸಭಾ ಚುನಾವಣೆಗೆ ಪ್ರಚಾರ ನಡೆಸಿದ್ದಾರೆ. ಚುನಾವಣೆ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಪ್ರಚಾರ ಕೈಗೊಳ್ಳಲಿದ್ದಾರೆ.

ಮಂಡ್ಯ ಚುನಾವಣೆ ರಾಷ್ಟ್ರಮಟ್ಟದಲ್ಲಿ ಚರ್ಚೆ;

ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿ ಬೆಂಬಲ ಘೋಷಣೆ ಮಾಡಿದ್ದು ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಂಡು ಬರುವುದು ಎಚ್.ಡಿ.ಕುಮಾರಸ್ವಾಮಿ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ಅವರು ಎದುರಾಳಿಗಳು. ಕಾಂಗ್ರೆಸ್‌ ಸಹ ನಿಖಿಲ್ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿದೆ. ಇದರಿಂದ ಬಾರಿ ಪೈಪೋಟಿ ನಡೆಯುತ್ತಿದ್ದು ಮಂಡ್ಯದ ಚುನಾವಣಾ ಕಣದ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಈಗಾಗಲೇ ಎರಡು ಪಕ್ಷಗಳ ಹವಾ ಜೋರಾಗಿದ್ದು ಸುಮಲತಾ ವಿರುದ್ದವಾಗಿ ಹಲವು ತಂತ್ರಗಳನ್ನು ನಡೆಸಿದ್ದಾರೆ.

Also read: ಮೈತ್ರಿಯಲ್ಲಿ ಮತ್ತೊಂದು ಆಘಾತ; ಜೆಡಿಎಸ್ ಸಭೆಯಲ್ಲಿ ಪ್ರಧಾನಿ ಮೋದಿಗೆ ಜೈಕಾರ ಕೂಗಿದ ದಳ ಕಾರ್ಯಕರ್ತರು..

ಹೌದು ಸುಮಲತಾ ಅವರನ್ನು ಸೋಲಿಸಲ್ಲು ಜೆಡಿಎಸ್ ದಿನಕ್ಕೊಂದು ತಂತ್ರವನ್ನು ನಡೆಸುತ್ತಿದ್ದು, ಈ ಮೊದಲು ಸುಮಲತಾ ಹೆಸರಿನ ನಾಲ್ಕು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ ಮೈತ್ರಿ ಸರ್ಕಾರ ಮತದಾರರಿಗೆ ಗೊಂದಲ ಸೃಷ್ಟಿ ಮಾಡಿತ್ತು. ಮತ್ತು ಸುಮಲತಾ ಅವರ ನಟನೆಯ ಜಾಹಿರಾತುಗಳನ್ನು ಕೂಡ ರದ್ದು ಪಡಿಸಲು ಚುನಾವಣಾ ಆಯೋಗಕ್ಕೆ ದೂರು ಕೂಡ ಸಲ್ಲಿಸಿದೆ. ಅಷ್ಟೇ ಅಲ್ಲದೆ ಈಗ ಮತ್ತೊಂದು ತಂತ್ರವನ್ನು ನಡೆಸಿರುವ ಜೆಡಿಎಸ್ ಚಿತ್ರನಟಿ ಸುಮಲತಾ ಅಂಬರೀಷ್ ಅವರಂತೆಯೇ ಇನ್ನೊಬ್ಬ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರೂ ಕನ್ನಡಕ, ಸೀರೆ, ಕುಪ್ಪಸ ಧರಿಸಿಕೊಂಡು ತೆಗೆಸಿಕೊಂಡ ಭಾವಚಿತ್ರವನ್ನು ಚುನಾವಣಾ ಆಯೋಗಕ್ಕೆ ನೀಡಿದ್ದಾರೆ.

Also read: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯ ಪ್ರಚಾರದ ವೇಳೆ ದರ್ಶನ್ ಕಾರಿಗೆ ಕಲ್ಲು ತೂರಾಟ ನಡೆಸಿದ್ದು ಎಷ್ಟು ಸರಿ??

ಅಂದ ಹಾಗೆ ಇವರು ಸುಮಲತಾ ಅಂಬರೀಷ್ ಅವರಂತೆಯೇ ಕನ್ನಡಕ ಹಾಕಿಕೊಂಡು ಸೀರೆ, ಕುಪ್ಪಸ ಧಿರಿಸು ಧರಿಸಿದ ಭಾವಚಿತ್ರವನ್ನು ಸುಮ್ಮನೆ ಆಯೋಗಕ್ಕೆ ನೀಡಿಲ್ಲ. ವಿದ್ಯುನ್ಮಾನ ಮತಯಂತ್ರಗಳಲ್ಲಿ ಪ್ರದರ್ಶನವಾಗುವ ಅಭ್ಯರ್ಥಿಗಳ ಭಾವಚಿತ್ರದ ಸ್ಥಳದಲ್ಲಿ ಇದೇ ಫೋಟೋವನ್ನು ಹಾಕಬೇಕೆಂದು ಕೋರಿದ್ದಾರೆ. ಅದಕ್ಕೆ ಜಿಲ್ಲಾ ಚುನಾವಣಾಕಾರಿಯೂ ಸ್ಪಂದಿಸಿ ಅದೇ ಫೋಟೋವನ್ನು ಹಾಕಲು ಸಮ್ಮಿತಿಸಿದ್ದಾರೆ. ಇದಕ್ಕೆ ಪೂರಕವಾಗಿ ಜಿಲ್ಲಾ ಚುನಾವಣಾಕಾರಿಯೂ ಆದ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಸಹಿ ಮಾಡಿ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಇದೇ ಭಾವಚಿತ್ರ ಪ್ರಕಟವಾಗಿದೆ. ಸುಮಲತಾ ಅಂಬರೀಷ್ ಅವರು 20ನೇ ಕ್ರಮಸಂಖ್ಯೆ ಹೊಂದಿದ್ದರೆ, ಅವರಂತೆಯೇ ವೇಷ ಮಾಡಿಕೊಂಡು ಭಾವಚಿತ್ರ ತೆಗೆಸಿರುವ ಸುಮಲತಾ ಅವರಿಗೆ 19ನೇ ಕ್ರಮಸಂಖ್ಯೆ ದೊರೆತಿದೆ.