ಇಂದಿನ ರೈಲುಗಳಲ್ಲಿ ಸ್ವಚ್ಛತೆಯೂ ಇಲ್ಲ ಪ್ರಾಮಾಣಿಕತೆಯೂ ಇಲ್ಲ!!

0
688
ಹಳಿ ತಪ್ಪುತ್ತಿದೆ ರೈಲ್ವೆಯಲ್ಲಿ ಸ್ವಚ್ಛತೆ, ಪ್ರಾಮಾಣಿಕತೆ 
ವಿಶ್ವ ಕಂಡ ಶ್ರೇಷ್ಠ ನಾಯಕರಲ್ಲಿ ಗಾಂಧಿಜಿ ನಿಲ್ಲುತ್ತಾರೆ. ಅವರ ನೆನಪಿಗಾಗಿ ಕೇಂದ್ರ ಸರ್ಕಾರ ಸ್ವಚ್ಛ ಭಾರತ ಅಭಿಯಾನವನ್ನು ಆರಂಭಿಸಿದೆ. ಅಲ್ಲದೆ ೨೦೧೯ರ ಒಳಗೆ ಸ್ವಚ್ಛತೆಯ ಮಹತ್ವವನ್ನು ಎಲ್ಲರಲ್ಲೂ ಮೂಡಿಸುವ ಇರಾದೆ ಹೊಂದಿದೆ. ದೇಶದ ಪ್ರಧಾನಿ ಮೋದಿಯವರು ಸಹ ಈ ನಿಟ್ಟಿನಲ್ಲಿ ಕೈ ಜೋಡಿಸಿದ್ದಾರೆ.
ಆದರೆ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ರೈಲ್ವೆಯಲ್ಲಿ ಸ್ವಚ್ಛತೆ ಮರೀಚಿಕೆ. ಈ ಬಗ್ಗೆ ಓರ್ವ ಪ್ರಯಾಣಿಕರು ತಮ್ಮ ಅನಿಸಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿದ್ದಾರೆ. ಹಾಗಿದ್ದರೆ ರೈಲ್ವೆಯಲ್ಲಿ ಏನು ನಡಿತಾ ಇದೆ ಎಂಬುದನ್ನು ಅವರಿಂದ ತಿಳಿದುಕೊಳ್ಳಿ.
ನನ್ನ ಹೆಸರಿನ ಪ್ರಸ್ತಾಪವೇ ಬೇಡ. ನಾನು ಜ.೩೦ರಂದು ಗೋವಾದಿಂದ ಮುಂಬೈಗೆ ರೈಲಿನ ಪ್ರಯಾಣಿಸಲು ಮುಂದಾದೆ. ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಲು ಮಧ್ಯಮ ವರ್ಗದ ಅಚ್ಚು ಮೆಚ್ಚಿನ ಸಾರಿಗೆ. ರೈಲ್ವು ನಿಲ್ದಾಣವನ್ನು ಬಿಡುವ ಮುನ್ನ ಸ್ನೇಹಿತರು ತಿಂಡಿಯನ್ನು ತಂದಿದ್ದರು. ನಾವೇಲ್ಲಾ ತಿಂಡಿಗಳನ್ನು ತಿಂದು ಎಲ್ಲಿ ಎಸೆಯಬೇಕು ಎಂದು ತೋಚದೆ, ಅಲ್ಲಿದ್ದ ಸಿಬ್ಬಂದಿಯನ್ನು ಕೇಳಿದ್ವಿ. ಆತ ಸರ್… ನಿಮ್ಮ ಪಕ್ಕದ ವಿಂಡೋನಲ್ಲಿ (ಕಿಟಕಿ) ಎಸಿರೀ ಎಂದು ಹೇಳಿದ. ನಾವು ರೈಲಿನಲ್ಲಿ ಎಲ್ಲ ಕಡೆ ನೋಡಿದರೂ ಒಂದು ಕಸದ ತೊಟ್ಟಿ ಕಾಣಲಿಲ್ಲ. ನಮ್ಮ ಪಕ್ಕದ ಪ್ರಯಾಣಿಕರೆಲ್ಲಾ ಇದೇ ಮಾರ್ಗವನ್ನು ಅನುಸರಿಸಿದರು. ಆದರೆ ನಮಗೆ ಮನಸ್ಸು ಬಾರದೆ ಅವುಗಳನ್ನು ನಮ್ಮ ಬಳಿಯೇ ಇಟ್ಟುಕೊಂಡೆವು.
ಊಟದ ಸಮಯವಾಯಿತು. ರೈಲ್ವೆಯಲ್ಲಿ ಸಿಗುವ ಊಟಕ್ಕೆ ಆರ್ಡರ್ ಮಾಡಲು ಮುಂದಾದೆವು. ಆತನು ಸಹ ನಮ್ಮ ಕೈಯಲ್ಲಿ ಮೇನ್ಯೂ ಕಾರ್ಡ್ ನೀಡಿ ಏನು ಬೇಕು ಎಂದ. ನಾವು ಸಸ್ಯಹಾರಿ ಊಟ ತಿಳಿಸಿದೆವು. ಪಟ್ಟಿಯಲ್ಲಿ ಊಟಕ್ಕೆ ೫೦ ರೂ ಇದ್ರೆ, ಆತ ನಮ್ಮ ಬಳಿ ೧೫೦ ಪಡೆದ. ಏಕಪ್ಪ ಹೀಗೆ ಎಂದು ಕೇಳಿದಕ್ಕೆ ಆತ ಇದು ಹಳೆಯ ಮೆನ್ಯೂ ಕಾರ್ಡ್ ಹೊಸ ಕಾರ್ಡ್ ಹುಡಕಲ್ ಟೈಮ್ ಆಗುತ್ತದೆ ಬೇಗ ಬೇಗ ಏನು ಬೇಕು ಹೇಳಿ ಎಂದ.
ಎಸ್ ಪ್ರಯಾಣಿಕರೆ ಎಲ್ಲದಕ್ಕೂ ಹೊಂದಿಕ್ಕೊಳ್ಳುವ ನಾವು, ನೀಡಿದ ದುಡ್ಡಿ ಲಾಭ ಪಡೆಯದ್ದಿದ್ದರೆ ಏನು ಪ್ರಯೋಜನ. ರೈಲ್ವೆಯಲ್ಲಿ ಪ್ರಯಾಣಿಸುವ ಮುನ್ನ ಎಚ್ಚರಿಕೆಯಿಂದ ಪ್ರಯಾಣಿಸಿ.