ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 25 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ರೈಲ್ವೇ ಇಲಾಖೆ ಹಸಿರು ನಿಶಾನೆ ತೋರಿಸಿದೆ..!!

1
1256

ಭಾರತೀಯ ರೈಲ್ವೆ ಇಲಾಖೆ ಭಾರಿ ನೇಮಕಾತಿಗೆ ಮುಂದಾಗಿದ್ದು, ಈ ವರ್ಷ ಸುಮಾರು 25 ಸಾವಿರ ನೌಕರರನ್ನು ನೇಮಕಾತಿ ಮಾಡಿಕೊಳ್ಳುವುದಾಗಿ ತಿಳಿಸಿದೆ.

ದೇಶದೆಲ್ಲೆಡೆ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಲೋಕೋ ಪೈಲೆಟ್, ಟೆಕ್ನೀಷಿಯನ್ ಹುದ್ದೆಗಳು ರೈಲ್ವೆ ಚಾಲಕರು, ಗಾರ್ಡ್‌ಗಳು, ಕಿರಿಯ ಲೆಕ್ಕಪತ್ರ ಸಹಾಯಕರು, ಸಹಾಯಕ ನಿಲ್ದಾಣಾಧಿಕಾರಿಗಳು, ಕಾದಿರಿಸುವಿಕೆ ಮತ್ತು ವಿಚಾರಣೆ ಸಹಾಯಕರು ಮುಂತಾದ ಹುದ್ದೆಗಳಿಗೆ ಈ ವರ್ಷವೇ ನೇಮಕಾತಿ ನಡೆಯಲಿದೆ.

ಒಟ್ಟು 23,801 ಹುದ್ದೆಗಳ ಪೈಕಿ ದಕ್ಷಿಣ ಮಧ್ಯ ರೈಲ್ವೇ ಡಿವಿಜನ್ ವ್ಯಾಪ್ತಿಯಲ್ಲಿ 3,210 ಹುದ್ದೆಗಳು ಖಾಲಿಯಿದ್ದು, 2017 ನವಂಬರ್ 15 ರಿಂದ ಡಿಸೆಂಬರ್ 1 ರ ಒಳಗೆ ಅಭ್ಯರ್ಥಿಗಳಿಂದ ಆನ್ ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. 2018 ಜನವರಿ ಯಿಂದ ಮಾರ್ಚ್ತಿಂಗಳ ನಡುವೆ ಲಿಖಿತ ಪರೀಕ್ಷೆಗಳು ನಡೆಯಲಿವೆ. ಈ ಹುದ್ದೆಗಳಿಗೆ ಐಟಿಐ, ಡಿಪ್ಲೊಮ ಪೂರ್ತಿ ಮಾಡಿರುವ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ ಎಂದು ರೈಲ್ವೇ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಖಾಲಿ ಇರುವ ಹುದ್ದೆಗಳ ವಿವರಗಳು:

ಸಿಕಿಂದ್ರಾಬಾದ್ – 3,210,

ಅಹ್ಮದಾಬಾದ್ – 455,

ಅಜ್ಮೀರ್ – 645,

ಅಲಹಾಬಾದ್ – 1,321,

ಬೆಂಗಳೂರು – 890,

ಬೋಪಾಲ್ – 625,

ಭುವನೇಶ್ವರ್ – 745,

ಬಿಲಾಸ್ ಪೂರ್ – 1,341,

ಚಂದೀಗಡ್ – 961,

ಗೋರಖ್ ಪೂರ್ – 95,

ಗುವಾಹತಿ – 445,

ಚೆನ್ನೈ -1,423,

ಜಮ್ಮೂ, ಶ್ರೀನಗರ್ – 812,

ಕೊಲ್ಕತ್ತಾ -1,786,

ಮಾಲ್ದಾ – 178,

ಮುಂಬೈ – 3,624,

ಮುಜಫರ್ ಪೂರ್ – 878,

ಪಾಟ್ನಾ – 1,371,

ರಾಂಚೀ – 2,210,

ಸಿಲಿಗುರಿ – 445,

ತಿರುವನಂತಪುರಂ – 341.

ಹೆಚ್ಚಿನ ಮಾಹಿತಿಯನ್ನು ಪಡೆಯಲು​ www.sr.indianrailways.gov.in ಬಳಸಿ.