ಮಳೆಗಾಲದಲ್ಲಿ ಆರೋಗ್ಯ ಕಾಪಾಡುಕೊಳ್ಳುವುದು ಹೇಗೆ ಎಂದು ತಿಳಿಯಿರಿ!!

0
520

ರೋಗಗಳ ಕಾಲ ಮಳೆಗಾಲ..!
ಮಳೆಗಾಲ ಎಂದರೇನೆ ಕಾಯಿಲೆಗಳ ಕಾಲ. ಮುಂಜಾಗ್ರತಾಕ್ರಮಗಳ ಹೊರತಾಗಿಯೂ ಮಳೆಗಾಲದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ಋತುಮಾನಕ್ಕೆ ಅನುಗುಣವಾಗಿ ಪ್ರಾರಂಭವಾಗುವ ಮಳೆಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದುದು ನಮ್ಮ ಕರ್ತವ್ಯ.
ನಿತ್ಯ ಸೇವಿಸುವ ಆಹಾರ ಪದಾರ್ಥಗಳು ಆರೋಗ್ಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸುವುದರಿಂದ ಅವುಗಳ ನಿರ್ದಿಷ್ಟತೆ ಇರಬೇಕಾಗುತ್ತದೆ. ನಿಯಮಿತ ಆಹಾರ ಕ್ರಮ ಹಾಗೂ ಪದಾರ್ಥಗಳ ಆಯ್ಕೆಯಲ್ಲಿ ಕೆಲವು ನಿಯಮಗಳನ್ನು ಪಾಲಿಸಿದಾಗ ಮಳೆಗಾಲದಲ್ಲೂ ಶೀತ, ನೆಗಡಿ, ಜ್ವರ ಸೇರಿದಂತೆ ಸಾಮಾನ್ಯ ಕಾಯಿಲೆಗಳಿಗೂ ತುತ್ತಾಗದೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ.

ಕ್ರಮಗಳು:


* ಮಳೆಗಾಲದಲ್ಲಿ ಆಹಾರ ಸೇವನೆ ಹಿತಮಿತವಾಗಿರಲಿ.
* ಕರಿದ ತಿಂಡಿ ಹಾಗೂ ಜಿಡ್ಡಿನಂತಹ ಆಹಾರ ಪದಾರ್ಥಗಳು ಮಿತವಾಗಿರಲಿ.
* ಸಾಮಾನ್ಯವಾಗಿ ಈ ಋತುಮಾನದಲ್ಲಿ ಜೀರ್ಣಕ್ರಿಯೆ ಸ್ಪಲ್ಪ ನಿಧಾನ. ಹಾಗಾಗಿ ಲಘುವಾದ ಮತ್ತು ಜೀರ್ಣವಾಗುವಂತಹ ಆಹಾರ ಸೇವಿಸುವುದು ಒಳ್ಳೆಯದು.
* ಉರಿಯಲ್ಲಿ ಅಥವಾ ಹಬೆಯಲ್ಲಿ ಬೇಯಿಸಿದ ಆಹಾರ ಪದಾರ್ಥಗಳು, ಹಣ್ಣುಗಳಿಂದ ತಯಾರಾದ ಸಲಾಡ್‍ಗಳು, ತಾಜಾ ಹಣ್ಣುಗಳು, ಹೆಸರುಬೇಳೆ ಕಿಚಡಿ, ಕಾರ್ನ್‍ಗಳನ್ನು ಈ ಅವಧಿಯಲ್ಲಿ ಹೆಚ್ಚು ಬಳಸುವುದು ಉತ್ತಮ.
* ಮಳೆಗಾಲದಲ್ಲಿ ಪಾದಗಳ ರಕ್ಷಣೆಗೆ ಆದ್ಯತೆ ನೀಡಬೇಕಾದುದು ಅಗತ್ಯ. ಮಳೆಗಾಲದಲ್ಲಿ ರೋಗಗಳು ಹರಡುವುದೇ ನಿಂತ ನೀರಿನಲ್ಲಿ ಓಡಾಡಿದಾಗ, ಇಲ್ಲವೇ ಕೆಸರಿನಲ್ಲಿ ಅಡ್ಡಾಡಿದಾಗ ರೋಗಹರಡುವ ಕ್ರೀಮಿಕೀಟಗಳು ಸದ್ದಿಲ್ಲದೆ ನಿಮ್ಮ ದೇಹ ಪ್ರವೇಶಿಸಿ ಅನಾರೋಗ್ಯಕ್ಕೀಡು ಮಾಡಬಹುದು… ಹಾಗಾಗಿ ಮಳೆಗಾಲದಲ್ಲಿ ಪಾದಗಳ ರಕ್ಷಣೆಗೆ ವಿಶೇಷ ಗಮನಹರಿಸುವುದು ಉತ್ತಮ.
* ತಂಪಾದ ವಾತಾವರಣ ನಮ್ಮ ಶರೀರವನ್ನು ಬಹುಬೇಗನೆ ಶೀತ, ನೆಗಡಿ ಇಲ್ಲವೇ ಕೆಮ್ಮಿಗೆ ತುತ್ತಾಗುವಂತೆ ಮಾಡುತ್ತದೆ. ಮಳೆಗಾಲದಲ್ಲಿ ಇವು ಸಾಮಾನ್ಯ. ಹಾಗಾಗಿ ದೇಹದಲ್ಲಿ ಉಷ್ಣತೆ ಹೆಚ್ಚಿಸುವ ಆಹಾರ ಪದಾರ್ಥಗಳನ್ನು ಹೆಚ್ಚು ಬಳಸುವುದು ಉತ್ತಮ. ಮೆಣಸು, ದೊಡ್ಡ ಮೆಣಸು, ಶುಂಠಿ ಇವುಗಳನ್ನು ಹೆಚ್ಚೆಚ್ಚು ಬಳಸಿ.