ಜೈಷ್ ಉಗ್ರ ಸಂಘಟನೆಯ ಸಂಸ್ಥಾಪಕ ಮಸೂದ್ ಅಜರ್ ನನ್ನು “ಅಜರ್ ಮಸೂದ್ ಜೀ” ಎಂದ ರಾಹುಲ್ ಗಾಂಧಿ; ಮುಂದೇನಾಯಿತು ಈ ಸುದ್ದಿ ಓದಿ..

0
441

ಚುನಾವಣೆ ಪ್ರಚಾರದ ಭರದಲ್ಲಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳುವ ಹೇಳಿಕೆಗಳು ಬಾರಿ ಟೀಕೆಗೆ ಗುರಿಯಾಗುತ್ತಿವೆ. ಪಾಕಿಸ್ತಾನದ ಉಗ್ರರಿಗೂ ರಾಹುಲ್ ಅವರಿಗೂ ಅವಿನಾಭಾವ ಸಂಬಂಧ. ಉಗ್ರರ ಮೇಲೆ ರಾಹುಲ್-ಗೆ ಹೆಚ್ಚು ಲವ್ ಇದೆ ಎಂದು ದೇಶದಲ್ಲಿ ಹಲವು ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ವಾಗ್ದಾಳಿಗೆ ಕಾರಣವಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ರಾಹುಲ್‌ ಉಗ್ರರ ಪ್ರೇಮಿ’ ರಾಹುಲ್ ಲವ್ಸ್‌ ಟೆರರಿಸ್ಟ್ಸ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಟೀಕಿಸಿದ್ದಾರೆ.

ಏನಿದು ರಾಹುಲ್ ಹೇಳಿಕೆ?

ಪಕ್ಷದ ರಾರ‍ಯಲಿಯೊಂದರಲ್ಲಿ ರಾಹುಲ್‌, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌ ಅವರನ್ನು ಟೀಕಿಸುವ ಭರದಲ್ಲಿ ‘ಅಜರ್‌ ಮಸೂದ್‌ ಜೀ’ ಎಂದು ಕರೆದು ಎಡವಟ್ಟು ಮಾಡಿಕೊಂಡಿದ್ದರು. ಕಂದಹಾರ್‌ ವಿಮಾನ ಅಪಹರಣ ಪ್ರಸ್ತಾಪಿಸಿ, ”ಈ ಹಿಂದಿನ ಎನ್‌ಡಿಎ ಸರಕಾರದ ಅವಧಿಯಲ್ಲಿ ಅಜಿತ್‌ ಧೋವಲ್‌ ಅವರು ‘ಮಸೂದ್‌ ಅಜರ್‌ ಜೀ’ ಜತೆ ವಿಮಾನದಲ್ಲಿ ಅಫಘಾನಿಸ್ತಾನದ ರಾಜಧಾನಿ ಕಂದಹಾರ್‌ಗೆ ತೆರಳಿ ಆತನನ್ನು ಬಿಟ್ಟು ಬಂದರು,” ಎಂದು ಹೇಳಿದ್ದರು. ಇದಕ್ಕೆ ಜೈಷ್ ಉಗ್ರ ಸಂಘಟನೆಯ ಸಂಸ್ಥಾಪಕ ಮಸೂದ್ ಅಜರ್ ನನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ “ಅಜರ್ ಮಸೂದ್ ಜೀ” ಎಂದು ಸಂಬೋಧಿಸಿದರು ಎಂದು ಮಾಧ್ಯಮಗಳಲ್ಲಿ ಸುದ್ದಿ ವೈರಲ್ ಆಯಿತು.

ರಾಹುಲ್ -ಗೆ ಸ್ಮೃತಿ ಇರಾನಿ ಟ್ವೀಟ್‌;

ಆರು ಸೆಕೆಂಡ್‌ಗಳ ಒಂದು ವೀಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿರುವ ಕೇಂದ್ರ ಸಚಿವೆ, ‘ದಯವಿಟ್ಟು ಗಮನಿಸಿ: ಭಯೋತ್ಪಾದಕ ಮಸೂದ್ ಅಜರ್‌ ಬಗ್ಗೆ ರಾಹುಲ್‌ ಜಿ ಸಂಬೋಧನೆ ಹೇಗಿದೆ ನೋಡಿ- ರಾಹುಲ್‌ ಭಯೋತ್ಪಾದಕರ ಪ್ರೇಮಿ ಎಂಬುದಕ್ಕೆ ಇದೊಂದು ಪಕ್ಕಾ ನಿದರ್ಶನ’ ಎಂದು ಹೇಳಿದ. ಕೇಂದ್ರ ಸಚಿವೆ ಸ್ಮೃತಿ ಇರಾನಿ, “ಪಾಕಿಸ್ತಾನ ಮತ್ತು ರಾಹುಲ್‌ ಅವರ ಮಧ್ಯೆ ಒಂದು ಸಾಮ್ಯತೆ ಇದೆ. ಅದೇನೆಂದರೆ ಇಬ್ಬರು ಭಯೋತ್ಪಾದಕರನ್ನು ಪ್ರೀತಿಸುತ್ತಾರೆ,” ಎಂದು ಟ್ವೀಟ್‌ ಮಾಡಿ ಕಿಡಿಕಾರಿದ್ದಾರೆ. ಬಿಜೆಪಿಯ ಅನೇಕ ನಾಯಕರು ಇದು ಕಾಂಗ್ರೆಸ್‌ನ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಹಿಂದೆ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಜಾಗತಿಕ ಭಯೋತ್ಪಾದಕ ಒಸಾಮಾ ಬಿನ್‌ ಲಾಡೆನ್‌ ಮತ್ತು ಹಫೀಜ್‌ ಸಯೀದ್‌ನನ್ನು ‘ಒಸಾಮಾಜೀ’ ಮತ್ತು ‘ಹಫೀಜ್‌ ಸಯೀದ್‌ ಸಾಹೇಬ್‌’ ಎಂದು ಕರೆದು ವಿವಾದಕ್ಕೆ ಈಡಾಗಿದ್ದರು.

ಅಜಿತ್ ದೋವಲ್ ಟೀಕಿಸುವಲ್ಲಿ ರಾಹುಲ್ ಎಡವಟ್ಟು;

1999ರಲ್ಲಿ ಜೈಷೆ ಮೊಹಮ್ಮದ್ ಮುಖ್ಯಸ್ಥ ಮಸೂದ್‌ ಅಜರ್‌ನ ಬಿಡುಗಡೆಗೆ ಬಿಜೆಪಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕಾರಣ ಎಂದು ಆರೋಪಿಸುವ ಭರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ‘ಮಸೂದ್ ಅಜರ್‌ ಜಿ’ ಎಂದು ಗೌರವದ ಸಂಬೋಧನೆಯಿಂದ ಕರೆದಿದ್ದರು. ಆ ಘಟನೆಯ ಮೂಲ ವೀಡಿಯೋವನ್ನು ಕಾಂಗ್ರೆಸ್ ಶೇರ್ ಮಾಡಿಕೊಂಡಿತ್ತು. ಅದರಿಂದಲೇ ಕತ್ತರಿಸಿದ ಭಾಗವೊಂದು ಈಗ ವೈರಲ್ ಆಗಿದೆ. ಇದಕ್ಕೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಕೂಡ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿ. ‘ಪರವಾಗಿಲ್ಲ ರಾಹುಲ್‌ ಗಾಂಧಿ ಜಿ! ನೀವೂ ಸಹ ದಿಗ್ವಿಜಯ್‌ ಜಿ ಸಾಲಿಗೆ ಸೇರಿದಿರಿ. ಅವರು ಒಸಾಮಾ ಜಿ ಮತ್ತು ಹಫೀಜ್ ಸಯೀದ್ ಸಾಹೇಬ್ ಎಂದು ಕರೆದಿದ್ದರು. ಈಗ ನೀವು ‘ಮಸೂದ್ ಅಜರ್‌ ಜಿ’ ಎನ್ನುತ್ತಿದ್ದೀರಿ. ಕಾಂಗ್ರೆಸ್ ಪಕ್ಷದಲ್ಲಿ ಏನಾಗ್ತಿದೆ?’ ಎಂದು ಪ್ರಸಾದ್ ವ್ಯಂಗ್ಯವಾಡಿದ್ದಾರೆ.

Also read: ನರೇಂದ್ರ ಮೋದಿಗೆ ಮತ್ತೆ ಗೆಲುವಿನ ಸುವರ್ಣ ಕಿರೀಟ; ಭವಿಷ್ಯ ನುಡಿದ ಕೊಡಿಹಳ್ಳಿ ಮಠದ ಶ್ರೀಗಳು..