ಇನ್ಮುಂದೆ ರೈಲು ನಿಲ್ದಾಣಗಳಲ್ಲಿ ಏರ್ ಪೋರ್ಟ್ ಗಳ ಮಾದರಿಯಲ್ಲಿ ತಪಾಸಣೆ; ಪ್ರಯಾಣಿಕರು ರೈಲು ಹೊರಡುವ 20 ನಿಮಿಷ ಮೊದಲು ನಿಲ್ದಾಣ ತಲುಪಿ..

0
360

ರೈಲು ಪ್ರಯಾಣಿಕರೆ ನೀವು ಇನ್ಮುಂದೆ ರೈಲಿನಲ್ಲಿ ಪ್ರಯಾಣಿಸುವಾಗ ಈ ಹಿಂದೆ ಇರುವ ನಿಯಮದ ರೀತಿಯಲ್ಲಿ ನಿಲ್ದಾಣಕ್ಕೆ ಬರುವ ಹಾಗಿಲ್ಲ, ವಿಮಾನ ನಿಲ್ದಾಣ ರೀತಿಯಲ್ಲಿ ರೈಲ್ವೆ ಇಲಾಖೆಯಲ್ಲಿ ಹೊಸ ನಿಯಮ ಜಾರಿಯಾಗಿದ್ದು. ರೈಲು ಹೊರಡುವ 20.30 ನಿಮಿಷಗಳ ಮೊದಲೇ ಬರಬೇಕು ಏಕೆಂದರೆ ಏರ್ ಪೋರ್ಟ್ ಗಳ ಮಾದರಿಯಲ್ಲಿ ರೈಲು ಭದ್ರತಾ ತಪಾಸಣೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

Also read: ಮೋದಿ ತರುತ್ತಿರುವ ದೇಶದ ಅತಿ ವೇಗದ ಟ್ರೈನ್ ಬಗ್ಗೆ ತಿಳಿದುಕೊಳ್ಳಿ, ನಮ್ಮ ದೇಶಾನೂ ಪಾಶ್ಚಾತ್ಯ ದೇಶಗಳಿಗಿಂತ ಕಮ್ಮಿಯಿಲ್ಲ ಅನ್ಸೋಕ್ಕೆ ಶುರು ಆಗುತ್ತೆ!!

ಹೌದು ವಿಮಾನ ನಿಲ್ದಾಣಗಳಲ್ಲಿರುವ ಭದ್ರತಾ ವ್ಯವಸ್ಥೆಯನ್ನು ದೇಶದ ರೈಲು ನಿಲ್ದಾಣಗಳಲ್ಲೂ ಜಾರಿಗೆ ತರಲು ರೈಲ್ವೆ ಇಲಾಖೆ ಉದ್ದೇಶಿಸಿದೆ. ಇದರಿಂದಾಗಿ ಇನ್ನು ಮುಂದೆ ರೈಲು ಯಾನ ಕೈಗೊಳ್ಳುವ ಪ್ರಯಾಣಿಕರು ರೈಲು ಹೊರಡುವ 15 ರಿಂದ 20 ನಿಮಿಷ ಮೊದಲೇ ನಿಲ್ದಾಣದಲ್ಲಿ ರಬೇಕು. ಭದ್ರತಾ ತಪಾಸಣೆಗೆ ಒಳಗಾಗಬೇಕು. ಹಾಗೆಯೇ ಅತ್ಯುತ್ತಮ ತಂತ್ರಜ್ಞಾನದ ನೆರವಿನಿಂದ ಭದ್ರತೆಗೆ ಯೋಜನೆ ರೂಪಿಸಲಾಗುತ್ತಿದ್ದು, ಈ ತಿಂಗಳು ಕುಂಭ ಮೇಳ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಉತ್ತರ ಪ್ರದೇಶದ ಅಲಹಾಬಾದ್ ರೈಲು ನಿಲ್ದಾಣದಲ್ಲಿ ಉನ್ನತ ಮಟ್ಟದ ಭದ್ರತಾ ವ್ಯವಸ್ಥೆಯನ್ನು ಈಗಾಗಲೇ ಜಾರಿಗೊಳಿಸಲಾಗಿದೆ.

ಮುಂದಿನ ದಿನಗಳಲ್ಲಿ ಹಂತಹಂತವಾಗಿ ಈ ವ್ಯವಸ್ಥೆ ದೇಶದ ರೈಲು ನಿಲ್ದಾಣಗಳಲ್ಲಿ ಜಾರಿಗೆ ಬರಲಿದೆ. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಕರ್ನಾಟಕದ ಹುಬ್ಬಳ್ಳಿ ಹಾಗೂ ಮಾಸಾಂತ್ಯಕ್ಕೆ ಕುಂಭ ಮೇಳ ನಡೆಯಲಿರುವ ಉತ್ತರಪ್ರದೇಶದ ಅಲಹಾಬಾದ್ ರೈಲು ನಿಲ್ದಾಣಗಳಲ್ಲಿ ಈ ಅತ್ಯಾಧುನಿಕ ತಂತ್ರಜ್ಞಾನದ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ. ನಂತರ ಇನ್ನೂ 202 ರೈಲು ನಿಲ್ದಾಣಗಳಲ್ಲಿ ಜಾರಿಗೆ ನೀಲನಕ್ಷೆ ಸಿದ್ಧವಾಗಿದೆ ಎಂದು ರೈಲ್ವೆ ರಕ್ಷಣಾ ದಳ(ಆರ್‌ಪಿಎಫ್)ದ ನಿರ್ದೇಶಕ ಜನರಲ್ ಅರುಣ್ ಕುಮಾರ್ ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

Also read: SSLC ಪಾಸಾದ ಅಭ್ಯರ್ಥಿಗಳಿಗೆ ಇಂಡಿಯನ್ ರೈಲ್ವೆ ಇಲಾಖೆಯಲ್ಲಿ ಕಾನ್ಸ್​ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹೇಗಿರುತ್ತೆ ತಪಾಸಣೆ?

ಈ ಹೊಸ ನಿಯಮದಂತೆ ರೈಲು ಹೊರಡುವ ಮುನ್ನ ನಿಲ್ದಾಣದ ಪ್ರವೇಶ ದಾರಿಗಳನ್ನು ಮುಚ್ಚಲಾಗುತ್ತದೆ. ರೈಲು ನಿಲ್ದಾಣದಲ್ಲಿ ಎಷ್ಟು ದಾರಿಗಳಿವೆ, ಎಷ್ಟನ್ನು ಮುಚ್ಚಬಹುದು ಎಂಬುದನ್ನು ಮೊದಲು ಗುರುತಿಸಲಾಗುತ್ತದೆ. ಶಾಶ್ವತ ಗೋಡೆ, ಆರ್‌ಪಿಎಫ್ ಸಿಬ್ಬಂದಿ ಹಾಗೂ ತಾತ್ಕಾಲಿಕ ಗೇಟುಗಳನ್ನು ಬಳಸಿ ಅವನ್ನು ಬಂದ್ ಮಾಡಲಾಗುತ್ತದೆ. ಪ್ರತಿಯೊಂದು ಪ್ರವೇಶ ದ್ವಾರದಲ್ಲಿ ಸಿಬ್ಬಂದಿ ತಪಾಸಣೆ ಮಾಡುತ್ತಾರೆ. ವಿಮಾನ ನಿಲ್ದಾಣ ಗಳಲ್ಲಾದರೇ ಪ್ರಯಾಣಿಕರು ವಿಮಾನ ಹೊರಡುವ ಗಂಟೆಗಳ ಮೊದಲೇ ಬರಬೇಕು. ಆದರೆ ರೈಲು ನಿಲ್ದಾಣ ಗಳಲ್ಲಿ 15 ರಿಂದ 20 ನಿಮಿಷ ಮೊದಲು ಆಗಮಿಸಬೇಕಾಗುತ್ತದೆ.

Also read: ಸಮಯ ಪ್ರಜ್ಞೆ ಇಲ್ಲದ ರೈಲ್ವೆ ಇಲಾಖೆ, ರೈಲ್ವೆಯಲ್ಲೇ ಶಾಪಿಂಗ್ ಮಾಲ್ ತೆರೆಯುತ್ತಿದೆ; ಇದು ಕೇಂದ್ರ ಸರ್ಕಾರದ ದಡ್ಡತನಲ್ಲವೇ..?

ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ. ಆದರೆ, ಭದ್ರತಾ ಸಿಬ್ಬಂದಿ ಸಂಖ್ಯೆಯಲ್ಲಿ ಹೆಚ್ಚಳ ಮಾಡುತ್ತಿಲ್ಲ. ‘ನಾವು ತಂತ್ರಜ್ಞಾನಗಳನ್ನು ಹೆಚ್ಚೆಚ್ಚು ಬಳಕೆ ಮಾಡಿದಷ್ಟು, ಮಾನವ ಸಂಪನ್ಮೂಲಗಳ ಅವಶ್ಯಕತೆ ತಪ್ಪುತ್ತದೆ’ ಎಂದು ಕುಮಾರ್ ತಿಳಿಸಿದ್ದಾರೆ. ಈ ನಿಲ್ದಾಣಗಳು ಏಕೀಕೃತ ಭದ್ರತಾ ವ್ಯವಸ್ಥೆಯ (ಐಎಸ್‌ಎಸ್) ಸಿಸಿಟಿವಿ, ಪ್ರವೇಶ ನಿಯಂತ್ರಣ, ವೈಯಕ್ತಿಕ ಮತ್ತು ಬ್ಯಾಗೇಜ್ ಸ್ಕ್ರೀನಿಂಗ್ ವ್ಯವಸ್ಥೆ ಸೇರಿದಂತೆ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಐಎಸ್‌ಎಸ್ ಯೋಜನೆಯ ನಿರೀಕ್ಷಿತ ವೆಚ್ಚ 385.06 ಕೋಟಿ ರೂಪಾಯಿ ಎಂದು ಅಂದಾಜು ಲೆಕ್ಕವನ್ನು ತಿಳಿಸಲಾಗಿದೆ.