ಇಸ್ರೇಲ್ ಮಾದರಿಯಂತೆ ಕೃಷಿಯಲ್ಲಿ ಕೋಳಿ ಮೊಟ್ಟೆ, ಅಡುಗೆ ಎಣ್ಣೆ ಬಳಸಿ ಲಕ್ಷಾಂತರ ರೂ. ಲಾಭ ಗಳಿಸುವಲ್ಲಿ ಯಶಸ್ವಿಯಾದ ರಾಯಚೂರಿನ ರೈತರು.!

0
249

ಇತ್ತೀಚಿನ ದಿನಗಳಲ್ಲಿ ರೈತರ ಬೆಳೆಗೆ ಬರುತ್ತಿರುವ ರೋಗಕ್ಕೆ ಮತ್ತು ಕೀಟಗಳಿಗೆ ಅಪಾರ ಪ್ರಮಾಣದಲ್ಲಿ ಕೀಟನಾಶಕಗಳು ಬರುತ್ತಿವೆ, ಆದರೆ ಈಗೀಗ ಎಷ್ಟೇ ಹಣ ಕೊಟ್ಟು ಯಾವುದೇ ಔಷಧಿಗಳನ್ನು ಸಿಂಪಡಿಸಿದರು ಸರಿಯಾಗಿ ಬೆಳೆ ಬರುತ್ತಿಲ್ಲ, ಒಂದು ರೋಗಕ್ಕೆ ಒಂದು ಕೀಟನಾಶಕ ಬಳಸಿದರು ಮತ್ತೊಂದು ರೋಗ ಅಂಟಿಕೊಂಡು ಸರಿಯಾಗಿ ಬೆಳೆ ಬರದೆ ರೈತರು ಸಾಲದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಅದಕ್ಕಾಗಿ ಈಗ ಪರಿಹಾರ ಕಂಡು ಕೊಂಡಿದ್ದು, ಅಡುಗೆ ಎಣ್ಣೆ, ಕೋಳಿ ಮೊಟ್ಟೆಯಿಂದ ಲಕ್ಷಾಂತರ ರೂ. ಬೆಳೆ ಬೆಳೆಯುವಲ್ಲಿ ರಾಯಚೂರು ಜಿಲ್ಲೆಯ ರೈತರು ಯಶಸ್ವಿಯಾಗಿದ್ದಾರೆ.

Also read: ಇಸ್ರೇಲ್ ಮಾದರಿಯ ಕೃಷಿ ಅಳವಡಿಸಿಕೊಂಡು ಯಶಸ್ಸು ಕಂಡಿರುವ ಇವರು ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಿರುವ ಎಲ್ಲಾ ಯುವಕರಿಗೂ ದೊಡ್ಡ ಮಾದರಿ!!

ಹೌದು ರೈತರ ಮುಖ್ಯ ಬೆಳೆಗಳಾದ ಹತ್ತಿ, ಭತ್ತ, ಮೆಣಸಿನಕಾಯಿ ಬೆಳೆ ರೈತರಿಗೆ ಸರಿಯಾದ ಆದಾಯ ನೀಡುವ ಬೆಳೆಗಳಾಗಿದ್ದು, ಇವುಗಳಿಗೆ ಅಂಟಿಕೊಳ್ಳುವ ರೋಗಕ್ಕೆ ಕೆಲ ಪ್ರಗತಿಪರ ರೈತರು 2 ಸಾವಿರ ಎಕರೆಯಲ್ಲಿ ಹೊಸ ಪ್ರಯೋಗ ಮಾಡಿ ಯಶಸ್ವಿಯಾಗಿದ್ದು ಕೃಷಿಯಲ್ಲಿ ಲಾಭ ಗಳಿಸುತ್ತಿದ್ದಾರೆ. ಬಿಸಿಲನಾಡು ರಾಯಚೂರು ಜಿಲ್ಲೆಯ ರೈತರ ಈ ಹೊಸ ಟೆಕ್ನಿಕ್ ಯಶಸ್ವಿಯಾಗಿದ್ದು, ಬದುಕು ಬಂಗಾರವಾಗುತ್ತಿದೆ ಎಂದು ಸಂತಸದಲ್ಲಿದ್ದಾರೆ. ಏಕೆಂದರೆ ರಸಗೊಬ್ಬರ, ಕ್ರಿಮಿನಾಶಕ, ಕೂಲಿಯಾಳುಗಳು ಸೇರಿ ಎಕರೆಗೆ 40 ರಿಂದ 50 ಸಾವಿರ ಖರ್ಚುಮಾಡಿ ಬೆಳೆ ಬೆಳೆಯುತ್ತಿದ್ದ ರೈತರು ತುಂಬಾ ನಷ್ಟ ಅನುಭವಿಸುತ್ತಿದ್ದರು.

Also read: ಇಲ್ಲೊಬ್ಬ ಮಾದರಿ ಟೆಕ್ಕಿ; ಕೃಷಿಯಲ್ಲೇ ಸಾಧನೆ ಮಾಡುತ್ತಿರುವ ಇವರ ಆದಾಯ ಕೇಳಿದ್ರೆ, ಕೃಷಿ ಬಿಟ್ಟು ನಗರಕ್ಕೆ ಬರುವರಿಗೆ ಶಾಕ್ ಆಗುತ್ತೆ..

ಇದೀಗ ಕೃಷಿಯಲ್ಲಿ ಅಡುಗೆಎಣ್ಣೆ ಬಳಸುವ ಮೂಲಕ ಎಕರೆಗೆ ಕೇವಲ 5 ರಿಂದ 8 ಸಾವಿರ ರೂ. ಖರ್ಚು ಬರುತ್ತಿದೆ. ಇದರಿಂದಾಗಿ ಹೆಚ್ಚು ಲಾಭ ಗಳಿಸುತ್ತಿದ್ದಾರೆ. ಅಡುಗೆ ಎಣ್ಣೆಯನ್ನು ಕ್ರಿಮಿನಾಶಕವಾಗಿ, ಪೋಷಾಕಾಂಶ ನೀಡುವ ಔಷಧಿಯಾಗಿಯೂ ಬಳಕೆ ಮಾಡಬಹುದು ಎಂಬದನ್ನು ಇಲ್ಲಿನ ರೈತರು ಕಂಡುಕೊಂಡಿದ್ದು ಇದು ಇಸ್ರೇಲ್ ಮಾದರಿ ಪ್ರಯೋಗ ಎಂದು ಹೇಳಿದ್ದಾರೆ.

ಎಲ್ಲಿ ನಡೆದಿದೆ ಈ ಪ್ರಯೋಗ?

Also read: ದೊಡ್ಡ ಕಂಪನಿ ತೊರೆದು ಕೈತುಂಬ ಸಂಬಳವನ್ನು ಲೆಕ್ಕಿಸದೆ, ಸ್ವಂತ ಊರಲ್ಲೇ ಕೃಷಿ ಮಾಡುತ್ತಿರುವ ಟೆಕ್ಕಿ ಸಹೋದರಿಯರ ನಿರ್ಧಾರ ವಲಸೆ ಹೋಗುವ ಯುವಕರಿಗೆ ಮಾದರಿ ಅಲ್ವ??

ಅಡುಗೆ ಎಣ್ಣೆಗಳಾದ ಪಾಮ್, ಶೇಂಗಾ, ಕೊಬ್ಬರಿ ಹಾಗೂ ಹತ್ತಿ ಕಾಳು ಎಣ್ಣೆ, ಸೋಯಾಬಿನ್ ಎಣ್ಣೆ ಹೀಗೆ ಹಲವಾರು ಎಣ್ಣೆಗಳಿಗೆ ಕೋಳಿ ಮೊಟ್ಟೆ ಮಿಶ್ರಣ ಮಾಡಿ ವಾರಕ್ಕೊಮ್ಮೆ ಸಿಂಪಡಣೆ ಮಾಡುವುದರಿಂದ ಬೆಳೆಗಳಿಗೆ ಮುಖ್ಯವಾಗಿ ಮುರುಟು ರೋಗ, ಜೀಗಿ ರೋಗ ಸೇರಿದಂತೆ ವಿವಿಧ ರೋಗಗಳನ್ನು ನಿಯಂತ್ರಣ ಮಾಡಬಹುದು. ಅಲ್ಲದೆ ಬೆಳೆಗಳಿಗೆ ಅಧಿಕ ಪೋಷಕಾಂಶ ನೀಡಿ ದೇವದುರ್ಗಾ ತಾಲೂಕಿನ ಗಬ್ಬೂರು ಸೇರಿದಂತೆ ಸುತ್ತಲಿನ ಸುಮಾರು 2 ಸಾವಿರ ಎಕರೆ ಪ್ರದೇಶದಲ್ಲಿನ ರೈತರು ಮಾಡಿದ ಪ್ರಯೋಗ ಯಶಸ್ವಿಯಾಗಿದ್ದಾರೆ. ಇದು ರಾಸಾಯನಿಕ ಗೊಬ್ಬರ ಹಾಗೂ ಕೀಟ ನಾಶಕ ಬಳಸಿ ಕೃಷಿ ಮಾಡುವ ಪದ್ಧತಿಯ ಖರ್ಚಿಗಿಂತ ಎಣ್ಣೆ ಬಳಸಿ ಕೃಷಿ ಮಾಡುವುದರಿಂದ ಕೇವಲ ಶೇ.10ರಷ್ಟು ಹಣವನ್ನು ಖರ್ಚು ಮಾಡುತ್ತಿದ್ದಾರೆ.

Also read: ಡೈರಿ ಕೃಷಿಯಿಂದ ಎರಡೇ ವರ್ಷದಲ್ಲಿ 2 ಕೋಟಿ ಹಣ ಸಂಪಾದಿಸಿ ಯುವಪಿಳಿಗೆಗೆ ಸ್ಪೂರ್ತಿ ತುಂಬುತ್ತಿರುವ ಏರ್ ಇಂಡಿಯಾ ನೌಕರ.!

ಈ ಹಿಂದೆ ಇಸ್ರೇಲಿನ ಕೃಷಿ ವಿಜ್ಞಾನಿಯೊಬ್ಬರು ಪ್ರಯೋಗ ಮಾಡಿ ಯಶಸ್ವಿಯಾಗಿದ್ದರಂತೆ. ತೆಲಂಗಾಣದಲ್ಲೂ ರೈತರು ಈ ಪ್ರಯೋಗದಿಂದ ಯಶಸ್ಸು ಕಂಡಿದ್ದು ಕಳೆದ ಕೆಲ ವರ್ಷಗಳಿಂದ ಇಲ್ಲಿನ ರೈತರು ಈ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ರೈತರು ಸಹ ಈ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಸಾಲದ ಹೊರೆಯನ್ನು ಇಳಿಸಿಕೊಳ್ಳುತ್ತಿದ್ದಾರೆ. ಇತಂಹ ತೊಂದರೆಯಲ್ಲಿ ಸಿಲುಕಿ ಸಂಕಷ್ಟದಲ್ಲಿರುವ ರಾಜ್ಯದ ರೈತರು ಈ ಮಾದರಿಯನ್ನು ಮಾಡಿ ಅಧಿಕ ಲಾಭ ಪಡೆಯಬಹುದಾಗಿದೆ.

ಮಾಹಿತಿ ಕೃಪೆ: publictv.in